newsfirstkannada.com

×

ರಣವೀರ್​ ಕೆನ್ನೆಗೆ 15 ಬಾರಿ ಬಾರಿಸಿದ ಕರೀನಾ ಕಪೂರ್​! ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು ಅಂದರೆ..

Share :

Published September 19, 2024 at 9:46am

Update September 19, 2024 at 9:50am

    ಬಾಲಿವುಡ್​ ಬೆಬೋ ಕರೀನಾ ಕಪೂರ್​ರಿಂದ ಕಪಾಳಮೋಕ್ಷ

    ಒಂದೆರಡಲ್ಲ 15 ಬಾರಿ ರಣವೀರ್​ ಕಪಾಳಕ್ಕೆ ಬಾರಿಸಿದ್ದ ನಟಿ

    ನಾನು ನಿಜವಾಗಿಯೂ ಕಪಾಳಮೋಕ್ಷ ಮಾಡಲ್ಲ ಎಂದ ಕರೀನಾ

ಬಾಲಿವುಡ್​ ಬೆಬೋ ಕರೀನಾ ಕಪೂರ್​​ ಖಾನ್​ ಅವರ ‘ದಿ ಬಂಕಿಗ್ಹಾಮ್​​ ಮರ್ಡರ್ಸ್​​’ ಚಿತ್ರ ಚಿತ್ರಮಂದಿರ ಮರು ಬಿಡುಗಡೆಗೊಂಡಿದೆ. ಇದರಲ್ಲಿ ಭಾರತೀಯ ಮೂಲದ ಬ್ರಿಟಿಷ್​ ಪತ್ತೆದಾರಿ ಪಾತ್ರವನ್ನು ಕರೀನಾ ನಿರ್ವಹಿಸಿದ್ದಾರೆ. ಆದರೀಗ ಈ ಸುದ್ದಿಯ ಜೊತೆಗೆ ಕರೀನಾ ನಟ ರಣವೀರ್ ಕೆನ್ನೆಗೆ ಬಾರಿಸಿದ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಏನಿದು ಸಂಗತಿ? ಇಲ್ಲಿದೆ ಓದಿ.

ಕರೀನಾ ಬಹಳ ಇಷ್ಟಪಟ್ಟು ‘ದಿ ಬಂಕಿಂಗ್ಹಾಮ್​ ಮರ್ಡರ್ಸ್​​​’ನಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಣ ಕ್ಷೇತ್ರಕ್ಕೂ ನಟಿ ಕಾಲಿಟ್ಟಿದ್ದರು. ಹನ್ಸಲ್​ ಮೆಹ್ತಾ ನಿರ್ದೇಶನದ ಈ ಸಿನಿಮಾ ಮೂಡಿಬಂದಿದೆ. ಜೊತೆಗೆ ಈ ಸಿನಿಮಾದ ನಿರ್ಮಾಣದಲ್ಲೂ ಕರೀನಾ ಕೊಡುಗೆ ಇದೆ. ಆದರೆ ಬಾಕ್ಸ್​ ಆಫೀಸಿನಲ್ಲಿ ಈ ಸಿನಿಮಾ ಅಷ್ಟೇನು ಸಕ್ಸಸ್​​ ಕಾಣದಿದ್ದರೂ ಕರೀನಾ ನಟನೆ ಮಾತ್ರ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಅಂದಹಾಗೆಯೇ ಈ ಸಿನಿಮಾ ಸೆಟ್​ನಲ್ಲಿ ಕರೀನಾ ಕಪೂರ್​​ ಬಾಣಸಿಗ ರಣ್​ವೀರ್​ ಬ್ರಾರ್​ ಅವರಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರಂತೆ.

ಇದನ್ನೂ ಓದಿ: VIDEO: ರಜನಿ ‘ಕೂಲಿ’ ಸಿನಿಮಾದ ದೃಶ್ಯ ಲೀಕ್​​.. ನಾಗಾರ್ಜುನರ ಹೊಸ ಅವತಾರ ಕಂಡು ಫ್ಯಾನ್ಸ್​​ ಶಾಕ್​​

‘ದಿ ಬಂಕಿಂಗ್ಹ್ಯಾಮ್​​ ಮರ್ಡರ್ಸ್​’ ಚಿತ್ರದಲ್ಲಿ ದಲ್ಜೀತ್​ ಕೊಹ್ಲಿ ಪಾತ್ರವನ್ನ ಬಾಣಸಿಗ ರಣ​​ವೀರ್​ ಬ್ರಾರ್​ ಮಾಡಿದ್ದಾರೆ. ಒಂದು ದೃಶ್ಯದ ಚಿತ್ರೀಕರಣದ ವೇಳೆ ಕರೀನಾ ಕಪಾಳ ಮೋಕ್ಷ ಮಾಡಬೇಕಾದ ಸನ್ನಿವೇಶವಿತ್ತು. ಆದರೆ ಅದನ್ನು ಮಾಡಲು ಕರೀನಾ ಹಿಂಜರಿದರು ಎಂದು ರಣವೀರ್​​ ಹೇಳಿದ್ದಾರೆ. ‘ನಾನು ನಿಜವಾಗಿಯೂ ಕಪಾಳಮೋಕ್ಷ ಮಾಡಲ್ಲ ಎಂದು ಕರೀನಾ ಪದೇ ಪದೇ ಹೇಳಿದ್ದರು’ ಎಂದು ಘಟನೆಯನ್ನು ರಣವೀರ್​​ ವಿವರಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ 25 ವರ್ಷ ಪೂರೈಸಿದ ಕರೀನಾ! ಇದೇ ಖುಷಿಯಲ್ಲಿ ಫೋಟೋಶೂಟ್..​​ ಬೆಬೋ ನೋಡಿ ದಂಗಾದ ಹುಡುಗರು

ರಣವೀರ್​ ಬ್ರಾರ್​ ಮತ್ತ ಕರೀನಾ ಕಫೂರ್
ರಣವೀರ್​ ಬ್ರಾರ್​ ಮತ್ತ ಕರೀನಾ ಕಫೂರ್

ದೃಶ್ಯಕ್ಕೆ ತಕ್ಕಂತೆ ಕರೀನಾ ಅವರು ರಣವೀರ್​ ಅವರನ್ನು ಮುಟ್ಟದೆ ಕಪಾಳಮೋಕ್ಷ ಮಾಡಿದ್ದಾರೆ. ಅದರೆ ಇದಕ್ಕಾಗಿ 15 ಶಾಟ್​​ ತೆಗೆದುಕೊಂಡಿದ್ದಾರೆ. ಕೊನೆಗೆ 15ನೇ ಶಾಟ್​ ಓಕೆ ಆಗಿದೆ. ಕೊನೆಗೂ ಕರೀನಾ ರಣವೀರ್​ ಅವರನ್ನು ಮುಟ್ಟದೆ ಕಪಾಳಮೋಕ್ಷ ಮಾಡಿದ್ದಾರೆ.

‘ದಿ ಬಂಕಿಂಗ್ಹ್ಯಾಮ್​​ ಮರ್ಡರ್ಸ್​’ ಸಿನಿಮಾ ಈಗಾಗಲೇ ಮರು ಬಿಡುಗಡೆಗೊಂಡು ಥಿಯೇಟರ್​​ನಲ್ಲಿದೆ. ಅದರೆ ಇದಕ್ಕೆ 2018ರಲ್ಲಿ ಮರು ಬಿಡುಗಡೆಗೊಂಡ ‘ತುಂಬದ್’ ಸಿನಿಮಾ ಸ್ಪರ್ಧೆ ನೀಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಣವೀರ್​ ಕೆನ್ನೆಗೆ 15 ಬಾರಿ ಬಾರಿಸಿದ ಕರೀನಾ ಕಪೂರ್​! ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು ಅಂದರೆ..

https://newsfirstlive.com/wp-content/uploads/2024/09/Kareena-Kapoor-3.jpg

Load More