newsfirstkannada.com

ಸೋಮಣ್ಣಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಬಿಜೆಪಿಯಲ್ಲಿ ಅಸಮಾಧಾನ; ದೆಹಲಿಯಲ್ಲಿ ಮಹತ್ವದ ಬೆಳವಣಿಗೆ

Share :

Published June 9, 2024 at 4:34pm

Update June 9, 2024 at 4:38pm

    ಪ್ರಹ್ಲಾದ್ ಜೋಷಿ ಸಂಪರ್ಕಕ್ಕೆ ಸಿಗದ ಬಸವರಾಜ ಬೊಮ್ಮಾಯಿ!

    ಅನಿರೀಕ್ಷಿತವಾಗಿ ವಿ.ಸೋಮಣ್ಣ ಅವರಿಗೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್

    ಲಿಂಗಾಯತ ಕೋಟಾದಲ್ಲಿ ಇಬ್ಬರು ಮಾಜಿ ಸಿಎಂಗಳಿಗೆ ಬಿಗ್ ಶಾಕ್

ನವದೆಹಲಿ: ಸತತ 3ನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಕೆಲವೇ ಗಂಟೆಗಳು ಬಾಕಿ ಇದೆ. ಮೋದಿ ಅವರ ಪದಗ್ರಹಣದ ಜೊತೆಗೆ ಕೇಂದ್ರ ಸಚಿವರಾಗಿ ಯಾರು ಅಧಿಕಾರ ಸ್ವೀಕರಿಸುತ್ತಾರೆ ಅನ್ನೋ ಕುತೂಹಲ ಜೋರಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನೂ ಓದಿ: BREAKING: ಕರ್ನಾಟಕಕ್ಕೆ ಬಂಪರ್‌.. ಮೋದಿ ಕ್ಯಾಬಿನೆಟ್‌ನಲ್ಲಿ ಐವರಿಗೆ ಮಂತ್ರಿ ಸ್ಥಾನ ಫಿಕ್ಸ್‌; ಯಾರ್ ಯಾರು? 

ಮೋದಿ ಪದಗ್ರಹಣಕ್ಕೂ ಮುನ್ನವೇ ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ ಲಭ್ಯವಾಗಿದ್ದು, ಕರ್ನಾಟಕದ ನಾಲ್ವರು ನೂತನ ಸಂಸದರಿಗೆ ಮಂತ್ರಿಗಿರಿ ಒಲಿಯುವ ಸಾಧ್ಯತೆ ಇದೆ. ಮೈತ್ರಿ ಧರ್ಮ ಪಾಲನೆಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಅವರು ಮೋದಿ ಕ್ಯಾಬಿನೆಟ್‌ಗೆ ಆಯ್ಕೆ ಆಗಿದ್ರೆ, ಅಚ್ಚರಿ ಎಂಬಂತೆ ತುಮಕೂರು ಸಂಸದ ವಿ.ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ವಿ.ಸೋಮಣ್ಣ ಅವರು ಕೇಂದ್ರ ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರು ಶಾಕ್ ಆಗುವಂತೆ ಮಾಡಿದೆ. ಅದರಲ್ಲೂ ಲಿಂಗಾಯತ ಕೋಟಾದಲ್ಲಿ ಇಬ್ಬರೂ ಮಾಜಿ ಸಿಎಂಗಳು ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಮೋದಿ ಸಂಪುಟದಲ್ಲಿ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ.

ನೂತನ ಕೇಂದ್ರ ಸಚಿವರ ಆಯ್ಕೆ ಬಳಿಕ ಮಾಜಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದಾರೆ. ದೆಹಲಿಯ ಕರ್ನಾಟಕ ಭವನಕ್ಕೆ ಬಂದ ಜೋಷಿ ಅವರು ಬೊಮ್ಮಾಯಿ ತಂಗಿದ್ದ ಕೊಠಡಿಯ ಮುಂದೆ ಕೆಲ ಹೊತ್ತು ಕಾದು ನಿಂತಿದ್ದರು. ಕೊನೆಗೆ ಕೊಠಡಿಯಲ್ಲಿ ಇಲ್ಲ ಎಂಬ ಮಾಹಿತಿ ತಿಳಿದ ಜೋಷಿ ಅವರು ದೂರವಾಣಿ ಕರೆ ಮಾಡಿ ಎಲ್ಲಿದ್ದಾರೆ ಎಂಬ ಮಾಹಿತಿ ಪಡೆದು ವಾಪಸ್ ತೆರಳಿದ್ದಾರೆ.

ಇದನ್ನೂ ಓದಿ: VIDEO: ‘ಕಾಲ್ ಬಂದಿದ್ದೇ ಬೆಳಗ್ಗೆ 11 ಗಂಟೆಗೆ’- ಘಟಾನುಘಟಿಗಳ ಮಧ್ಯೆ ಸೋಮಣ್ಣಗೆ ಖುಲಾಯಿಸಿದ ಅದೃಷ್ಟ; ಹೇಗೆ ಗೊತ್ತಾ? 

ಯಾರ್ ಯಾರಿಗೆ ಸಚಿವ ಸ್ಥಾನ ಫಿಕ್ಸ್!
ನರೇಂದ್ರ ಮೋದಿ 3.0 ಕ್ಯಾಬಿನೆಟ್‌ನಲ್ಲಿ ರಾಜ್ಯದ ನಾಲ್ವರು ಸಂಸದರಿಗೆ ಮಂತ್ರಿ ಸ್ಥಾನ ಗ್ಯಾರಂಟಿಯಾಗಿದೆ.

  1. ಮಂಡ್ಯ – ಹೆಚ್‌.ಡಿ ಕುಮಾರಸ್ವಾಮಿ
  2. ತುಮಕೂರು – ವಿ. ಸೋಮಣ್ಣ
  3. ಬೆಂಗಳೂರು ಉತ್ತರ – ಶೋಭ ಕರಂದ್ಲಾಜೆ
  4. ಧಾರವಾಡ – ಪ್ರಹ್ಲಾದ್ ಜೋಷಿ

ಮೋದಿ 3.0 ಸರ್ಕಾರದಲ್ಲಿ ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಹೈಕಮಾಂಡ್ ಮೂರು ಸಚಿವ ಸ್ಥಾನ ನೀಡಿದೆ. ಹಳೇ ಮೈಸೂರು ಭಾಗದ 11 ಲೋಕಸಭಾ ಕ್ಷೇತ್ರಗಳಲ್ಲಿ 9 ಕಡೆ ದೋಸ್ತಿ ಪಕ್ಷಗಳಿಗೆ ಜಯಭೇರಿ ಸಿಕ್ಕಿದೆ. ಹೀಗಾಗಿ ಈ ಭಾಗಕ್ಕೆ ಹೆಚ್‌ಡಿಕೆ ಸೇರಿ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರ ಹೊರತಾಗಿ ಕಿತ್ತೂರು ಕರ್ನಾಟಕಕ್ಕೆ ಒಂದು ಸಚಿವ ಸ್ಥಾನ ಅಂದ್ರೆ ಧಾರವಾಡ ಸಂಸದ ಪ್ರಹ್ಲಾದ್ ಜೋಷಿಗೆ ಮತ್ತೆ ಮಂತ್ರಿಭಾಗ್ಯ ಲಭಿಸಿದೆ.
ಸದ್ಯ ಉತ್ತರ ಕರ್ನಾಟಕ ಭಾಗಕ್ಕೆ ಒಂದು ಮಂತ್ರಿ ಸ್ಥಾನ ಸಿಕ್ಕಿದ್ದು, ಕರಾವಳಿ, ಮಧ್ಯ ಕರ್ನಾಟಕ ಭಾಗಕ್ಕೆ ಎರಡನೇ ಹಂತದಲ್ಲಿ ಸಚಿವ‌ ಸ್ಥಾನ ಸಿಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋಮಣ್ಣಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಬಿಜೆಪಿಯಲ್ಲಿ ಅಸಮಾಧಾನ; ದೆಹಲಿಯಲ್ಲಿ ಮಹತ್ವದ ಬೆಳವಣಿಗೆ

https://newsfirstlive.com/wp-content/uploads/2024/06/V-Somanna-Shettar-Bommai.jpg

Load More