newsfirstkannada.com

ರಾಜ್ಯದ ಜನರಿಗೆ ಗುಡ್​ನ್ಯೂಸ್​.. ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ..!

Share :

Published May 9, 2024 at 6:36am

Update May 9, 2024 at 7:13am

    ಕೊಡಗಿನಲ್ಲೂ ವರುಣನ ಅಬ್ಬರ, ನೆಲಕ್ಕುರುಳಿದ ಕರೆಂಟ್ ಕಂಬ

    ಅಬ್ಬರಿಸಿದ ಮಳೆಗೆ ಕುಸಿದು ಬಿದ್ದ ಬೃಹತ್ ಮರ, ಆಟೋ ಜಖಂ

    ಮಂಡ್ಯ ಜಿಲ್ಲೆಯ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ

ಸೂರ್ಯನ ಬಿಸಿ ಏಟಿಗೆ ಕಂಗೆಟ್ಟು.. ಬಿಸಿಲೋ ಬಿಸಿಲು.. ಅಂತಿದ್ದ ಜನರಿಗೆ.. ಮೇಘರಾಜನ ಘರ್ಜನೆಯಿಂದ ರಾಜ್ಯದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅದರ ಜತೆಗೆ ಇನ್ನೂ ಖುಷಿ ಪಡಬಹುದಾದ ವಿಷಯ ಅಂದ್ರೆ ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಅಬ್ಬರದ ಮಳೆಯಾಗಲಿದೆ ಅನ್ನೋ ಮುನ್ಸೂಚನೆ ಸಿಕ್ಕಿದೆ.

ಬೆಂಗಳೂರಿನ ಕೆ. ಆರ್ ಸರ್ಕಲ್, ಜೆಸಿ ರಸ್ತೆ, ಮೈಸೂರ್ ಬ್ಯಾಂಕ್ ಸರ್ಕಲ್, ಕೆ.ಆರ್​.ಮಾರ್ಕೆಟ್, ಯಲಹಂಕ, ನೆಲಮಂಗಲ, ಜೆಸಿ ರೋಡ್, ರಾಜಾಜಿನಗರ, ಹುಳಿಮಾವು, ನಾಯಂಡಹಳ್ಳಿ, ಆಡುಗೋಡಿಯಲ್ಲಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.

ಇದನ್ನೂ ಓದಿ‘ಕೋವಿಶೀಲ್ಡ್​ ಲಸಿಕೆ ಪಡೆದ್ರೆ ಡ್ಯಾನ್ಸ್ ಮಾಡುವಂತಿಲ್ಲ’ ಏನಿದು ಹೊಸ ಆತಂಕ..?

ಹೈಗ್ರೌಂಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಮರ ಕುಸಿದು ಬಿದ್ದಿದ್ದು, ಆಟೋ ಜಖಂಗೊಂಡಿದೆ. ಅದೃಷ್ಟವಶಾತ್ ಆಟೋ ಚಾಲಕ ಭಾರಿ ದೊಡ್ಡ ಅಪಾಯದಿಂದ ಬಚಾವ್ ಆಗಿದ್ದಾರೆ. ಆಫಿಸ್​ನಿಂದ ಮನೆಗೆ ಹೋಗೋ ಟೈಂನಲ್ಲೇ ಮಳೆಯಾಗಿದ್ದು, ಕಂಟೋನ್​ಮೆಂಟ್ ರೈಲ್ವೆ ಅಂಡರ್ ಪಾಸ್ ಬಳಿ ಭಾರಿ ಮಳೆಗೆ ನೀರು ನಿಂತಿದೆ. ಇದ್ರಿಂದಾಗಿ ವಾಹನ ಸವಾರರು ರಸ್ತೆ ಮೇಲೆ ಸರ್ಕಸ್​ ಮಾಡುವಂತಾಗಿದೆ.

ಕೋಲಾರದಲ್ಲಿ ಉತ್ತಮ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಕಳೆದೆರಡು ದಿನಗಳಿಂದ ಕೋಲಾರದಲ್ಲಿ ಉತ್ತಮ ಮಳೆಯಾಗಿದ್ದು, ಮುಳಬಾಗಲು, ಶ್ರೀನಿವಾಸಪುರ, ಕೋಲಾರ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಕೆಜಿಎಫ್ ನಗರದ ಅಂಬೇಡ್ಕರ್ ನಗರ, ರಾಬರ್ಟ್ಸನ್ ಪೇಟೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಬಡಾವಣೆ ಜನರು ಪರದಾಡುವಂತಾಗಿದೆ.

ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

ಮಂಡ್ಯ ಜಿಲ್ಲೆಯ ಹಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗಿದ್ದು, ಮಳೆರಾಯ ಬಿಸಿಲಿನ ಶಾಖದಲ್ಲಿ ಬೆಂದಿದ್ದ ಭೂಮಿಗೆ ತಂಪೆರೆದಿದ್ದಾನೆ.. ಮಳೆಯಾದ ವೇಳೆ ತೀವ್ರ ಗಾಳಿ ಬೀಸಿ ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.. ಇನ್ನೂ ಸುರಿದ ಮಳೆಗೆ ಫುಲ್​ ಖುಷ್​ ಆಗಿದ್ರು ಮಂಡ್ಯ ರೈತರು..

ಕೊಡಗು ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಕೆಲವೆಡೆ ಕರೆಂಟ್ ಕಂಬ ನೆಲಕ್ಕುರುಳಿದೆ. ಹಳೇ ತಾಲೂಕು, ನಾಪೋಕ್ಲು, ಕುಂಬಳದಾಳು, ಬೆಟ್ಟಗೇರಿ, ಹೋದವಾಡವಿ ಜನರ ಮುಖದಲ್ಲಿ ಮಳೆರಾಯ ಮಂದಹಾಸ ಮೂಡಿಸಿದ್ದಾನೆ. ಒಟ್ಟಾರೆ, ರಾಜ್ಯದಲ್ಲಿ ಮಳೆ ಶುರುವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ನೆಮ್ಮದಿ ಸಿಕ್ಕಂತಾಗಿದೆ. ಇನ್ನೂ ಒಂದು ವಾರ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಜನರಿಗೆ ಗುಡ್​ನ್ಯೂಸ್​.. ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ..!

https://newsfirstlive.com/wp-content/uploads/2024/05/rain22.jpg

Load More