ನಂಗೂ ಪ್ರೀತಿ ಆಗಿತ್ತು ಆದ್ರೆ.. ಲವ್​ ಬ್ರೇಕಪ್ ಬಗ್ಗೆ ಫಸ್ಟ್ ಟೈಂ ಮಾತಾಡಿದ ಚೈತ್ರಾ ಜೆ ಆಚಾರ್; ಹೇಳಿದ್ದೇನು?

author-image
Veena Gangani
Updated On
ನಂಗೂ ಪ್ರೀತಿ ಆಗಿತ್ತು ಆದ್ರೆ.. ಲವ್​ ಬ್ರೇಕಪ್ ಬಗ್ಗೆ ಫಸ್ಟ್ ಟೈಂ ಮಾತಾಡಿದ ಚೈತ್ರಾ ಜೆ ಆಚಾರ್; ಹೇಳಿದ್ದೇನು?
Advertisment
  • ಗ್ಲಾಮರಸ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್ ಕೊಡ್ತಾ ಇರ್ತಾರೆ ಚೈತ್ರಾ!
  • ಕನ್ನಡದ ಆಲಿಯಾ ಭಟ್‌ ಅಂತಲೇ ಫೇಮಸ್​ ಆಗಿರೋ ನಟಿ ಇವರು​​
  • ಅಭಿಮಾನಿ ಕೇಳಿದ ಪ್ರಶ್ನೆಗೆ ಶಾಕಿಂಗ್​ ಉತ್ತರ ಕೊಟ್ಟ ಟೋಬಿ ನಟಿ

ಸ್ಯಾಂಡಲ್​​ವುಡ್ ನಟಿ ಚೈತ್ರಾ ಜೆ ಆಚಾರ್ ಅವರು ಒಂದಲ್ಲಾ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಌಂಡ್ ಗ್ಲಾಮರಸ್​​ ಲುಕ್​ನಲ್ಲೇ ಕಾಣಿಸೋ ಮೂಲಕ ಹಾಟ್​ ಟಾಪಿಕ್​ನಲ್ಲಿ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ನಟಿ ಚೈತ್ರಾ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದರ ಮಧ್ಯೆ ಅಭಿಮಾನಿ ಕೇಳಿದ ಪ್ರಶ್ನೆಗೆ ನಟಿ ಶಾಕಿಂಗ್​​ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಕನ್ನಡತಿ ರಂಜನಿ ಕೈ ಹಿಡಿಯಲಿರೋ ಹುಡುಗ ಯಾರು? ಸಾಗರ್‌ ಭಾರದ್ವಾಜ್ ಹಿನ್ನೆಲೆ ಏನು? 

ಇದನ್ನೂ ಓದಿ:ಮೈ ಚಳಿ ಬಿಟ್ಟು ಬಿಕಿನಿಯಲ್ಲಿ ಕಾಣಿಸಿಕೊಂಡ ಚೈತ್ರಾ ಜೆ. ಆಚಾರ್; ಹಾಟ್‌ ಫೋಟೋಸ್​ ನೋಡಿ ಫ್ಯಾನ್ಸ್‌ ಶಾಕ್!

ಹೌದು, 2019ರಲ್ಲಿ ಮಹೇಶ್ ಗೌಡ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಮಹಿರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚೈತ್ರಾ ಜೆ ಆಚಾರ್ ಸದ್ಯ ಸ್ಟಾರ್​ ನಟಿಯಾಗಿ ಮಿಂಚುತ್ತಿದ್ದಾರೆ. ಆದರೆ ತಮ್ಮ ರಿಯಲ್​ ಲೈಫ್​ನಲ್ಲಿ ಆದ ಲವ್​ ಬಗ್ಗೆ ಹೇಳಿಕೊಂಡಿದ್ದಾರೆ. ಅದೆಷ್ಟೋ ವರ್ಷಗಳ ಕಾಲ ಪ್ರೀತಿ ಮಾಡಿ ಬ್ರೇಕಪ್​ ಆಗಿರುವ ವಿಚಾರದ ಬಗ್ಗೆ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

publive-image

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನನಗೆ ಪ್ರಶ್ನೆ ಕೇಳಿ (ask me question) ಅಂತ ಹೇಳಿದ್ದರು. ಹೀಗಾಗಿ ಅವರ ಅಭಿಮಾನಿಗಳು ನಟಿಗೆ ಕೆಲವೊಂದು ಪಶ್ನೆ ಕೇಳಿದ್ದಾರೆ. ಅದರಲ್ಲಿ ಅಭಿಮಾನಿಗಳು ಅಕ್ಕ ನಿಮ್ಮ ಮದುವೆ ಯಾವಾಗ, ಕನ್ನಡದಲ್ಲಿ ನಿಮ್ಮ ನೆಚ್ಚಿನ ಹೀರೋ ಯಾರು?, ಕಿಚ್ಚ ಸುದೀಪ್​ ಅವರ ಊರ ಕಣ್ಣು ಯಾರ ಕಣ್ಣು ಹಾಡು ಹಾಡಿ, ಯಾರ ಮೇಲಾದರೂ ಲವ್ ಆಗಿತ್ತಾ? ನೀವು ಮದುವೆಯಾಗಿದ್ದೀರಾ ಅಂತೆಲ್ಲಾ ಕೇಳಿದ್ದಾರೆ.

publive-image

ಅದಕ್ಕೆ ಉತ್ತರ ಕೊಟ್ಟ ನಟಿ, ಯಾರ ಮೇಲಾದರೂ ಲವ್ ಆಗಿತ್ತಾ ಎಂಬ ಪ್ರಶ್ನೆಗೆ ನಟಿ ಹೌದು, ಆಗಿತ್ತು, ಬ್ರೇಕ್​ ಅಪ್ ಕೂಡ ಆಯ್ತು ಅಂತ ಉತ್ತರ ಕೊಟ್ಟಿದ್ದಾರೆ. ಸದ್ಯ ನಟಿ​ ಬೋಲ್ಡ್​ ಹಾಗೂ ಬೋಲ್ಡ್​ ಲುಕ್​ನಲ್ಲಿ  ಕ್ಯಾಮೆರಾಗೆ ಪೋಸ್​ ಕೊಡುತ್ತಲೇ ಇರುತ್ತಾರೆ. ಅದೇ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಡ್ಯಾನ್ಸ್​, ಅಭಿನಯ ಎಂದು ಕಾಲ ಕಳೆಯುವ ನಟಿಯ ಲವ್​ ಬ್ರೇಕಪ್ ವಿಚಾರ ಕೇಳಿ ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment