Advertisment

‘ಯುವರತ್ನ’ನ ಹಾದಿಯಲ್ಲಿ ಯುವ ಜನತೆ.. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ರಾಜ್ಯ ಸರ್ಕಾರ ಸಿದ್ಧತೆ

author-image
AS Harshith
Updated On
‘ಯುವರತ್ನ’ನ ಹಾದಿಯಲ್ಲಿ ಯುವ ಜನತೆ.. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ರಾಜ್ಯ ಸರ್ಕಾರ ಸಿದ್ಧತೆ
Advertisment
  • ಸಾವಿನ ಬಳಿಕ ನಾಲ್ವರ ಬದುಕಿಗೆ ಕಣ್ಣಾಗಿದ್ದ ಅಪ್ಪು
  • ನೇತ್ರದಾನ‌ ಮಾಡುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆ
  • ದೊಡ್ಮನೆ ಮಗನ ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ಸಿದ್ಧತೆ

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ರಾಜ್ಯ ಸರ್ಕಾರ ಅಪ್ಪು ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ಸಿದ್ಧತೆ ಮಾಡಿಕೊಂಡಿದೆ.

Advertisment

ದಿನದಿಂದ ದಿನಕ್ಕೆ ದೃಷ್ಟಿ ದೋಷದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ‌ ಕಾರಣಗಳಿಂದ ಕಣ್ಣು ಕಳೆದುಕೊಂಡವರು, ಇದೀಗ ಜಗತ್ತನ್ನ ನೋಡಲು ಕಾಯುತ್ತಿದ್ದಾರೆ. ಇಂತವರಿಗೆ ದೃಷ್ಟಿ ಭಾಗ್ಯ ಕಲ್ಪಿಸಲೆಂದೇ ಆರೋಗ್ಯ ಇಲಾಖೆ ನೇತ್ರದಾನ ಹೆಚ್ಚಿಸಲು ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಡಾ.ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ಸಿದ್ಧತೆ ಮಾಡಿಕೊಂಡಿದೆ.

ನೇತ್ರದಾನ‌ ಮಾಡುವವರ ಸಂಖ್ಯೆ ದಿಢೀರ್ ಏರಿಕೆ

ಪುನೀತ್​​ ರಾಜ್​ ಕುಮಾರ್​ ಮಣ್ಣಾಗುವ ಮುನ್ನ ನಾಲ್ವರ ಬದುಕಿಗೆ ಕಣ್ಣಾಗಿದ್ದಾರೆ. ತಾನು ಕಣ್ಣು ಮುಚ್ಚಿದರು ಹಲವರ ಕಣ್ಣು ತೆರೆಯುವಂತೆ ಮಾಡಿದ್ದಾರೆ. ಅಪ್ಪು ನೇತ್ರದಾನ ಮಾಡಿದ ಬಳಿಕ ನೇತ್ರದಾನ‌ ಮಾಡ್ತಿರುವವರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಕೇವಲ ಎರಡೇ ವರ್ಷದಲ್ಲಿ 30 ವರ್ಷದ ದಾಖಲೆ ಬ್ರೇಕ್ ಆಗಿದೆ.

ಯುವಜನರಿಂದ ನೇತ್ರದಾನಕ್ಕೆ ನೋಂದಣಿ

ಅಪ್ಪು ನಡೆಯಿಂದ ನೇತ್ರದಾನ ಮಾಡಲು ಸ್ವಯಂ ಪ್ರೇರಿತರಾಗಿ ಜನರು ಮುಂದೆ ಬರ್ತಿದ್ದಾರೆ. 20 ರಿಂದ 30 ವರ್ಷದ ಯುವಜನರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿಯಾಗುತ್ತಿದೆ. ಕಳೆದ 30 ವರ್ಷದಲ್ಲಿ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡ್ಕೊಂಡವರ ಸಂಖ್ಯೆ 75,000ಕ್ಕೆ ಏರಿಕೆಯಾಗಿದೆ.

Advertisment

2021ರ ಅಕ್ಟೋಬರ್ ನಿಂದ ಇಲ್ಲಿಯವರೆಗೆ ನಾರಾಯಣ ನೇತ್ರಾಲಯದಲ್ಲಿ ನೋಂದಣಿ ಮಾಡ್ಕೊಂಡವರ ಸಂಖ್ಯೆ 1 ಲಕ್ಷದ 40 ಸಾವಿರಕ್ಕೂ ಅಧಿಕ ಎಂಬ ಲೆಕ್ಕಾಚಾರ ಸಿಕ್ಕಿದೆ. ಇದೇ ಕಾರಣಕ್ಕೆ ಅಪ್ಪು ಹೆಸರಲ್ಲಿಯೇ ಐ ಬ್ಯಾಂಕ್ ತೆರೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment