ತ್ರಿವಿಕ್ರಮನಿಗೆ ಮಣ್ಣು ಮುಕ್ಕಿಸಿದ ಕಂಗನಾ ರಣಾವತ್; ಬಾಲಿವುಡ್ ಸೆಲೆಬ್ರಿಟಿಗಳ ಲಕ್ ಬದಲಾಯ್ತು!

author-image
Veena Gangani
Updated On
ತ್ರಿವಿಕ್ರಮನಿಗೆ ಮಣ್ಣು ಮುಕ್ಕಿಸಿದ ಕಂಗನಾ ರಣಾವತ್; ಬಾಲಿವುಡ್ ಸೆಲೆಬ್ರಿಟಿಗಳ ಲಕ್ ಬದಲಾಯ್ತು!
Advertisment
  • 6 ಬಾರಿ ಸಿಎಂ ಆಗಿದ್ದ ಖ್ಯಾತ ರಾಜಕಾರಣಿ ಮಗನನ್ನೇ ಸೋಲಿಸಿದ ನಟಿ ಕಂಗನಾ
  • ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ ಹಾಲಿ ಸಂಸದೆ ಹೇಮಾ ಮಾಲಿನಿ
  • ಬಿಜೆಪಿಯ ಸ್ಟಾರ್ ಅಭ್ಯರ್ಥಿ, ಮಲಯಾಳಂ ನಟ ಸುರೇಶ್ ಗೋಪಿಗೆ ಜಯ

2024ರ ಲೋಕಸಭೆ ಚುನಾವಣೆ ಫಲಿತಾಂಶ ಕೊನೆಗೂ ಹೊರ ಬಿದ್ದಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಾಲಿವುಡ್​ ಸ್ಟಾರ್‌ಗಳು ಕಣಕ್ಕೆ ಇಳಿದಿದ್ದರು. ಅದರಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರನೌತ್, ಹೇಮಾ ಮಾಲಿನಿ, ಡಿಂಪಲ್ ಯಾದವ್, ಮೀಸಾ ಭಾರತಿ, ಮಲಯಾಳಂ ನಟ ಸುರೇಶ್ ಗೋಪಿ ಸೇರಿದಂತೆ ಕೆಲವು ಪ್ರಮುಖ ಸ್ಟಾರ್​ ಸೆಲೆಬ್ರಿಟಿಗಳು ಗಮನಾರ್ಹ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

publive-image

ಇದನ್ನೂ ಓದಿ:ರಾಮನ ನೆಲದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ.. ಅಯೋಧ್ಯೆಯಲ್ಲಿ SP​ ಗೆಲ್ಲಲು ಇಲ್ಲಿದೆ ಪ್ರಮುಖ ಕಾರಣ!

ಬಾಲಿವುಡ್​ ನಟಿ ಕಂಗನಾ ರಣಾವತ್​ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ನಟಿ ಕಂಗನಾ ರಣಾವತ್ ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಮೊದಲ ಸ್ಪರ್ಧೆಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಗೆದ್ದು ಬೀಗಿದ್ದಾರೆ. ಮೈನಪುರಿಯ ಹಾಲಿ ಸಂಸದೆ ಡಿಂಪಲ್ ಯಾದವ್ (ಸಮಾಜದವಾದಿ ಪಕ್ಷ) ಅವರು ಬಿಜೆಪಿಯ ಜಯವೀರ್ ಸಿಂಗ್ ವಿರುದ್ಧ 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಲಯಾಳಂ ಹಿರಿಯ ನಟ ಮತ್ತು ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಅವರು ಸಿಪಿಐ ಅಭ್ಯರ್ಥಿ ಸುನೀಲ್‌ಕುಮಾರ್ ಅವರನ್ನು ಹಿಂದಿಕ್ಕಿ 69,183 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

publive-image

ಇತ್ತ, ಮಥುರಾದಿಂದ ಹಾಲಿ ಸಂಸದೆ ಹೇಮಾ ಮಾಲಿನಿ ಅವರು ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಧಂಗರ್ ವಿರುದ್ಧ 2.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಸ್ಟಾರ್ ಅಭ್ಯರ್ಥಿ ಮತ್ತು ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಲೋಕಸಭಾ ಸ್ಥಾನವನ್ನು ಗೆದ್ದುಕೊಂಡಿದೆ. ಜೊತೆಗೆ ಆಂಧ್ರಪ್ರದೇಶದ ಪಿಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ! 

ಉತ್ತರ ಪ್ರದೇಶದ ಮೀರತ್‌ನಲ್ಲಿ ನಟ ಅರುಣ್ ಗೋವಿಲ್ ಜೊತೆಗೆ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಅಸನ್ಸೋಲ್ ಕ್ಷೇತ್ರದಲ್ಲಿ 63,000 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಅವರ ಪುತ್ರಿ ಮೀಸಾ ಭಾರತಿ ಅವರು ಕೇಂದ್ರ ಸಚಿವ ಮತ್ತು ಬಿಹಾರದ ಪಾಟಲಿಪುತ್ರದಿಂದ ಹಾಲಿ ಸಂಸದರ ವಿರುದ್ಧ ಸುಮಾರು 50 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment