ಕೆರೆಯಂತಾದ ಜಮೀನು, ಧರೆಗುರುಳಿದ 50ಕ್ಕೂ ವಿದ್ಯುತ್​ ಕಂಬಗಳು.. ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು ಒಂದಾ, ಎರಡಾ

author-image
AS Harshith
Updated On
ಕೆರೆಯಂತಾದ ಜಮೀನು, ಧರೆಗುರುಳಿದ 50ಕ್ಕೂ ವಿದ್ಯುತ್​ ಕಂಬಗಳು.. ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು ಒಂದಾ, ಎರಡಾ
Advertisment
  • ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ
  • ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಧಾರಕಾರ ಮಳೆ‌
  • ಬಿಸಿ ಬಿಸಿ ಬಿಸಿಲಿಗೆ ಬಸವಳಿದಿದ್ದ ಉಡುಪಿ ಜನರಿಗೆ ತಂಪೆರೆದ ಮಳೆ

ಅಬ್ಬಾ ಬಿಸಿಲೂ ಬೇಡ, ಆ ಒದ್ದಾಟನೂ ಬೇಡ, ವಾತಾವರಣ ಹೀಗೆ ಇರಲಿ ಅಂತಾ ಕೆಲವರು ಬಯಸುತ್ತಿದ್ರೆ. ಮಳೆ ಬಂದಿದ್ದು ಸಾಕು. ನಾನಾ ಕಷ್ಟಗಳು ಸಾಕು ಅಂತಾ ಕೆಲವರು ಗೊಣಗಾಡ್ತಿದ್ದಾರೆ. ಇನ್ನೂ ಮಳೆ ಆರ್ಭಟಕ್ಕೆ ಎಲ್ಲೆಲ್ಲಿ ಏನ್ ಏನ್​ ಆಯ್ತು ಅನ್ನೋ ಕಂಪ್ಲೀಟ್​ ಡೀಟೇಲ್ ಇಲ್ಲಿದೆ.

ಕರುನಾಡಿನಾದ್ಯಂತ ಪೂರ್ವ ಮುಂಗಾರು ಆರ್ಭಟದಿಂದ ಅವಾಂತರ

ಕರುನಾಡಿನಾದ್ಯಂತ ಭರ್ಜರಿ ಮಳೆ ಬರ್ತಾ ಇದೆ, ನಿನ್ನೆ ರಾತ್ರಿ ಪೂರ್ತಿ ಮಳೆ ಸುರಿದಿದೆ. ಹೀಗೆ ಇಷ್ಟು ದಿನ ಮಳೆಗಾಗಿ ಕಾಯುತ್ತಿದ್ದ ಕನ್ನಡಿಗರಿಗೆ ಮಳೆರಾಯ ಶುಭ ಕೋರಿದ್ದಾನೆ. ಕೆಲವು ಕಡೆಗಳಲ್ಲಿ ಬಿಸಿಲೂ ಬೇಡ, ಹೆಣಗಾಟನೂ ಬೇಡ. ಅಂತಿದ್ದ ಜನರ ಮೊಗದಲ್ಲಿ ವರುಣನ ಆಗಮನ ಸಂತಸ ಮೂಡಿಸಿದ್ರೆ. ಇನ್ನೂ ಹಲವು ಕಡೆಗಳಲ್ಲಿ ಜನರ ಕಣ್ಣುಗಳಲ್ಲಿ ಕಣ್ಣೀರು ತರಿಸಿದೆ.

publive-image

ಚಿಕ್ಕಮಗಳೂರು

ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ‌ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಗಾಳಿ ಸಹಿತ ಸುರಿದ ಮಳೆಯಿಂದಾಗಿ ಪ್ರವಾಸಿಗರು ಹಾಗೂ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿಕ್ಕಮಗಳೂರಿನ ಹಲವೆಡೆ ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ರೈತರು ಕೃಷಿಕರಲ್ಲಿ ಸಂತಸ ಮೂಡಿದೆ. ಸತತ ಮಳೆಯಾದರೇ ತುಂಗಾ ನದಿ ಹರಿವು ಕೊಂಚ ಏರಿಕೆಯಾಗೋ ಸಾಧ್ಯತೆ.

ಇದನ್ನೂ ಓದಿ: ಜೀವದ ಗೆಳತಿ ಜತೆ ಹೊಸ ಬಾಳಿಗೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಆಕರ್ಷ್​!

publive-image

ಹುಬ್ಬಳ್ಳಿ-ಧಾರವಾಡ

ಧಾರವಾಡದಲ್ಲಿ ಎರಡು ದಿನ ಬಿಡುವು ಕೊಟ್ಟಿದ್ದ ವರುಣ ನಿನ್ನೆ ಭರ್ಜರಿ ಎಂಟ್ರಿ ಕೊಟ್ಟಿದ್ದ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ವಿದ್ದು, ಇಳಿ ಸಂಜೆ ವೇಳೆಗೆ ಧಾರವಾಡ ನಗರಕ್ಕೆ ವರುಣನ ಆಗಮನವಾಗಿತ್ತು. ಇತ್ತ ಹುಬ್ಬಳ್ಳಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಉಡುಪಿ

ಬಿಸಿ ಬಿಸಿ ಬಿಸಿಲಿಗೆ ಬಸವಳಿದಿದ್ದ ಗುಡುಗು‌ ಸಹಿತ ಉಡುಪಿ ನಗರದ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ವರುಣದೇವ ತಂಪೆರೆದಿದ್ದಾನೆ. ಹವಮಾನ ಇಲಾಖೆ ಮುಂದಿನ ಕೆಲ ದಿನಗಳ ಕಾಲ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ಧೀಡೀರ್ ಸುರಿದ ಮಳೆಗೆ ಕೊಡೆ ಇಲ್ಲದೆ ಉಡುಪಿ ಮಂದಿ ಪರದಾಡಿದ್ರು.

publive-image

ಇದನ್ನೂ ಓದಿ: ಸಂಬಳ ಪಾವತಿ ಮಾಡದ್ದಕ್ಕೆ ಬೀದಿಗಿಳಿದ BMTC ಎಲೆಕ್ಟ್ರಿಕ್‌ ಬಸ್‌ ಚಾಲಕರು; ನ್ಯಾಯಕ್ಕಾಗಿ ಹೋರಾಟ

ಬೆಳಗಾವಿ

ಬೆಳಗಾವಿ ನಗರ ತಾಲೂಕು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದೆ.. ಕಿತ್ತೂರು, ಎಂ.ಕೆ ಹುಬ್ಬಳ್ಳಿ, ಹಿರೇಬಾಗೇವಾಡಿ ಸೇರಿದಂತೆ ಹಲವೆಡೆ ಮಳೆ ಅಬ್ಬರಿಸಿದ್ದು, ಮಳೆಯಿಂದಾಗಿ ವಾಹನ ಸವಾರರ ಪರದಾಡಿದ್ರು.

ಉತ್ತರ ಕನ್ನಡ

ಮಲೆನಾಡಿನ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ಗುಡುಗು, ಸಿಡಿಲು ಗಾಳಿ ಸಹಿತ ಭಾರೀ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಇಳೆಗೆ ವರುಣ ದೇವ ತಂಪೆರೆದ.

ಹಾವೇರಿ

ಹಾವೇರಿ ತಾಲೂಕಿನಾದ್ಯಂತ ಹೆಡಿಗ್ಗೊಂಡ ಗ್ರಾಮದಲ್ಲಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಸುರಿದ ಮಳೆಗೆ ಸುಮಾರು ಇಪ್ಪತ್ತು ಎಕರೆಗೆ ಜಮೀನುಗಳಿಗೆ ಮಳೆ ನೀರು ನುಗ್ಗಿ ಕೆರೆಯಂತಾಗಿತ್ತು. ನಿಂತ ನೀರನ್ನ ಹೊರಹಾಕಲು ರೈತರ ಸಾಹಸ ಪಡಬೇಕಾಯ್ತು. ಅತಿಯಾದ ನೀರು ಹೊರ ಹಾಕಲು ರೈತರು ಜೆಸಿಬಿ ತರಿಸಿ, ಜೆಸಿಬಿ ಮೂಲಕ ಹಳ್ಳಕ್ಕೆ ನೀರು ಹರಿಸಿದ್ರು.

publive-image

ಚಿಕ್ಕೋಡಿ

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಿಪ್ಪಾಣಿ ನಗರ ತತ್ತರ ಭಾರಿ ಮಳೆಗೆ 20 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಪತ್ರಾಸ್ ಶೇಡ್ ಹಾಗೂ ಹಂಚಿನ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಭಾರಿ ಮಳೆ ಗಾಳಿಗೆ 30 ಕ್ಕೂ ಹೆಚ್ಚು ಮರಗಳ ಜೊತೆಗೆ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಕೂಡ ಧರೆಗೆ ಉರುಳಿವೆ. ಮರಗಳು ಬಿದ್ದ ಪರಿಣಾಮ 10 ಕ್ಕೂ ಹೆಚ್ಚು ವಾಹನಗಳು ಸಹ ಜಖಂಗೊಂಡಿವೆ.

ಒಟ್ನಲ್ಲಿ ಇನ್ನೂ 5 ದಿನ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಹವಾಮಾನ ಇಲಾಖೆ ಬಿರುಗಾಳಿ ಸಹಿತ ಮಳೆಯಾರ್ಭಟದ ಮುನ್ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment