/newsfirstlive-kannada/media/post_attachments/wp-content/uploads/2024/05/Team-India_m.jpg)
- ಸಂಡೇ ಇಂಡೋ-ಪಾಕ್ ಹೈವೋಲ್ಟೇಜ್ ಮ್ಯಾಚ್
- ಬಾ ಬಾ ನಾ ರೆಡಿ ಅಂತಿದ್ದಾರೆ ಕಿಂಗ್ ಕೊಹ್ಲಿ
- ಎದುರಾಗಲೆಲ್ಲಾ ಪಾಕ್ಗೆ ತೋರಿಸಿದ್ದಾರೆ ನರಕ
ಈತನಿಗೆ ಆಟ ಅಂತ ಬಂದ್ರೆ ಎದುರಾಳಿ ಲೆಕ್ಕಕ್ಕಿಲ್ಲ. ಗೊತ್ತಿರೋದು ಒಂದೇ ರನ್​​, ರನ್​​​, ರನ್​​​. ಈಗ ಅದೇ ರನ್​​​​​ ಭರಾಟೆಗೆ ಕಿಂಗ್ ಕೊಹ್ಲಿ ಹಪಾಹಪಿಸ್ತಿದ್ದಾರೆ. ಸಂಡೇ ನಡೆಯುವ ಮೆಗಾ ಬ್ಯಾಟಲ್​ನಲ್ಲಿ ಕೊಹ್ಲಿ ಪರಮವೈರಿ ಪಾಕಿಸ್ತಾನಕ್ಕೆ ನರಕ ತೋರಿಸಲು ಸಜ್ಜಾಗಿದ್ದಾರೆ. ಪಾಕ್​​​​​ ಎಷ್ಟೇ ಪ್ಲಾನ್ ಮಾಡಿದ್ರೂ ವಿರಾಟರೂಪದ ಮುಂದೆ ಠುಸ್​ ಪಟಾಕ್ ಆಗೋದು ಗ್ಯಾರಂಟಿ.
ಶತ್ರು ಸಂಹಾರಕ್ಕೆ ವೀರಸೇನಾನಿ ಕೊಹ್ಲಿ ರೆಡಿ
IND VS PAKISTAN..! ಕ್ರಿಕೆಟ್ ಲೋಕದ ಬದ್ಧ ದುಷ್ಮನ್ಸ್​​​. ಈ ಪರಮವೈರಿಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಜೂನ್​​​​ 9 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ವಿಶ್ವಕಪ್ ಯುದ್ಧದಲ್ಲಿ ಹೋರಾಡಲಿವೆ. ಈ ಬಿಗ್​​ವಾರ್​​ನಲ್ಲಿ ವೀರಾಸೇನಾನಿಯಂತೆ ಹೋರಾಡಿ, ಎದುರಾಳಿ ಸೊಕ್ಕಡಗಿಸಲು ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ.
ಇದನ್ನೂ ಓದಿ:ಮಧ್ಯರಾತ್ರಿ ಭೀಕರ ಅಪಘಾತ.. ಮೂವರು ಸ್ಥಳದಲ್ಲೇ ಸಾವು.. ಮರಕ್ಕೆ ಸಿಲುಕಿ ನೇತಾಡಿದ ಮೃತದೇಹ
ಪಾಕ್​​​ ವಿರುದ್ಧ ನೆಕ್ಸ್ಟ್​​ ಲೆವೆಲ್ ಪರ್ಫಾಮೆನ್ಸ್​​​..!
ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಎದುರಾಳಿ ಯಾವುದೇ ಆಗಿರ್ಲಿ. ಕೊಹ್ಲಿ ಬ್ಯಾಟ್ ಮಾತ್ರ ಘರ್ಜಿಸುತ್ತೆ. ಅದೆಂಥ ಟಫ್ ಸಿಚುವೇಶನ್ ಇರ್ಲಿ. ಟೊಂಕಕಟ್ಟಿ ಹೋರಾಡ್ತಾರೆ. ಅಂತ್ರದಲ್ಲಿ ಬದ್ಧವೈರಿ ಪಾಕ್​ ಎದುರಾಳಿ ಅಂದ್ರೆ ಕೇಳ್ಬೇಕಾ? ಆಟದ ವೈಖರಿ ನೆಕ್ಸ್ಟ್​​​​ ಲೆವೆಲ್​​ನಲ್ಲಿ ಇರುತ್ತೆ ಬಿಡಿ.
ಟಿ20 ವಿಶ್ವಕಪ್​​ನಲ್ಲಿ ಎದುರಾಗೆಲೆಲ್ಲಾ ಕಿಂಗ್ ಕೊಹ್ಲಿ ಪಾಕ್​ಗೆ ಅಕ್ಷರಶಃ ನರಕವನ್ನೇ ತೋರಿಸಿದ್ದಾರೆ. ಯಾವತ್ತೂ ಪಾಕ್​ಗೆ ತಲೆಬಾಗಿಲ್ಲ. ಅದ್ಭುತ ಆಟದಿಂದ ಎದುರಾಳಿ ತಲೆಬಾಗುವಂತೆ ಮಾಡಿದ್ದಾರೆ. ವಿಶ್ವವಿಕ್ರಮನ ವಿರಾಟರೂಪ ಸದ್ಯ ಬಾಬರ್​ ಅಝಂ ಪಡೆಗೆ ಇನ್ನಿಲ್ಲದ ನಡುಕ ಹುಟ್ಟಿಸಿದೆ.
ವಿಶ್ವಕಪ್​​ನಲ್ಲಿ ಪಾಕ್​​ ವಿರುದ್ಧ ಕೊಹ್ಲಿ
ಪಾಕಿಸ್ತಾನ ವಿರುದ್ಧ ಕಿಂಗ್ ಕೊಹ್ಲಿ ಇಲ್ಲಿಯತನಕ 10 ಟಿ20 ವಿಶ್ವಕಪ್​​ ಇನ್ನಿಂಗ್ಸ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಾದ್ಭುತ 81.33ರ ಎವರೇಜ್​ನಲ್ಲಿ 488 ರನ್ ಕೊಳ್ಳೆ ಹೊಡೆದಿದ್ದಾರೆ. ಶತಕ ಬಾರದಿದ್ರು 5 ಹಾಫ್​ಸೆಂಚುರಿ ಸಿಡಿಸಿದ್ದಾರೆ.
ಕಳೆದ 5 ಇನ್ನಿಂಗ್ಸ್​ಗಳಲ್ಲಿ ನಾಲ್ಕು ಅರ್ಧಶತಕ
ಸೆಂಚುರಿ ಸಾಮ್ರಾಟ ಪಾಕ್​​​​​​​​​​​​​ ವಿರುದ್ಧ ರನ್ ಪ್ರಹಾರ ನಡೆಸಿದ್ದಾರೆ. ಕಳೆದ ಐದು ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 4 ಅರ್ಧಶತಕ ಸಿಡಿಸಿದ್ದಾರೆ. 4 ಪಂದ್ಯಗಳಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ.
ಕಳೆದ ಐದು ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ
2016ರ ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಕೊಹ್ಲಿ ಅಜೇಯ 55 ರನ್ ಗಳಿಸಿದ್ರು. ಈ ಪಂದ್ಯದಲ್ಲಿ ಭಾರತ ಗೆದ್ದಿತ್ತು. 2021 ರಲ್ಲಿ 57 ರನ್ ಗಳಿಸಿದಾಗ ಭಾರತ ಪರಾಭವಗೊಂಡಿತು. 2022 ರಲ್ಲಿ ಕೊಹ್ಲಿ 35 ರನ್ ಸಿಡಿಸಿದ್ರು. ಆ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿತ್ತು. ಅದೇ ವರ್ಷ 60 ರನ್​ ಚಚ್ಚಿದ್ರು. ಆಗಲೂ ಭಾರತ ಜಯಿಸಿತ್ತು. ಕೊನೆ ಬಾರಿ ಮುಖಾಮುಖಿಯಾದಾಗ ಅಜೇಯ 82 ಸಿಡಿಸಿದ್ದಲ್ಲದೇ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ರು.
ಸಂಡೇ ಬ್ಯಾಟಲ್​​ನಲ್ಲಿ ಪಾಕ್​​ಗೆ ಕಾದೈತೆ ಹಬ್ಬ..!
ಬರೀ ಇತಿಹಾಸ ಮಾತ್ರವಲ್ಲ. ಪ್ರಸೆಂಟ್ ಕೂಡ ಕಿಂಗ್ ಕೊಹ್ಲಿ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಇತ್ತೀಚೆಗೆ ಮುಗಿದ ಐಪಿಎಲ್​ನಲ್ಲಿ 741 ರನ್​ ಚಚ್ಚಿ ಟಾಪ್​​ ಸ್ಕೋರರ್ ಅನ್ನಿಸಿಕೊಂಡಿದ್ರು. ಸದ್ಯ ಗುಡ್ ರಿದಮ್​​ನಲ್ಲಿರೋ ಕೊಹ್ಲಿಯನ್ನ ಕಟ್ಟಿಹಾಕೋದು ಕಷ್ಟದ ಕೆಲಸ. ಹಾಗಾಗಿ ಇವತ್ತಿನ ಬಿಗ್​ ರೈವರ್ಲಿ ಬ್ಯಾಟಲ್​ನಲ್ಲಿ ಕೊಹ್ಲಿ ಅಬ್ಬರಿಸಿ ಬದ್ಧವೈರಿ ಪಾಕ್​ಗೆ ಸೋಲಿನ ದರ್ಶನ ಮಾಡಿಸಿದ್ರು ಆಶ್ಚರ್ಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ