Advertisment

ಕೊಹ್ಲಿ ಟೀಕೆ ಮಾಡೋರಿಗೆ ಏನು ಗೊತ್ತು.. ಈ ಸಾಧನೆಯ ಹತ್ತಿರಕ್ಕೂ ಯಾರು ಸುಳಿದಿಲ್ಲ..!

author-image
Ganesh
Updated On
T20 ವಿಶ್ವಕಪ್​​ಗೆ ಮುನ್ನವೇ ಕ್ಯಾಪ್ಟನ್​ ರೋಹಿತ್​​ ಶರ್ಮಾಗೆ ಜಡೇಜಾ ಬಿಗ್​ ಶಾಕ್​​.. ಆಗಿದ್ದೇನು?
Advertisment
  • ವಿರಾಟ್​ ಕೊಹ್ಲಿ ಕಿಂಗ್ ಆಫ್​ ಟಿ20 ವರ್ಲ್ಡ್​ಕಪ್​
  • ದಾಖಲೆಗಳಿಗೆ ಕೊಹ್ಲಿಯೇ ಕೇರ್​ ಆಫ್​ ಅಡ್ರೆಸ್
  • ಟಿ20 ವಿಶ್ವಕಪ್​ನಲ್ಲಿ ವಿರಾಟ್ ವೀರಾವೇಶ ಫಿಕ್ಸ್

ಟಿ20 ವಿಶ್ವಕಪ್​ಗೆ ವಿರಾಟ್​ ಕೊಹ್ಲಿಯೇ ಕಿಂಗ್​. ಒಂದಲ್ಲ.. ಎರಡಲ್ಲ... ಟಿ20 ವಿಶ್ವ ಸಮರದ ಎಲ್ಲಾ ದಾಖಲೆಗಳಿಗೂ ರನ್ ​ಮಷೀನ್ ಕೊಹ್ಲಿಯೇ ಕೇರ್​ ಆಫ್​ ಅಡ್ರೆಸ್​.

Advertisment

ಟಿ20 ವಿಶ್ವಕಪ್​​ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. ನ್ಯೂಯಾರ್ಕ್​ನಲ್ಲಿ ಅಭ್ಯಾಸವನ್ನು ಆರಂಭಿಸಿರುವ ಟೀಮ್ ಇಂಡಿಯಾ, ಈ ಸಲ ಟಿ20 ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲೋ ಹಾಟ್ ಫೇವರಿಟ್ ಆಗಿಯೇ ಕಣಕ್ಕಿಳಿಯುತ್ತಿದೆ. ಹಲವು ದಿಗ್ಗಜರು ಈ ಬಗ್ಗೆ ಭವಿಷ್ಯ ನುಡಿದಾಗಿದೆ. ಎದುರಾಳಿ ತಂಡಗಳ ಹಾಗೂ ಫ್ಯಾನ್ಸ್​ ಚಿತ್ತ ಮಾತ್ರ. ಕಿಂಗ್ ಕೊಹ್ಲಿಯ ಮೇಲೆಯೇ ನೆಟ್ಟಿದೆ. ಇದಕ್ಕೆಲ್ಲಾ ಕಾರಣ ಟಿ20 ವಿಶ್ವಕಪ್​ನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬೋರ್ಗೆರೆತ.

ಇದನ್ನೂ ಓದಿ:ಮ್ಯಾಕ್ಸಿ, ಫಾಫ್​ಗೆ ಗುಡ್​ಬೈ ಹೇಳಿ.. ಈ ಸ್ಟಾರ್​ಗೆ ಕ್ಯಾಪ್ಟನ್ಸಿ ಕೊಡಿ.. ಟೀಂ ಇಂಡಿಯಾದ ಮಾಜಿ ಸ್ಟಾರ್ ಆಗ್ರಹ..!

ಕೊಹ್ಲಿ ಕಿಂಗ್ ಆಫ್​ T20 ವರ್ಲ್ಡ್​ಕಪ್​
ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ನ ರನ್ ಸಾಮ್ರಾಟ.. ಈತನ ಅಪ್ರತಿಮ ಬ್ಯಾಟಿಂಗ್​ಗೆ ದಿಗ್ಗಜರ ದಾಖಲೆಗಳು ಚಿಂದಿಯಾಗಿವೆ. ಎದುರಾಳಿಗಳು ಉಡೀಸ್ ಆಗ್ತಾರೆ. ಈ ಚೇಸಿಂಗ್ ಮಾಸ್ಟರ್​ನ ಮಾಸ್ ಆಟಕ್ಕೆ ಬೌಲರ್​ಗಳು ಪತರಗುಟ್ಟುತ್ತಾರೆ. ಹೀಗಾಗಿಯೇ ವಿಶ್ವ ಕ್ರಿಕೆಟ್​ನಲ್ಲಿ ಕಿಂಗ್ ಆಗಿ ಮೆರೆಯುತ್ತಿರುವ ವಿರಾಟ್, ವಿಶ್ವ ಕ್ರಿಕೆಟ್​ ಲೋಕಕ್ಕೆ ಮಾತ್ರವಲ್ಲ. ಟಿ20 ಚುಟುಕು ಸಮರಕ್ಕೂ ಸಾಮ್ರಾಟ..

Advertisment

ಇದನ್ನೂ ಓದಿ:ಪ್ರಿಯಕರನ ಜೊತೆ ಮದುಮಗಳು ಪರಾರಿ.. ಕಣ್ಣೀರು ಇಡುತ್ತ ಪೊಲೀಸರ ಬಳಿ ಬಂದ ಪೋಷಕರು

T20 ವಿಶ್ವಕಪ್​ನಲ್ಲಿ ಗರಿಷ್ಠ ರನ್​ ಸರದಾರ ವಿರಾಟ
ಟಿ20 ವಿಶ್ವಕಪ್​ ಟೂರ್ನಿಗೆ ವಿರಾಟ್​​​ ಕೊಹ್ಲಿ ಬಾಸ್​​. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಆಡಿರುವ 5 ಟಿ20 ವಿಶ್ವಕಪ್​ಗಳಿಂದ ಸಿಡಿಸಿರುವ ರನ್.. 2007ರಿಂದ ಪ್ರತಿ ವಿಶ್ವಕಪ್​ನಲ್ಲಿ ಆಡಿರುವ ರೋಹಿತ್ ಶರ್ಮಾ ಕೂಡ, ವಿರಾಟ್​ ಕೊಹ್ಲಿಗಿಂತ ಹಿಂದಿದ್ದಾರೆ.

ವಿಶ್ವಕಪ್​ನಲ್ಲಿ ಗರಿಷ್ಠ ರನ್

  • ವಿರಾಟ್​ ಕೊಹ್ಲಿ 1141
  • ಜಯವರ್ಧನೆ 1016
  • ಕ್ರಿಸ್​ ಗೇಲ್​ 965
  • ರೋಹಿತ್ ಶರ್ಮಾ 963

ಇದಿಷ್ಟೇ ಅಲ್ಲ. ಚುಟುಕು ವಿಶ್ವಕಪ್​ನಲ್ಲಿ ಕೊಹ್ಲಿಯ ಬ್ಯಾಟಿಂಗ್ ಅವರೇಜ್​ ಹತ್ತಿರಕ್ಕೂ ಯಾರೂ ಸುಳಿದಿಲ್ಲ ಅಂದ್ರೆ ನೀವು ನಂಬಲೇ ಬೇಕು. ಗರಿಷ್ಠ ರನ್ ಸ್ಕೋರರ್ ಆಗಿರುವ ವಿರಾಟ್, ಬ್ಯಾಟಿಂಗ್ ಌವರೇಜ್ 81.50 ಆಗಿದ್ರೆ, ಆಸಿಸ್ ಮಾಜಿ ಆಟಗಾರ ಮೈಕಲ್ ಹಸ್ಸಿ ಬ್ಯಾಟಿಂಗ್ ಅವರೇಜ್ 54,63 ಆಗಿದೆ. ನಂತರದ ಸ್ಥಾನದಲ್ಲಿ 44.62 ಅವರೇಜ್ ಹೊಂದಿರುವ ಕೆವಿನ್ ಪೀಟರ್ಸನ್ ಇದ್ದಾರೆ.

Advertisment

ದಾಖಲೆಯ ಅರ್ಧಶತಕ.. ಗರಿಷ್ಠ ಪ್ಲೇಯರ್ ಆಫ್ ದಿ ಮ್ಯಾಚ್..!
ವಿಶ್ವಕಪ್​ ಮಹಾ ಸಂಗ್ರಾಮದಲ್ಲಿ ಲೀಲಾಜಾಲವಾಗಿ ಬ್ಯಾಟ್​ ಬೀಸೋ ವಿರಾಟ್​ ಕೊಹ್ಲಿ, ಗರಿಷ್ಠ ಅರ್ಧಶತಕ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಈ ಸಾಧನೆಯ ಹತ್ತಿರಕ್ಕೂ ಯಾರು ಸುಳಿದಿಲ್ಲ. ಮುಂದೆ ಈ ಸಾಧನೆ ಬ್ರೇಕ್ ಮಾಡೋದು ಇಲ್ಲ.

T20 ವಿಶ್ವಕಪ್​​ನಲ್ಲಿ ಗರಿಷ್ಠ ಅರ್ಧಶತಕ
ಇದುವರೆಗೆ ಟಿ20 ವಿಶ್ವಕಪ್​ನಲ್ಲಿ 14 ಅರ್ಧಶತಕ ಸಿಡಿಸಿರುವ ವಿರಾಟ್, ನಂಬರ್​.1 ಸ್ಥಾನದಲ್ಲಿದ್ರೆ. 9 ಅರ್ಧಶತಕ ಸಿಡಿಸಿರುವ ರೋಹಿತ್, 2ನೇ ಸ್ಥಾನದಲ್ಲಿದ್ದಾರೆ. ಉಳಿದದಂತೆ 7 ಹಾಫ್ ಸೆಂಚುರಿ ಬಾರಿಸಿರುವ ಗೇಲ್, 3ನೇ ಪ್ಲೇಸ್​ನಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಅಂಕಿಸಂಖ್ಯೆಗಳ ಹತ್ತಿರಕ್ಕೆ ಸುಳಿಯುವುದು ಕಷ್ಟ ಸಾಧ್ಯ.

ಇದನ್ನೂ ಓದಿ:2 ವರ್ಷ.. 2 ಬಾರಿ ಹೃದಯ ಛಿದ್ರ.. ರೋಹಿತ್​​ ಶರ್ಮಾರ ಬೆನ್ನೇರಿದ ದುರಾದೃಷ್ಟಗಳು..!

Advertisment

ಅರ್ಧಶತಕದಲ್ಲೇ ಮಾತ್ರವಲ್ಲ. ಮ್ಯಾನ್​ ಆಫ್​ ದ ಮ್ಯಾಚ್​ ಅವಾರ್ಡ್​​ ಮುಡಿಗೇರಿಸಿಕೊಳ್ಳವಲ್ಲೂ ದಾಖಲೆ ಬರೆದಿದ್ದಾರೆ. ಈವರೆಗೆ 7 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಮುಡಿಗೇರಿಸಿಕೊಂಡಿರುವ ವಿರಾಟ್, 2 ಸಲ ಮ್ಯಾನ್ ಆಫ್ ದಿ ಟೂರ್ನಮೆಂಟ್ ಅವಾರ್ಡ್​ ದಕ್ಕಿಸಿಕೊಂಡ ಒನ್​ ಆ್ಯಂಡ್ ಒನ್ಲಿ ಪ್ಲೇಯರ್ ಅನ್ನೋದು ಮರೆಯುವಂತಿಲ್ಲ. ಹೀಗಾಗಿಯೇ ಈ ಚುಟುಕು ಕ್ರಿಕೆಟ್​ನ ಸರ್ವ ದಾಖಲೆಗಳಿಗೂ ಕೊಹ್ಲಿಯೇ ಕೇರ್​ ಆಫ್​ ಅಡ್ರೆಸ್​ ಆಗಿದ್ದಾರೆ.

ಅದೇನೇ ಆಗಲಿ.. ಕೊನೆ ಟಿ20 ವಿಶ್ವಕಪ್ ಆಡ್ತಿರುವ ವಿರಾಟ್,​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದ್ದು, ಟಿ20 ವಿಶ್ವಕಪ್​ನಲ್ಲಿ ಅಬ್ಬರಿಸಿ ಟ್ರೋಫಿ ಬರಕ್ಕೆ ಬ್ರೇಕ್​ ಹಾಕಲಿ ಅನ್ನೋದೇ ಅಭಿಮಾನಿಗಳ ಆಶಯ.

ಇದನ್ನೂ ಓದಿ:IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment