Advertisment

ಬಂದ ಬಂದ ಮಳೆರಾಯ.. ರಸ್ತೆ ಕೆರೆಯಾಯ್ತು, ಬೆಳೆ ನಾಶವಾಯ್ತು.. ಮಳೆಯಿಂದಾದ ಅವಾಂತರ ಒಂದಾ, ಎರಡಾ

author-image
AS Harshith
Updated On
ಬಂದ ಬಂದ ಮಳೆರಾಯ.. ರಸ್ತೆ ಕೆರೆಯಾಯ್ತು, ಬೆಳೆ ನಾಶವಾಯ್ತು.. ಮಳೆಯಿಂದಾದ ಅವಾಂತರ ಒಂದಾ, ಎರಡಾ
Advertisment
  • ಮಳೆಯಿಂದಾಗಿ ಕೊಚ್ಚಿ ಹೋದ ರಸ್ತೆ.. ಬೆಳೆ ಸರ್ವನಾಶ
  • ಮನೆಗೆ ನುಗ್ಗಿದ ನೀರು.. ಕುಟುಂಬ ಬೀದಿ ಪಾಲು
  • ಜೆಸಿಬಿ ಮೇಲೆ ಕುಳಿತುಕೊಂಡು ಹಳ್ಳ ದಾಟಿದ ಜನರು

ಕಳೆದ ವರ್ಷ ಮಳೆ ಕಾಣದೇ ಸುಸ್ತಾಗಿದ್ದ ಜನ, ಮಳೆಗಾಗಿ ಮುಗಿಲತ್ತ ಮುಖಮಾಡಿದ್ರು. ಮಳೆರಾಯ ಬಾರಯ್ಯಾ ಅಂತಾ ಗೋಳಾಡ್ತಿದ್ರು. ಆ ಕೂಗು ಕೇಳಿಸ್ತೋ ಏನೋ. ಗುಡುಗು ಮಿಂಚಿನ ಜೊತೆ ವರುಣನ ಆರ್ಭಟಿಸ್ತಿದ್ದಾರೆ.

Advertisment

publive-image

ಇದೇನು ರಸ್ತೆಯೋ.. ಇಲ್ಲಾ ನದಿಯೋ?

ವಿಜಯಪುರದ ಬಸವನಬಾಗೇವಾಡಿಯಲ್ಲಿ ಭಾರೀ ಮಳೆ ಆಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪರಿಣಾಮ ಬೇರೆ ದಾರಿ ಕಾಣದೇ ಜನ, ಜೆಸಿಬಿ ಮೂಲಕ ಹಳ್ಳ ದಾಟಿದ್ದಾರೆ.

ಇದನ್ನೂ ಓದಿ: ಸಹೋದ್ಯೋಗಿಗಳಿಂದ ಕಿರಿಕಿರಿ; ಅತಿಯಾದ ನಂಬಿಕೆ ಬೇಡ; ಇಲ್ಲಿದೆ ಇಂದಿನ ಭವಿಷ್ಯ

publive-image

ಏನಿದು ಅವಸ್ಥೆ.. ಕಚ್ಚಿ ಹೋಗಿದ್ಯಲ್ಲಾ ರಸ್ತೆ!

ಬೀದರ್​​ನ ಬಸವಕಲ್ಯಾಣದ ಲಾಡವಂತಿ ಗ್ರಾಮದಲ್ಲಿ ಸೃಷ್ಟಿಯಾದ ಅವಾಂತರ ನೀವು ನೋಡ್ಲೇಬೇಕು. ಸುರಿದ ಭಾರೀ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ರೈತರ ಬೆಳೆ ನಾಶವಾಗಿದೆ..

Advertisment

publive-image

ಇದನ್ನೂ ಓದಿ: ಕೇಂದ್ರದ ಸಚಿವರಾಗಿ ಕುಮಾರಣ್ಣ.. ಮಣ್ಣಿನ ಮಗನಿಗೆ ಸಿಗೋ ಖಾತೆ ಯಾವುದು?

ಭಾರೀ ಮಳೆ, ಹಲವೆಡೆ ಅವಾಂತರ, ಕಬ್ಬು ನಾಶ

ನೀವೇ ನೋಡಿ ಇದೇನು ಕೆರೆಯೋ? ರಸ್ತೆಯೋ? ಚಿಕ್ಕೋಡಿಯಲ್ಲಿ ಮಳೆಯ ಅವಾಂತರವೇನೂ ಕಮ್ಮಿ ಇಲ್ಲ ಬಿಡಿ.. ಹಿರೇಕೋಡಿಯ ರೈತರ ಜಮೀನುಗಳಿಗೆ ಮಳೆ ನೀರು ನುಗ್ಗಿ, ಕಬ್ಬನ್ನೆ ನಾಶಪಡಿಸಿದೆ.

publive-image

ಇದನ್ನೂ ಓದಿ: ನೂತನ ಕೇಂದ್ರ ಸಚಿವರಿಗೆ ಪ್ರಧಾನಿ ಮೋದಿ 100 ದಿನದ ಟಾರ್ಗೆಟ್​.. ಏನದು ಹೊಸ ಅಜೆಂಡಾ?

ಮಳೆ ಜೋರು.. ಮನೆಗಳಿಗೆ ನುಗ್ಗಿ ಬಿಡ್ತು ನೀರು

ಬಾಗಲಕೋಟೆಯಲ್ಲೂ ಫುಲ್​ ಜೋರು ಮಳೆ.. ಮನೆಗಳಿಗೆ ನೀರು ನುಗ್ಗಿ ಕುಟುಂಬವೊಂದು ತಾಸುಗಳ ವರೆಗೆ ನೀರಿನಲ್ಲೇ ಕಾಲಕಳೀತು.. ನಗರಸಭೆ ವಿರುದ್ಧ ಹಿಡಿಶಾಪ ಹಾಕಿದ್ರು.

Advertisment

publive-image

ಇದನ್ನೂ ಓದಿ: ಮೋದಿ ಪಟ್ಟಾಭಿಷೇಕಕ್ಕೆ ಥೇಟ್​​ ಅಪ್ಸರೆಯಂತೆ ಬಂದ ಕಂಗನಾ; ವಿಡಿಯೋ ವೈರಲ್

ತುಂಬಿದ ಕೆರೆ.. ಮೀನು ಹಿಡಿದು ಜನರು ಫುಲ್ ಖುಷ್

ಗದಗದಲ್ಲಿ ಉತ್ತಮ ಮಳೆಯಾಗಿದ್ದು, ಕೆರೆಕಟ್ಟೆಗಳೆಲ್ಲಾ ಭರ್ತಿಯಾಗಿವೆ.. ಇನ್ನು ಕೆರೆ ತುಂಬಿದ ಕಾರಣ ರಾಶಿ ರಾಶಿ ಮೀನು ಹಿಡಿದ ಜನ ಫುಲ್ ಖುಷ್ ಆದ್ರು.

publive-image

ಗದಗದ ಹಾರೋಗೇರಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆಯೇ ಕುಸಿದಿದೆ.. ವೃದ್ಧೆ ಸ್ವಲ್ಪದ್ರಲ್ಲೇ ಬಚಾವ್ ಆಗಿದ್ದಾರೆ.. ಪಱಯ ಮನೆ ಕಲ್ಪಿಸಿ ಅಂತ ವೃದ್ಧೆ ಮನವಿ ಮಾಡಿದ್ದಾರೆ.

Advertisment

ಇದನ್ನೂ ಓದಿ: ಯಾತ್ರಾರ್ಥಿಗಳ ಬಸ್ಸಿನ ಮೇಲೆ ಭಯೋತ್ಪಾದಕರ ದಾಳಿ.. ಅನ್ಯಾಯವಾಗಿದೆ 10 ಮಂದಿ ಸಾವು
ಒಟ್ಟಾರೆ, ಮುಂಗಾರು ಶುರುವಿನಲ್ಲೇ ಮೇಘರಾಜನ ಆರ್ಭಟ ಜೋರಾಗಿದೆ. ಸುರಿಯುತ್ತಿರುವ ಭಾರೀ ಮಳೆಯಿಂದ ಅಲ್ಲಲ್ಲಿ ಅಲ್ಲೋಲ್ಲ ಕಲ್ಲೋಲ್ಲವೇ ಸೃಷ್ಟಿಯಾಗಿದೆ.

Advertisment
Advertisment
Advertisment