/newsfirstlive-kannada/media/post_attachments/wp-content/uploads/2024/06/KARNATAKA-POLICE-2.jpg)
ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಯೂಟ್ಯೂಬರ್​ ಅವಹೇಳಕಾರಿ ವಿಡಿಯೋ ಹಾಕಿದ್ದ. ಈ ಬಗ್ಗೆ ಬೆಂಗಳೂರಿನಲ್ಲಿ ಕೇಸ್​ ದಾಖಲಾಗಿತ್ತು. ದೂರಿನ ಅನ್ವಯ ಆ ಯೂಟ್ಯೂಬರ್​ಗೆ ನೋಟಿಸ್​ ಕೊಡಲು ನೋಯ್ಡಾಗೆ ಹೋದ ನಮ್ಮ ಪೊಲೀಸರೇ ಪೇಚಿಗೆ ಸಿಲುಕಿದ ಬಗ್ಗೆ ವರದಿಯಾಗಿದೆ.
ಯೂಟ್ಯೂಬರ್​ಗೆ ನೋಟಿಸ್​​ ಕೊಡುವ ವಿಚಾರದಲ್ಲಿ ಯಡವಟ್ಟು!
ಕರ್ನಾಟಕ ಪೊಲೀಸರ ಬಗ್ಗೆ ಇಡೀ ದೇಶದಲ್ಲೇ ಹೆಮ್ಮೆ ಇದೆ. ಸುಳಿವೇ ಇಲ್ಲದಂಥ ಹಲವು ಕೇಸ್​ಗಳನ್ನು ಬೇಧಿಸಿ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಅಪರಾಧ ಕೃತ್ಯವೆಸಗಿ ಹೊರ ರಾಜ್ಯಕ್ಕೆ ಹೋಗಿ ತಲೆ ಮರೆಸಿಕೊಂಡವರನ್ನು ಹಿಡಿದು ಎಳೆದುಕೊಂಡು ಬಂದಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಇವೆ. ಉತ್ತರ ಪ್ರದೇಶದ ಯೂಟ್ಯೂಬರ್​ ವಿಚಾರದಲ್ಲಿ ಕರ್ನಾಟಕ ಪೊಲೀಸರು ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ.
ಇದನ್ನೂ ಓದಿ:‘ಮಕ್ಕಳಿಗೆ ಬೈಕ್ ಕೊಡ್ತಿದ್ದೀರಾ..’ ಪೋಷಕರೇ ಇನ್ನಾದರೂ ಪಾಠ ಕಲೀರಿ..!
/newsfirstlive-kannada/media/post_attachments/wp-content/uploads/2024/06/KARNATAKA-POLICE-3.jpg)
ಏನಿದು ಪ್ರಕರಣ.. ನೋಯ್ಡಾಗೆ ಹೋಗಿದ್ದೇಕೆ?
ಉತ್ತರ ಪ್ರದೇಶದ ಪತ್ರಕರ್ತ ಕಮ್​ ಯೂಟ್ಯೂಬರ್​ ಆಗಿರುವ ಅಜೀತ್​ ಭಾರ್ತಿ ಕೆಲದಿನಗಳಿಂದ ರಾಜ್ಯದ ಕಾಂಗ್ರೆಸ್​ ಸರ್ಕಾರ, ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ವಿರುದ್ಧ ಅವಹೇನಕಾರಿ ವಿಡಿಯೋ ಹಾಕಿದ್ದಾರೆಂದು ಬೆಂಗಳೂರಿನ ಹೈಗ್ರೌಂಡ್ಸ್​ ಠಾಣೆಯಲ್ಲಿ ಅಜೀತ್ ಭಾರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಹುಲ್​ ಗಾಂಧಿ ಹೇಳಿಕೆ ಬಗ್ಗೆ ಜನರ ದಾರಿ ತಪ್ಪಿಸುವ ವಿಡಿಯೋ ಹಾಕಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಬಿ.ಕೆ.ಪೊನ್ನಣ್ಣ ಯೂಟ್ಯೂಬರ್​ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಅಜೀತ್​ ಭಾರ್ತಿಗೆ ನೋಟಿಸ್​ ನೀಡಲು ರಾಜ್ಯದ ಮೂವರು ಪೊಲೀಸರು, ನೋಯ್ಡಾ ಪೊಲೀಸರಿಗೆ ಮಾಹಿತಿ ನೀಡದೇ ಮಫ್ತಿಯಲ್ಲಿ ಹೋಗಿದ್ದರು ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:‘ದರ್ಶನ್ ಜೊತೆ ಸೇರಿ ಹಾಳಾದ..’ ಅಯ್ಯೋ ಪಾಪ ಅನಿಸುವ ಹಾಗಿದೆ ದರ್ಶನ್ ಅತ್ಯಾಪ್ತನ ಕತೆ..
ಯೂಟ್ಯೂಬರ್​ ಅಜಿತ್​ ಭಾರ್ತಿ ಮನೆ ಮುಂದೆ ಹೈಡ್ರಾಮಾ!
ಮೂವರು ಕರ್ನಾಟಕ ಪೊಲೀಸರು ಮಸ್ತಿಯಲ್ಲಿ ಅಜೀತ್​ ಭಾರ್ತಿ ಮನೆ ಬಳಿ ನೋಟಿಸ್​ ಕೊಡಲು ಹೋಗಿದ್ದಾರೆ. ಆದ್ರೆ ಅಜೀತ್​ ಭಾರ್ತಿ, ಕರ್ನಾಟಕ ಪೊಲೀಸರಿಗೆ ಮನೆಯೊಳಗೆ ಬರಲು ಪ್ರವೇಶ ನಿರಾಕರಿಸಿದ್ದಾನೆ. ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಯೂಟ್ಯೂಬರ್​ ಮನೆ ಮುಂದೇ ಕರ್ನಾಟಕ ಪೊಲೀಸರು ಮತ್ತು ನೋಯ್ಡಾ ಪೊಲೀಸರ ನಡುವೆ ಮುಖಾಮುಖಿಯಾಗಿದ್ದು, ಹೈಡ್ರಾಮಾವೇ ನಡೆದಿದೆ. ಅನುಮತಿ ಪಡೆಯದ ಕಾರಣ ನೋಯ್ಡಾ ಪೊಲೀಸರು, ಕರ್ನಾಟಕ ಪೊಲೀಸರನ್ನು ತಮ್ಮ ಜೊತೆ ಕರೆದೊಯ್ದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ಅಜೀತ್​ ಭಾರ್ತಿ, ಇದು ನನ್ನನ್ನು ಬೆದರಿಸುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ. ಆದ್ರೆ ಇದನ್ನು ಕರ್ನಾಟಕ ಪೊಲೀಸರು ನಿರಾಕರಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/KARNATAKA-POLICE-3.jpg)
ನಮ್ಮ ಪೊಲೀಸರು ತಪ್ಪೇನೂ ಮಾಡಿಲ್ಲ ಎಂದ ಗೃಹಸಚಿವರು
ಕರ್ನಾಟಕ ಪೊಲೀಸರ ಬಗ್ಗೆ ಆರೋಪ ಕೇಳಿ ಬರ್ತಿದ್ದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್​ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಪೊಲೀಸರು ಅಲ್ಲಿನ ಪೊಲೀಸರಿಗೆ ಮಾಹಿತಿ ಕೊಡಬೇಕಾಗಿತ್ತು, ಆದ್ರೆ ಕೊಟ್ಟಿಲ್ಲ. ವಾರಂಟ್​​ ಇಲ್ಲದೇ ಬಂಧಿಸಬೇಡಿ ಎಂದು ಹೇಳಿ ಕಳಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಇಂತಹ ಘಟನೆ ನಡೆಯುತ್ತವೆ. ನೋಟಿಸ್ ಬಳಿಕವೂ ಆ ಯೂಟ್ಯೂಬರ್ ಬರದೇ ಇದ್ದರೆ ಬಂಧನ ಮಾಡ್ತಾರೆ ಎಂದು ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ.
ಇದನ್ನೂ ಓದಿ:ಜಸ್ಟ್​ ಒಂದೇ ಒಂದು ಮ್ಯಾಚ್​.. ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಾಗಲಿದೆ, ಏನದು..
/newsfirstlive-kannada/media/post_attachments/wp-content/uploads/2024/06/KARNATAKA-POLICE-1.jpg)
ಒಟ್ಟಾರೆ.. ಯಾವುದೇ ಪ್ರಕರಣವಾಗಲಿ.. ಪೊಲೀಸರು ಹೊರ ರಾಜ್ಯಗಳಲ್ಲಿ ವಿಚಾರಣೆ ಅಥವಾ ಕಾರ್ಯಾಚರಣೆ ಮಾಡ್ಬೇಕು ಅಂದ್ರೆ.. ಅಲ್ಲಿನ ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡ್ಬೇಕು. ಆದ್ರೆ ಯೂಟ್ಯೂಬರ್ ಅಜೀತ್​ ಭಾರ್ತಿ​ ವಿಚಾರದಲ್ಲಿ ನಮ್ಮ ರಾಜ್ಯದ ಪೊಲೀಸರು ಯಾಕೆ ಈ ರೀತಿ ಮಾಡಿದ್ರು ಅನ್ನೋದೇ ಕುತೂಹಲ..
ಇದನ್ನೂ ಓದಿ:ಸಾಮೂಹಿಕ ಅ*ಚಾರ.. ಅರೆನಗ್ನ ಸ್ಥಿತಿಯಲ್ಲಿ 1.5 ಕಿಮೀ ಓಡಿಬಂದು ಜೀವ ಉಳಿಸಿಕೊಂಡ ಮಹಿಳೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us