newsfirstkannada.com

ಸಿಲಿಕಾನ್ ಸಿಟಿ ಕಸದ ರಾಶಿ.. ಬಿಲಿಯನೇರ್‌ ಉದ್ಯಮಿ ಕಿರಣ್ ಮಜುಂದಾರ್ ಟ್ವೀಟ್‌ ವೈರಲ್‌; ಹೇಳಿದ್ದೇನು?

Share :

Published May 15, 2024 at 6:12pm

Update May 15, 2024 at 6:25pm

    ನಗರದ ರಸ್ತೆಗಳು ಕಸದಿಂದ ತುಂಬಿರುವ ದ್ಯಶ್ಯಗಳಿರುವ ವಿಡಿಯೋ ವೈರಲ್

    ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ

    ಬೆಂಗಳೂರು ಸ್ಮಾರ್ಟ್ ಸಿಟಿಯಲ್ಲ, ಅದು ಗಾರ್ಬೆಜ್ ಸಿಟಿ ಅಂತಾ ಟೀಕೆ

ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಹಾಗೂ ಮಹಿಳಾ ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಿಲಿಕಾನ್ ಸಿಟಿಯ ಸ್ವಚ್ಛತೆ ಬಗ್ಗೆ ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

ಮಹಿಳಾ ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಮಾಡಿದ ಟ್ವೀಟ್​ನಿಂದ ಉದ್ಯಾನನಗರಿ ಸ್ಮಾರ್ಟ್​ ಸಿಟಿಯಲ್ಲ, ಗಾರ್ಬೇಜ್ ಸಿಟಿ ಆಗುತ್ತಿದೆಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಸದ್ಯ ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?

ವಿಶ್ವನಾಥ್ ನಾಗರಾಜ್ ಎನ್ನುವರು ನಗರದ ಔಟರ್ ರಿಂಗ್ ರೋಡ್​ ಉದ್ದಕ್ಕೂ ಬಿದ್ದಿರುವ ರಾಶಿ ರಾಶಿ ಕಸ ಇರುವಂತಹ ವಿಡಿಯೋವನ್ನು ಎಕ್ಸ್​ನಲ್ಲಿ ಶೇರ್ ಮಾಡಿದ್ದರು. ಬೆಳಗ್ಗೆ ಬೆಂಗಳೂರಿನ ದೃಶ್ಯವಿದು ಎಂದು ಬರೆದು ಕಿರಣ್ ಮಜುಂದಾರ್ ಶಾ ಸೇರಿ ಇನ್ನು ಕೆಲವರಿಗೆ ಎಕ್ಸ್​ ಅನ್ನು ಟ್ಯಾಗ್ ಮಾಡಿದ್ದರು. ಇದೇ ಪೋಸ್ಟ್ ಅನ್ನು ಕಿರಣ್ ಮಜುಂದಾರ್ ಶಾ ರೀ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮುಂಬೈ ಹೋರ್ಡಿಂಗ್​ ಬಿದ್ದ ಕೇಸ್​ಗೆ ಹೊಸ ಟ್ವಿಸ್ಟ್​.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್​ ಶೋ

ಕಿರಣ್ ಮಜುಂದಾರ್ ಶಾ ಅವರು, ಇದು ಅಸಹ್ಯಕರ ದೃಶ್ಯ. ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಬರೆದು ಬಿಬಿಎಂಪಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಅನ್ನು ರೀ ಟ್ವೀಟ್ ಮಾಡಿದ್ದರು. ಸದ್ಯ ಈ ಪೋಸ್ಟ್​ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಬಿಬಿಎಂಪಿ ವಿರುದ್ಧ ವ್ಯಾಪಕವಾಗಿ ಕಿಡಿ ಕಾರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್ ಸಿಟಿ ಕಸದ ರಾಶಿ.. ಬಿಲಿಯನೇರ್‌ ಉದ್ಯಮಿ ಕಿರಣ್ ಮಜುಂದಾರ್ ಟ್ವೀಟ್‌ ವೈರಲ್‌; ಹೇಳಿದ್ದೇನು?

https://newsfirstlive.com/wp-content/uploads/2024/05/BBMP-1.jpg

Load More