newsfirstkannada.com

ಮಳೆಗೆ ಮರ ಬಿದ್ದು ವೃದ್ಧೆ ಸಾವು, ಜಲಾವೃತವಾದ ಬಸ್ ನಿಲ್ದಾಣ.. ಇದು ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು

Share :

Published May 16, 2024 at 6:37am

Update May 16, 2024 at 6:43am

    ಮೂಲ ಸೌಕರ್ಯ ಇಲ್ಲದೇ ಕೆಸರು ಗದ್ದೆಯಾದ ಬಸ್ ಸ್ಟಾಪ್​

    ಗಾಳಿ, ಮಳೆಗೆ ತೋಟಕ್ಕೆ ತೆರಳಿದ್ದ ವೃದ್ಧೆ ಮೇಲೆ ಮರ ಬಿದ್ದು ಸಾವು

    ಹವಾಮಾನ ಇಲಾಖೆ ಮಳೆ ಬಗ್ಗೆ ನೀಡಿದ ಎಚ್ಚರಿಕೆ ಏನು? ಇಲ್ಲಿದೆ ನೋಡಿ

ಎರಡು ದಿನಗಳ ಗ್ಯಾಪ್ ನಂತ್ರ ಇವತ್ತು ಬೆಂಗಳೂರಿನಲ್ಲಿ ಮಳೆರಾಯನ ಅಬ್ಬರಿಸಲು ಸಿದ್ದನಾಗಿದ್ದಾನೆ. ರಾಜ್ಯದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು ಮರ ಬಿದ್ದು ಸಾವು-ನೋವು ಆಗಿದೆ. ಇತ್ತ ಬೆಂಗಳೂರಿಗರಿಗೆ ಹವಾಮಾನ ಇಲಾಖೆ ಎಚ್ಚರಿಕೆಯೊಂದನ್ನ ಕೊಟ್ಟಿದೆ.

ತೋಟಕ್ಕೆ ತೆರಳಿದಾಗ ಮರ ಉರುಳಿ ಬಿದ್ದು ವೃದ್ಧೆ ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರಕ್ಕೆ ಒಂದು ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಗ್ರಾಮ ಕುಲ್ಕುಂದ ಎಂಬಲ್ಲಿ ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ 65 ವರ್ಷದ ಮೀನಾಕ್ಷಿ ಬಸವನಮೂಲೆ ಎಂಬುವವರ ಮೇಲೆ ಮರ ಉರುಳಿ ಬಿದ್ದು ವೃದ್ಧೆ ಸಾವನ್ನಪ್ಪಿದ್ದಾರೆ. ಮೀನಾಕ್ಷಿ ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ತೆರಳಿದ್ದ ವೇಳೆ ಗಾಳಿ-ಮಳೆಗೆ ಮರ ಉರುಳಿ ಬಿದ್ದು ಘಟನೆ ನಡೆದಿದೆ.

ಕೊಟ್ಟೂರಿನಲ್ಲಿ ಧಾರಾಕಾರ ಮಳೆ, ಬಸ್ ನಿಲ್ದಾಣ ಜಲಾವೃತ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದೆ.. ಮಳೆ ಆರ್ಭಟಕ್ಕೆ ಕೊಟ್ಟೂರಿನ ಬಸ್ ನಿಲ್ದಾಣದಲ್ಲಿ ಎರಡು ಅಡಿಗೂ ಅಧಿಕ ಮಳೆ ನೀರು ನಿಂತು ಜಲಾವೃತವಾಗಿತ್ತು. ಇನ್ನೂ ಆ ನಿತ ಮಳೆ ನೀರಿನಲ್ಲೇ ಪ್ರಯಾಣಿಕರು ಓಡಾಡುತ್ತಾ ಪರದಾಡುವಂತಾಯ್ತು.

ಮೂಲ ಸೌಕರ್ಯ ಇಲ್ಲದೇ ಕೆಸರು ಗದ್ದೆಯಾದ ಬಸ್ ಸ್ಟಾಪ್

ಕಳೆದ ಐದು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ನವೀಕರಣಗೊಳಿಸಲಾಗಿದ್ದ ತಿಪಟೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮೂಲಭೂತ ಸೌಕರ್ಯಗಳಿಲ್ಲದೇ ಕೆಸರು ಗದ್ದೆಯಂತಾಗಿದೆ. ಇನ್ನೂ ಕಾಮಗಾರಿಗಳ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಜನ ಹಿಡಿ ಶಾಪ ಹಾಕಿದ್ದಾರೆ..

ಎರಡು ದಿನಗಳ ನಂತರ ಬೆಂಗಳೂರಿನಲ್ಲಿ ವರುಣನ ಆರ್ಭಟ

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಮಳೆಗಾಗಿ ಕಾಯುತ್ತಿರೋ ಬೆಂಗಳೂರು ಮಂದಿಗೆ ಮೂರು ದಿನಗಳಿಂದ ವರುಣನ ದರ್ಶನವಾಗಿದೆ. ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ರಾತ್ರಿ ಭರ್ಜರಿ ಮಳೆಯಾಗುವ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ 5 ದಿನಗಳಿಂದಲೂ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ತಿಳಿಸಿದೆ.

ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ನೀಡಿದ ಐಎಂಡಿ

ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ಮೇ 20 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ಬೆಂಗಳೂರಿನ ಎಲ್ಲೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಕೂಡ ತಿಳಿಸಿದೆ. ಬನಶಂಕರಿ, ಬಸವನಗುಡಿ, ಜಯನಗರ, ಕೋರಮಂಗಲ, ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರೆಂಟ್​ ಇರಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗಂಡ, ಹೆಂಡತಿ ಮಧ್ಯೆ ಜಗಳ; ಯಾರನ್ನೂ ನಂಬಲೇಬೇಡಿ; ಇಲ್ಲಿದೆ ಇಂದಿನ ಭವಿಷ್ಯ

ಮುಂಗಾರು ಮಳೆ ಪ್ರವೇಶದ ದಿನಾಂಕ ಪ್ರಕಟಿಸಿದ ಹವಾಮಾನ ಇಲಾಖೆ

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯ ಉತ್ತಮವಾಗಿದೆ. ಈ ಮಧ್ಯೆ ಪ್ರಸಕ್ತ ಸಾಲಿನ ಮುಂಗಾರು ಮಾರುತ ಜೂ. 1ರಂದೇ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮೇ 19ರಂದು ನೈಋತ್ಯ ಮುಂಗಾರು ಮಾರುತ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಆಗ್ನೆಯ ಭಾಗ ಹಾಗೂ ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ. ಕೇರಳಕ್ಕೆ ಮುಂಗಾರು ಮಳೆ ಮೇ 31ರಂದು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸಲಿದೆ. ಕೇರಳ ಪ್ರವೇಶಿಸಿದ ಬಳಿಕ ಒಂದೆರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೂ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಪೇಪರ್​ ಗೋಡೌನ್​​ನಲ್ಲಿ ಭೀಕರ ಅಗ್ನಿ ಅವಘಡ.. ಓರ್ವ ಕಾರ್ಮಿಕ ಸಾವು

ಒಟ್ಟಾರೆ, ತಂಪಾದ ವಾತಾವರಣಕ್ಕೆ ಕೆಲ ಜಿಲ್ಲೆಗಳಲ್ಲಿ ಜನ ಫುಲ್ ಖುಷ್ ಆಗಿದ್ರೆ.. ಮತ್ತೆ ಕೆಲವೆಡೆ ಅವಾಂತರ ಸೃಷ್ಟಿಯಾಗಿ ಜನ ಹಿಡಿಶಾಪ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆಗೆ ಮರ ಬಿದ್ದು ವೃದ್ಧೆ ಸಾವು, ಜಲಾವೃತವಾದ ಬಸ್ ನಿಲ್ದಾಣ.. ಇದು ರಾಜ್ಯದಲ್ಲಿ ಮಳೆಯಿಂದಾದ ಅವಾಂತರಗಳು

https://newsfirstlive.com/wp-content/uploads/2024/05/Tumkur-Rain.jpg

Load More