ನಾಗಮಂಗಲ ಪ್ರಕರಣಕ್ಕೆ ಕೇರಳ ಲಿಂಕ್.. ಕಿಡಿಗೇಡಿಗಳು ಹಾರೆ ಬಳಸಿ ಮಾಡಿದ್ದೇನು ಗೊತ್ತಾ..?

author-image
Ganesh
Updated On
ನಾಗಮಂಗಲ ಪ್ರಕರಣಕ್ಕೆ ಕೇರಳ ಲಿಂಕ್.. ಕಿಡಿಗೇಡಿಗಳು ಹಾರೆ ಬಳಸಿ ಮಾಡಿದ್ದೇನು ಗೊತ್ತಾ..?
Advertisment
  • ನಾಗಮಂಗಲ ಗಲಾಟೆ ಪ್ರಕರಣಕ್ಕೆ ಕೇರಳ ಲಿಂಕ್!
  • 74 ಮಂದಿ ವಿರುದ್ಧ FIR, 55 ಆರೋಪಿಗಳ ಬಂಧನ ಆಗಿದೆ
  • ನಾಗಮಂಗಲ ಸಹಜ ಸ್ಥಿತಿಗೆ ಮರಳಿದ್ರು ಸಹ ದಿನಕ್ಕೊಂದು ತಿರುವು

ಮಂಡ್ಯದ ನಾಗಮಂಗಲ ಪ್ರಕರಣದ ತನಿಖೆಯು ಮುಂದುವರೆದಿದ್ದು, ಕಿಡಿಗೇಡಿಗಳ‌ ಕರಾಳ ಮುಖ ಬಗೆದಷ್ಟು ಬಯಲಾಗ್ತಿದೆ. ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡಿದ್ದ ದುಷ್ಟರು ಬೆಂಕಿ ಹಾಕುವ ಮುನ್ನ ಸಿಸಿ ಕ್ಯಾಮೆರಾ ನಾಶ ಮಾಡಿದ್ದಾರೆ. ಅಷ್ಟೆ ಅಲ್ಲ, ಪ್ರಕರಣಕ್ಕೆ ಕೇರಳದ ಲಿಂಕ್ ಒಂದು ಸಿಕ್ಕಿದೆ.

ನಾಗಮಂಗಲ ಪ್ರಕರಣದಲ್ಲಿ 74 ಮಂದಿ ವಿರುದ್ಧ FIR ದಾಖಲಾದ್ರೆ, 55 ಮಂದಿ ಅರೆಸ್ಟ್​​ ಆಗಿದ್ದಾರೆ. ಈ ಪೈಕಿ ಕೇರಳದ ಮಲ್ಲಪುರಂನ ಯೂಸುಫ್, ನಾಸೀರ್​ ಎಂಬ ಇಬ್ಬರ ಬಂಧನ ಕೇರಳದ ಲಿಂಕ್​ನ ಶಂಕೆ ಬಲಗೊಳಿಸ್ತಿದೆ.

ಬೆಂಕಿ ಹಚ್ಚುವ ಮುನ್ನ ಕಿಡಿಗೇಡಿಗಳಿಂದ ಸಿಸಿಟಿವಿ ನಾಶ!
ಈ ಇಬ್ಬರ ಬಂಧನದ ಬಳಿಕ ಕೇರಳದ ಕಿಡಿ ಕರ್ನಾಟಕಕ್ಕೆ ವ್ಯಾಪಿಸಿದೆ ಅನ್ನೋದು ಗೊತ್ತಾಗ್ತಿದೆ. ಇದು ಪೂರ್ವ ನಿಯೋಜಿತ ಕೃತ್ಯ ಅಂತ ಹಿಂದುಪರ ಸಂಘಟನೆಗಳು ಹೇಳ್ತಿವೆ. ವಿಪಕ್ಷ ನಾಯಕ ಅಶೋಕ್​​ ಈ ಪ್ರಕರಣವನ್ನ ಎನ್‌ಐಎಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.. ಆದ್ರೆ, ಸಚಿವ ಚಲುವರಾಯಸ್ವಾಮಿ ಮಾತ್ರ, ಸಮಗ್ರ ಮಾಹಿತಿ ಪಡೆದ ಬಳಿಕ ಉನ್ನತ ತನಿಖೆ ಬಗ್ಗೆ ಸಿಎಂ ಜೊತೆ ಚರ್ಚಿಸೋದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಆಧಾರ್ ಕಾರ್ಡ್​​ ಬಳಕೆದಾರರಿಗೆ ಬಿಗ್​ ರಿಲೀಫ್; UIDAIನಿಂದ ಮಹತ್ವದ ಮಾಹಿತಿ

ಕಿಡಿಗೇಡಿಗಳು ಪ್ರೀ ಪ್ಲಾನ್ ಮಾಡ್ಕೊಂಡಿದ್ರು ಎಂಬುದಕ್ಕೆ ಸಾಕ್ಷಿಯಾಗಿ ಮತ್ತೊಂದು ಸಿಸಿಟಿವಿ ದೃಶ್ಯ ಸಿಕ್ಕಿದೆ. ಅಂಗಡಿಗಳಿಗೆ ಬೆಂಕಿ ಹಚ್ಚುವ ಮುನ್ನ ಸಿಸಿಟಿವಿ ಕ್ಯಾಮೆರಾವನ್ನ ದೊಡ್ಡ ಹಾರೆ ಬಳಸಿ ಹೊಡೆದು ಹಾಕಿದ್ದಾರೆ. ನಂತ್ರ ಇತರೆಡೆ ಬೆಂಕಿ ಹಾಕಿದ್ದಾರೆ ಅಂತ ಗೊತ್ತಾಗಿದೆ..
ಒಟ್ಟಾರೆ ನಾಗಮಂಗಲ ಸಹಜ ಸ್ಥಿತಿಗೆ ಮರಳಿದ್ರು ಸಹ ಗಲಭೆ ದಿನಕ್ಕೊಂದು ತಿರುವು ಪಡೆದುಕೊಳ್ತಿರೋದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿದೆ ಪರಣಮಿಸಿದೆ.

ಇದನ್ನೂ ಓದಿ:ಕೇಜ್ರಿವಾಲ್ ರಾಜೀನಾಮೆ ಅಸ್ತ್ರಕ್ಕೆ ಬಿಜೆಪಿ ಅಂಕ ಗಣಿತ ಪಲ್ಟಿ.. ದೆಹಲಿ CM ರೇಸ್​ನಲ್ಲಿ ಮೂವರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment