Advertisment

ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ

author-image
Ganesh
Updated On
ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ
Advertisment
  • ಚಂದುಗೌಡ ಕೂಡ ಅಪಘಾತಕ್ಕೆ ಒಳಗಾದ ಕಾರಿನಲ್ಲಿದ್ದರು
  • ಉಮ್ಮಡಹಳ್ಳಿಯಲ್ಲಿ ಪವಿತ್ರ ಜಯರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ
  • ಕಾರು ಅಪಘಾತದ ಬಗ್ಗೆ ವಿವರಿಸಿದ ಸ್ನೇಹಿತ ಚಂದುಗೌಡ

ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿರುವ ಕಿರುತೆರೆ ನಟಿ ಪವಿತ್ರ ಜಯರಾಮ್ ಅವರ ಅಂತಿಮ ದರ್ಶನ ನಡೆಯುತ್ತಿದೆ. ಉಮ್ಮಡಹಳ್ಳಿಯಲ್ಲಿ ಪವಿತ್ರ ಜಯರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಕಿರುತೆರೆ ನಟ ಚಂದುಗೌಡ ಅವರು ಅಗಲಿದ ನಟಿಯ ಅಂತಿಮ ದರ್ಶನ ಪಡೆದುಕೊಂಡರು.

Advertisment

ಚಂದು ಗೌಡ ರಸ್ತೆ ಅಪಘಾತದ ವೇಳೆ ಪವಿತ್ರ ಜಯರಾಮ್ ಜೊತೆ ಇದ್ದರು. ಅಂತಿಮ ದರ್ಶನ ಪಡೆದು ಮಾತನಾಡಿದ ಅವರು.. ಪವಿತ್ರ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಎಲ್ಲರೊಡನೆ ಉತ್ತಮ‌ ಒಡನಾಟ ಹೊಂದಿದ್ದರು. ಮೊನ್ನೆಯಷ್ಟೆ ಮದರ್ಸ್ ಡೇ‌ಗೆ ಕಾರ್ಯಕ್ರಮ ಮಾಡಲಾಗಿತ್ತು. ಈಗ ಈ ಘಟನೆ ಜರುಗಿರೋದು ನೋವು ತಂದಿದೆ. ಅಪಘಾತದಲ್ಲಿ‌ ಯಾರದ್ದು ತಪ್ಪು ಎಂದು ಹೇಳೋಕೆ‌ ಆಗಲ್ಲ. ಘಟನೆ ಆಗಿ ನಡೆದು ಹೋಗಿದೆ. ಪವಿತ್ರ ಅವರ ಆತ್ಮಕ್ಕೆ ಶಾಂತಿ‌ ದೊರಕಲಿ ಎನ್ನುತ್ತ ಭಾವುಕರಾದರು.

ಇದನ್ನೂ ಓದಿ:ಭಾರೀ ಗಾಳಿ ಮಳೆಗೆ ನಡು ರಸ್ತೆಯಲ್ಲಿ ಪಲ್ಟಿ ಹೊಡೆದ ಕಾರು.. ಮಳೆ ಮಾಡಿದ ಅನಾಹುತ..!

ಅಪಘಾತದ ಬಗ್ಗೆ ವಿವರಿಸಿದ ಸ್ನೇಹಿತ ಚಂದು.. ಪವಿತ್ರ ಜೊತೆ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದೇವು. ನಾವು ಬೆಂಗಳೂರಿಂದ ಹೈದ್ರಾಬಾದ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದೇವು. ಪ್ರಯಾಣದ ವೇಳೆ ಭಾರೀ ಮಳೆ ಸುರಿಯುತ್ತಿತ್ತು. ಮಳೆಯಿಂದ ಮೂರು ಗಂಟೆಗಳ ಕಾಲ ಟ್ರಾಫಿಕ್ ಉಂಟಾಗಿತ್ತು‌. ಇದರಿಂದ ಸುಸ್ತು ಆಗಿತ್ತು, ನಿದ್ರೆಯೂ ಬರುತ್ತಿತ್ತು.

Advertisment

ಇದನ್ನೂ ಓದಿ:RCB ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬೆಂಗಳೂರು ತಂಡಕ್ಕೆ ಇರುವ ದಾರಿ ಅದೊಂದೇ..!

ನಾವೂ ಕಾರಿನಲ್ಲಿ ನಾಲ್ಕು ಮಂದಿ ಇದ್ವಿ. ಪವಿತ್ರರ ಸೋದರಿಯ ಮಗಳು, ನಾನು, ಪವಿತ್ರ, ಡ್ರೈವರ್ ಕಾರಿನಲ್ಲಿದ್ದೇವು. ನಮ್ಮ ಕಾರಿನ ಬಳಿ ವೇಗವಾಗಿ ಬಸ್ ಬಂತು‌. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿ ಆಯ್ತು‌. ಬ್ರೇಕ್ ಹಾಕಿದ ಹಿನ್ನಲೆ ಬಲಗಡೆಗೆ ಕಾರು ವಾಲಿತು. ಇದರಿಂದ ಎದುರುಗಡೆ ಇದ್ದ ಬಸ್​ಗೆ ನಮ್ಮ ಕಾರು ಡಿಕ್ಕಿ ಹೊಡೆದಿದೆ. ನನಗೆ ಕೈ ಪೆಟ್ಟಾಗಿತ್ತು, ಪವಿತ್ರ ಬಿಟ್ಟು ಬೇರೆಯಾರಿಗೂ ಏಟಾಗಿರಲಿಲ್ಲ.

ಇದನ್ನೂ ಓದಿ:ಮತ್ತೆ ಮ್ಯಾಚ್​ ಫಿಕ್ಸಿಂಗ್ ಆರೋಪ.. CSK ಬ್ಯಾನ್​​ಗೆ ಆಗ್ರಹಿಸಿದ ಫ್ಯಾನ್ಸ್..! ಏನಿದು ಅನುಮಾನ

Advertisment

publive-image

ಆ ವೇಳೆ ಪವಿತ್ರ ಉಸಿರುಗಟ್ಟಿ ಏನಾಯ್ತು, ಏನಾಯ್ತು ಎಂದು ಕೇಳಿದ್ರು. ಆಗಲೇ ಪವಿತ್ರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ರು‌. ಆಗ ನಮಗೆ ಯಾವುದೇ ಆ್ಯಂಬುಲೆನ್ಸ್ ಸಿಗಲಿಲ್ಲ. ಆ್ಯಂಬುಲೆನ್ಸ್ ಸಿಗದಿರೋದೇ ಪವಿತ್ರ ಸಾವಿಗೆ ಕಾರಣ. 20 ನಿಮಿಷ ತಡವಾಗಿ ಆ್ಯಂಬುಲೆನ್ಸ್ ಬಂತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ವಿ. ವೈದ್ಯರು ಬ್ರೈನ್ ಸ್ಟ್ರೋಕ್ ಆಗಿದೆ ಎಂದು ತೆಲುಗು ನಟ ಚಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment