ರಾಕೇಶ್ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯ್ತು ಈ ಲೇಡಿ ಭಯಾನಕ ಲುಕ್
ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೇಡಿಂಗ್ನಲ್ಲಿದೆ ನಟಿ ಫೋಟೋಶೂಟ್
ಆದಷ್ಟು ಬೇಗ ಇಂತಹ ಪಾತ್ರದ ಮೂಲಕ ತೆರೆಮೇಲೆ ನಿಮ್ಮನ್ನು ನೋಡಬೇಕು ಎಂದ ಫ್ಯಾನ್ಸ್
ಬ್ಯೂಟಿ ವಿತ್ ಬ್ರೈನ್ ಅಂತರಲ್ಲ ಅದಕ್ಕೆ ಪರ್ಫೆಕ್ಟ್ ಎಕ್ಸಾಂಪಲ್ ಎಂದರೆ ಅದು ನಟಿ ಸಾಧನಾ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಕೆಂಡ ಸಂಪಿಗೆ ಸೀರಿಯಲ್ನಲ್ಲಿ ನಟಿ ಖಡಕ್ ಆಗಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಟಿ ಸಾಧನಾ ಪಾತ್ರ ಸೈಲೆಂಟ್ ಆಗಿದ್ದುಕೊಂಡೇ ನಾಯಕಿಯನ್ನು ಬುಗುರಿ ಥರ ಗಿರಿಕಿ ಹೊಡಿಸೋ ತಾಕತ್ ಇರುವಂತಹದ್ದು.
ಇದನ್ನೂ ಓದಿ: ಬರೋಬ್ಬರಿ 124.. ವಿಶ್ವದ ಅತ್ಯಂತ ಹಿರಿಯ ಅಜ್ಜನಿಗೆ ಹುಟ್ಟು ಹಬ್ಬದ ಸಂಭ್ರಮ; ಅಷ್ಟಕ್ಕೂ ಇವರು ತಿನ್ನುವುದಾದರೂ ಏನು?
ಸಾಧನಾ ಅಭಿನಯ ಒಂದು ತೂಕ ಆದ್ರೇ ಅವರ ಲುಕ್ದ್ದೇ ಮತ್ತೊಂದು ಲೆಕ್ಕ. ನಟಿ ತೊಡುವ ಸೀರೆಗಳನ್ನು ನೋಡೋದಕ್ಕೆ ಅಂತ ಸೀರಿಯಲ್ ನೋಡೋ ಅಭಿಮಾನಿಗಳಿದ್ದಾರೆ ಅಂದ್ರೇ ನೀವು ನಂಬುತ್ತೀರಾ? ಹೌದು, ಇದು ನಂಬಲೇಬೇಕಾದ ವಿಚಾರ.
ಸಾಧನಾ ಪಾತ್ರ ಮಾಡ್ತಿರೋ ನಟಿ ಅಮೃತಾ ಅವರದ್ದು ಪಕ್ಕಾ ಕ್ರಿಯೇಟಿವ್ ವ್ಯಕ್ತಿತ್ವ. ಹೊಸ ಹೊಸ ಪ್ರಯೋಗಗಳನ್ನ ಮಾಡ್ತಾನೆ ಇರ್ತಾರೆ. ಅದರಲ್ಲೂ ಅವರ ಫ್ಯಾಷನ್ ಸೆನ್ಸ್ನ ಮೆಚ್ಚದವ್ರೇ ಇಲ್ಲ. ಸದ್ಯ ಇವರ ಬಗ್ಗೆ ಇಷ್ಟೊಂದು ಮಾತ್ನಾಡೋಕೆ ಕಾರಣ ಅವರ ಹೊಸ ಲುಕ್.
ಭಜರಂಗಿ 2 ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ ಅವರು ಟ್ರೈ ಮಾಡಿದ ಲುಕ್ನ ನೆನಪಿಸುವಂತಿದೆ ಅಮೃತಾ ಅವ್ರ ಈ ಹೊಸ ಅವತಾರ. ರಾಕೇಶ್ ಅವರ ಕ್ಯಾಮೆರ ಕಣ್ಣಲ್ಲಿ ಈ ಲೇಡಿ ಭಯಾನಕ ಲುಕ್ ಸೆರೆಯಾಗಿದ್ದಾರೆ. ಕೈಯಲ್ಲಿ ಸಿಂಗಾರ ಹಿಡಿದುಕೊಂಡು ಕೊಟ್ಟ ಪೋಸ್ ಅಂತೂ ಜಸ್ಟ್ ವಾವ್ ಎನ್ನುವಂತಿದೆ. ಅವರ ಆ ಕಣ್ಣಗಳಲ್ಲಿರೋ ಫಯರ್ ನೋಡುಗರನ್ನ ವಿಸ್ಮಿತರನ್ನಾಗಿಸುತ್ತಿದೆ. ಒಟ್ಟಿನಲ್ಲಿ ನಟಿ ಅಮೃತಾ ಅವರ ಈ ಫೋಟೋಶೂಟ್ ನೋಡಿದ ಅಭಿಮಾನಿಗಳು ಆದಷ್ಟು ಬೇಗ ಈ ತರಹದ ಪಾತ್ರದ ಮೂಲಕ ನಿಮ್ಮನ್ನ ತೆರೆಮೇಲೆ ನೋಡಬೇಕು ಅಂತಾ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ