newsfirstkannada.com

ನಟನೆ ಜೊತೆಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸ್.. SSLC ಪರೀಕ್ಷೆಯಲ್ಲಿ ಅಂಕಿತಾ ಜಯರಾಂ ತೆಗೆದ ಮಾರ್ಕ್ಸ್ ಎಷ್ಟು? 

Share :

Published May 9, 2024 at 7:59pm

  ಸ್ಯಾಂಡಲ್​ವುಡ್​ ಸ್ಟಾರ್​ ನಟ, ನಟಿಯರ ಜೊತೆ ಚಿಕ್ಕ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಅಂಕಿತಾ

  ಶೂಟಿಂಗ್​ನ ಬ್ಯುಸಿ ನಡುವೆಯೂ ನಟಿ ಅಂಕಿತಾ ಜಯರಾಮ್​ ಫಸ್ಟ್​ ಕ್ಲಾಸ್​ನಲ್ಲಿ ಪಾಸ್!

  ಸಾಮಾಜಿಕ ಜಾಲತಾಣದಲ್ಲಿ ನಟಿ ಅಂಕಿತಾ ಜಯರಾಮ್​ಗೆ ಶುಭಾಶಯಗಳ ಮಹಾಪೂರ

ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಪ್ರಣೀತಾ ಪಾತ್ರದಲ್ಲಿ ನಟಿಸುತ್ತಿರುವ ಅಂಕಿತಾ ಜಯರಾಂ ಅವರು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಹೌದು, ಬಾಲ ನಟಿ ಅಂಕಿತಾ ಜಯರಾಮ್ ಈಗಾಗಲೇ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇದನ್ನೂ ಓದಿ: VIDEO: ಆ ಸ್ಪೆಷಲ್ ಲೆಟರ್​ ಓದಿ ಗಳ ಗಳನೇ ಕಣ್ಣೀರಿಟ್ಟ ನಟಿ ಕೃತಿಕಾ ರವೀಂದ್ರ; ಏಕೆ ಗೊತ್ತಾ?

ಬ್ಯಾಕ್‌ ಟು ಬ್ಯಾಕ್ ಶೂಟಿಂಗ್‌ ಬ್ಯುಸಿಯ ನಡುವೆಯೂ ಬಾಲ ನಟಿ ಅಂಕಿತಾ ಜಯರಾಮ್ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಫಸ್ಟ್​ ಕ್ಲಾಸ್ ಬಂದಿದ್ದಾರೆ. ಹೌದು, ಬಾಲ ನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಮ್ SSLC ಪರೀಕ್ಷೆಯಲ್ಲಿ 625ಕ್ಕೆ 589 ಅಂಕವನ್ನು ಪಡೆದುಕೊಂಡು ಸಖತ್​ ಖುಷಿಯಲ್ಲಿದ್ದಾರೆ. ಈ ಸಂತಸದ ವಿಚಾರವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಎಸ್​ಎಸ್​ಎಲ್​ಸಿಯ ಫಲಿತಾಂಶದ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ ಈ ಬಾಲ ನಟಿ. ಇದರ ಜೊತೆಗೆ ಭಗವಂತನ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯ ಶುಭ ಹಾರೈಕೆಯಿಂದ ಎಸ್​ಎಸ್​ಎಲ್​ಸಿಯಲ್ಲಿ ಶೇಕಡ 95% ಅಂಕ ಪಡೆದು ಡಿಸ್ಟಿಂಕ್ಷನ್​ನಲ್ಲಿ ತೇರ್ಗಡೆಯಾಗಿದ್ದೇನೆ ಅಂತ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಗುವಿನ ಆಗಮನಕ್ಕೂ ಮುನ್ನ ಬಾಲಿಗೆ ಹಾರಿದ ಮಿಲನಾ ನಾಗರಾಜ್ ದಂಪತಿ; ಫ್ಯಾನ್ಸ್​ಗಳ ಸಲಹೆ ಏನು?

ಸದ್ಯ ಇದೇ ಫೋಟೋವನ್ನು ನೋಡಿದ ನೆಟ್ಟಿಗರು ​ಅಂಕಿತಾ ಜಯರಾಮ್ ಅವರಿಗೆ ಶುಭ ಹಾರೈಸುತ್ತಿದ್ದಾರೆ. ಶೂಟಿಂಗ್​ ಮಾಡುತ್ತಾ ಈ ರೀತಿ ಓದಿದ್ದೀರಾ ಅಂದ್ರೆ ನಿಮ್ಮ ಜೀವನದಲ್ಲಿ ದೊಡ್ಡ ಸಾಧನೆ ಮಾಡುತ್ತೀರಾ. ಇನ್ನು, ಬಾಲ ನಟಿ ವಿಜಯ್ ರಾಘವೇಂದ್ರ ಅಭಿನಯದ ಹಕೂನ ಮಟಾಟ ಎಂಬ ಸೀರಿಸ್‌ನಲ್ಲೂ ಅಂಕಿತಾ ಬಣ್ಣ ಹಚ್ಚಿದ್ದಾರೆ. ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ನಟಿಸಿದ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ನಟರ ಜೊತೆಗೆ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಾರಾ ವಜ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟನೆ ಜೊತೆಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸ್.. SSLC ಪರೀಕ್ಷೆಯಲ್ಲಿ ಅಂಕಿತಾ ಜಯರಾಂ ತೆಗೆದ ಮಾರ್ಕ್ಸ್ ಎಷ್ಟು? 

https://newsfirstlive.com/wp-content/uploads/2024/05/Jayarama-Ankitha.jpg

Load More