ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್​​ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?

author-image
Bheemappa
Updated On
ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿಲ್ಲ, ಆದರೆ.. ಬಾಲಿವುಡ್​​ನ ರಾಮಾಯಣ ಚಿತ್ರದಲ್ಲಿ ಯಶ್ ಪಾತ್ರ ಏನು..?
Advertisment
  • ರಾಕಿಂಗ್​ ಸ್ಟಾರ್ ಯಶ್ ಆ ಸಿನಿಮಾಕ್ಕಾಗಿ ಏನು ಮಾಡುತ್ತಿದ್ದಾರೆ?
  • ರಾಮಾಯಣದಲ್ಲಿ ಯಶ್ ಅಭಿನಯದ ಬಗ್ಗೆ ಮಾಹಿತಿ ಬಹಿರಂಗ
  • ಸಿನಿಮಾದಲ್ಲಿ ರಣ್​ಬೀರ್​ ಕಪೂರ್ ರಾಮನಾದರೇ ರಾವಣ ಯಾರು..?

ಬಾಲಿವುಡ್​ನ ಬಿಗ್​ ಬಜೆಟ್​ನಲ್ಲಿ ನಿರ್ಮಾಣವಾಗುವ ರಣ್​ಬೀರ್​ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಅವರು ಅಭಿನಯಿಸ್ತಾರೋ, ಇಲ್ವೋ ಎಂದು ಗೊಂದಲ ಇತ್ತು. ಇದಕ್ಕೆ ಅಪ್​ಡೇಟ್​ ಸಿಕ್ಕಿದ್ದು ಕೆಜಿಎಫ್​ ಹೀರೋ ಯಶ್ ರಾಮಾಯಣ ಸಿನಿಮಾಕ್ಕೆ ಕೋ-ಪ್ರಡ್ಯೂಸರ್ ಆಗಿ ಬಂಡವಾಳ ಹೂಡುತ್ತಿದ್ದಾರೆ.

ರಾಮಾಯಣ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಅವರು ರಾವಣನಾಗಿ ಅಭಿನಯ ಮಾಡುತ್ತಿಲ್ಲ. ಬದಲಿಗೆ ಸಿನಿಮಾಕ್ಕೆ ಅವರು ಬಂಡವಾಳ ಹೂಡುತ್ತಿದ್ದಾರೆ. ರಾವಣನಾಗಿ ನಟಿಸುವ ಆಫರ್ ನಿರಾಳವಾಗಿ ತಿರಸ್ಕಾರ ಮಾಡಿರುವ ಯಶ್, ದುಡ್ಡು ಬೇಕಾದರೆ ಹಾಕುತ್ತೇನೆ ಎಂದು ಹೇಳಿದ್ದಾರೆ. ಸಿನಿಮಾದಲ್ಲಿ ರಾಣವನಾಗಿ ಯಶ್ ಅಭಿನಯ ಮಾಡುತ್ತಾರೋ, ಇಲ್ವೋ ಎನ್ನುವ ಗೊಂದಲ ಫ್ಯಾನ್ಸ್​ ವಲಯದಲ್ಲಿ ಇತ್ತು. ಸದ್ಯ ಇದಕ್ಕೆ ಉತ್ತರ ಸಿಕ್ಕಂತೆ ಆಗಿದೆ.

ಇದನ್ನೂ ಓದಿ:ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

publive-image

ಇದನ್ನೂ ಓದಿ: ‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನಾಗಿ ನಟಿಸುತ್ತಿದ್ದಾರೆ ಎಂದು ಮೊದಲೇ ಹೇಳಲಾಗುತ್ತಿತ್ತು. ಆದರೆ ಆಫರ್​ ಬಂದಿದ್ದು ನಿಜ, ನಾನು ನಟಿಸುತ್ತಿಲ್ಲ ಎಂದು ಯಶ್ ಹೇಳಿದ್ದರು. ಅವರು ಹೇಳಿದಂತೆ ಆಗಿದೆ. ಸದ್ಯ ಬಾಲಿವುಡ್​ನ ರಾಮಾಯಣ ಸಿನಿಮಾದಲ್ಲಿ ಯಶ್​ ಸಹ-ಪ್ರಡ್ಯೂಸರ್ ಆಗಿ ಬಂಡವಾಳ ಹೂಡುತ್ತಿದ್ದಾರೆ.

ರಣ್​ಬೀರ್​ ಕಪೂರ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತಾ ಪಾತ್ರದಲ್ಲಿ ನಟನೆಗೆ ಇಳಿದಿದ್ದಾರೆ. ರಾವಣನ ಪಾತ್ರವನ್ನು ಯಶ್ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಅದನ್ನು ಯಾರು ಮಾಡುತ್ತಾರೆ ಎನ್ನುವುದು ರಹಸ್ಯವಾಗಿ ಉಳಿದಿದೆ. ಇನ್ನು ರಾಮನ ಪಾತ್ರ ಮಾಡುತ್ತಿರುವ ಹಿನ್ನೆಲೆ ರಣ್​ಬೀರ್ ಕಪೂರ್ ಮದ್ಯಪಾನ, ಮಾಂಸ ತೊರೆದಿದ್ದಾರೆ. ಈ ಸಿನಿಮಾವನ್ನು ಒಟ್ಟು ಮೂರು ಭಾಗಗಳಲ್ಲಿ ಮಾಡಲಾಗುತ್ತಿದ್ದು, ಮೊದಲ ಭಾಗ 2025ರ ಕೊನೆಯಲ್ಲಿ ರಿಲೀಸ್ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment