newsfirstkannada.com

ಬಾಲಕಿಗೆ ಚಾಕಲೇಟ್​ ಕೊಡಿಸ್ತಿದ್ದ, ಪ್ರಶ್ನಿಸಿದ್ರೆ ಅವಾಜ್​ ಹಾಕ್ತಿದ್ದ; ಕೊಲೆಗಾರನ ಬಗ್ಗೆ ಸ್ಥಳೀಯರು ಬಿಚ್ಚಿಟ್ರು ಅಚ್ಚರಿಯ ಮಾಹಿತಿ

Share :

Published May 10, 2024 at 2:23pm

  ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ಮಗಳನ್ನು ಕೊಲೆ ಮಾಡಿದ

  ಕೊಲೆಗಾರ ತೊಂದರೆಯಿಂದ ತಂದೆ ಗನ್​ ಮ್ಯಾನ್​ ಕೆಸಲಕ್ಕೆ ಬೆಂಗಳೂರಿಗೆ ಹೋಗಿದ್ರು

  ಕೊಲೆಗಾರನಿಗೆ ಸಪೋರ್ಟ್​ ಮಾಡಲು ಬೇರೆ ಜನರಿದ್ದಾರೆ ಎಂದ ಸ್ಥಳೀಯ ಮಹಿಳೆ

ನಿನ್ನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬಿ ಗ್ರಾಮದಲ್ಲಿ 10ನೇ ತರಗತಿಯ ಮೀನಾ ಎಂಬ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಲಾಗಿದೆ. ಕಾನೂನು ವಿರೋಧಿಸಿ ನಿಶ್ಚಿತಾರ್ಥ ಮಾಡಲು ಮುಂದಾದ 34 ವರ್ಷದ ಪುರುಷ ಮೊಣ್ಣಂಡ ಪ್ರಕಾಶನೇ ಆಕೆಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಹತ್ಯೆಯನ್ನು ಖಂಡಿಸಿ ಸ್ಥಳೀಯರೊಬ್ಬರು ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ್ದಾರೆ.

ರಿಸಲ್ಟ್​ ಬಂದ ದಿನವೇ ನಿಶ್ಚಿತಾರ್ಥ

ಕೊಲೆಯಾದ ಮೀನಾ ಅಪ್ರಾಪ್ತ ಬಾಲಕಿ. ಸ್ಕೂಲಲ್ಲಿ 10ನೇ ತರಗತಿ ಓದುತ್ತಿದ್ದಳು. ನಿನ್ನೆ ಆಕೆಯ ರಿಸಲ್ಟ್​ ಕೂಡ ಬಂದಿದೆ. ಆದರೆ ನಿನ್ನೆ ಆಕೆಗೆ ನಿಶ್ಚಿತಾರ್ಥ ಮಾಡಿದ್ರು. ಈ ವೇಳೆ ಅವಳಿಗೆ ವಯಸ್ಸಾಗಿಲ್ಲ ಎಂದು ಯಾರೋ ಕಂಪ್ಲೇಟ್​ ಮಾಡಿದ್ರು. ಕಂಪ್ಲೇಟ್​ ಅನ್ವಯ ಸಿಸಿಪಿಐ ಆಫೀಸ್​ನವರು ಬಂದಿದ್ದಾರೆ. ಆದರೆ ಅಲ್ಲಿ ಬಂದಾಗ ಅದು ಗರ್ವಾಲೆ ಪಂಚಾಯತ್​ಗೆ ಬರಲ್ಲ, ಗಾಳಿಬೀಡು ಪಂಚಾಯತ್​ಗೆ ಬರುತ್ತದೆ ಎಂದು ವಾಪಾಸ್ಸು ಹೋಗಿದ್ದಾರಂತೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ತಂದೆ-ತಾಯಿ ಮೇಲೆ ಹಲ್ಲೆ, ಮಗಳ ಕೊಲೆ

ಹುಡುಗಿ ಮತ್ತು ಆಕೆಯ ತಾಯಿ ಮಲಗಿದ್ದ ಸಮಯದಲ್ಲಿ ಕೊಲೆಗಾರ ಬಂದಿದ್ದಾನೆ. ಬಳಿಕ ಹುಡುಗಿಯನ್ನ ಎಳೆದೊಯ್ದಿದ್ದಾನೆ. ಇದನ್ನು ಕಂಡು ತಾಯಿ ನಾವೇ ಆಕೆಗೆ ಹೊಡೆದಿಲ್ಲ, ನೀನ್ಯಾರು ಹೊಡೆಯೋಕೆ ಎಂದಿದ್ದಾರೆ. ಇದಕ್ಕೆ ಪ್ರಕಾರ ಹುಡುಗಿಯ ತಾಯಿಗೆ ಕಡಿದಿದ್ದಾನೆ. ಇದನ್ನು ತಡೆಯಲು ಬಂದ ಹುಡುಗಿಯ ತಂದೆಗೂ ಹೊಡೆದಿದ್ದಾನೆ. ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಇಂತಹ ಕೃತ್ಯ ನಡೆಯಬಾರದು

ಕೃತ್ಯ ನಡೆದ ಸ್ಥಳದಲ್ಲಿ ಓರ್ವ ಪಿಕಪ್​ ತಂದು, ಕೃತ್ಯವನ್ನು ತಡೆಯಲು ಕೂಡ ಹೋಗಿಲ್ಲ. ಕೊಲೆಗಾರನಿಗೆ ಸಪೋರ್ಟ್​ ಮಾಡಿ ಎಸ್ಕೇಪ್​ ಮಾಡಿಸಿದ್ದಾನೆ. ದಯವಿಟ್ಟು ಇಂತಹ ಕೃತ್ಯ ನಮ್ಮ ಸುತ್ತಮುತ್ತ ಆಗಬಾರದು. ಹೇಳಿಕೊಳ್ಳಲಾಗದಷ್ಟು ನೋವಾಗಿದೆ. ಎಲ್ಲರ ಮನೆಯ ಮಗಳಾಗಿದ್ದಳು ಅವಳು ಎಂದು ಸ್ಥಳಿಯರು ಹೇಳಿದ್ದಾರೆ.

ಪ್ರಶ್ನಿಸಿದ್ದಕ್ಕೆ ಅವಾಜ್​ ಹಾಕಿದ ಕೊಲೆಗಾರ

ಹುಡುಗಿಯನ್ನು ಕರೆದುಕೊಂಡು ಬಂದು ಅಂಗಡಿಯಲ್ಲಿ ಚಾಕಲೇಟ್​ ಕೊಡಿಸುತ್ತಿದ್ದನು. ಆ ಸಮಯದಲ್ಲಿ ನಾನು ಅದನ್ನು ಪಶ್ನಿಸಿದ್ದೆ. ಅದಕ್ಕೆ ಕೊಲೆಗಾರ ಪ್ರಕಾಶ ಅವಳು ನನ್ನ ಹುಡುಗಿ ನೀನ್ಯಾರು ನನ್ನ ಪ್ರಶ್ನೆಸೋದು ಎಂದು ಅವಾಜ್​ ಹಾಕಿದ್ದನು. ಸ್ಕೂಲ್​ ಮಕ್ಕಳನ್ನ ಈ ರೀತಿ ಮಾಡೋದು ಸರಿಯಲ್ಲ, ಇವರ ಅಪ್ಪ-ಅಮ್ಮನಿಗೆ ಗೊತ್ತಿಲ್ವ ಟೀಚರ್ಸ್​ಗೆ ಗೊತ್ತಿಲ್ವ, ಯಾಕೆ ಈ ರೀತಿ ಮಾಡುತ್ತೀಯಾ ಎಂದಿದ್ದಕ್ಕೆ ಆತ ನನ್ನ ಹುಡುಗಿ ನನ್ನ ಇಷ್ಟ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕೊಡಗು: ನಮ್ಮನ್ನು ಕ್ರಿಕೆಟ್​ ಆಡಲು ಕಳುಹಿಸಿ ತಂಗಿಯ ರುಂಡ ಕಡಿದ.. ಘಟನೆ ಬಗ್ಗೆ ವಿವರಿಸಿದ ಅಪ್ರಾಪ್ತೆಯ ಸಹೋದರ

ಪಂಚಾಯತಿಯವರು ಆ್ಯಕ್ಷನ್​ ತೆಗೆದುಕೊಂಡಿಲ್ಲ

ಪೋಷಕರ ಸಭೆಗೂ ಹುಡುಗಿಯ ಮನೆಯವರನ್ನು ಕಳುಹಿಸದೆ ಆತನೇ ಶಾಲೆಗೆ ಹೋಗುತ್ತಿದ್ದನು. ಹುಡುಗಿ ಯಾಕೆ ಶಾಲೆಗೆ ಬರುತ್ತಿಲ್ಲ ಎಂದು ಟೀಚರ್ಸ್​ ಮನೆಗೆ ಹೋಗಿ ನೋಡಿದಾಗ ಇಬ್ಬರು ಮನೆಯಲ್ಲಿ ಇದ್ದರಂತೆ. ಇದನ್ನು ಕಂಡು ಟೀಚರ್ಸ್​ಗೆ ಗಾಬರಿಯಾಗಿ, ಬೇಸರವಾಗಿ ಪಂಚಾಯತ್​ಗೆ ದೂರು ನೀಡಿದ್ದಾರೆ. ಪಂಚಾಯತಿಯವರು ಇದಕ್ಕೆ ಆ್ಯಕ್ಷನ್​ ತೆಗೆದುಕೊಂಡಿಲ್ಲ.

ಸರಿಯಾಗಿ ಮನೆಗೆ ಬರ್ತಾ ಇಲ್ಲ

ಇಬ್ಬರು ಒಂದು ವರ್ಷದಿಂದ ಪರಿಚಯ. ಹುಡುಗನ ಮನೆಗೆ ಹುಡುಗಿ ಮನೆಯಿಂದ 3 ಕಿಲೋ ಮೀಟರ್​ ಇದೆ. ಹುಡುಗನ ಮನೆ ಹಮಿಯಾಲ. ಹುಡಗನ ತಂದೆ ಹಿಂದೊಮ್ಮೆ ಸಿಕ್ಕಿದಾಗ ನನ್ನ ಬಳಿ ನಾನು ಮೂರು ಮಕ್ಕಳನ್ನು ಹೆತ್ತಿದ್ದೇವೆ. ಅದರಲ್ಲಿ ಇಬ್ಬರನ್ನು ಚೆನ್ನಾಗಿ ಮದುವೆ ಮಾಡಿ ಕೊಟ್ಟಿದ್ದೇವೆ. ಆದರೆ ಈತ ಇಷ್ಟು ಸಣ್ಣ ಪ್ರಾಯದ ಹುಡುಗಿಯನ್ನ ಪ್ರೀತಿಸಬಾರದಿತ್ತು. ನಾವು ಹೇಳಿದ್ರೆ ಬೆದರಿಸ್ತಾನೆ. ಮನೆಗೆ ಬರ್ತಾ ಇಲ್ಲ. ಪ್ರಕಾಶನ ತಂದೆ ಈತನ ತೊಂದರೆ ತಾಳಲಾರದೆ ಬೆಂಗಳೂರಿಗೆ ಗನ್​ ಮ್ಯಾನ್​ ಕೆಸಲಕ್ಕೆ ಹೋಗಿದ್ದಾರೆ.

ಮಾನ ಮರ್ಯಾದೆ ತೆಗೆದ

ಪ್ರಕಾಶ ತಾಯಿ ಕೂಡ ನನ್ನ ಬಳಿಕ ಕಣ್ಣೀರು ಹಾಕಿಕೊಂಡು ಹೇಳಿದ್ದಾರೆ. ಇಷ್ಟು ಸಣ್ಣ ಪ್ರಾಯದ ಹುಡುಗಿಯನ್ನ ಲವ್​ ಮಾಡಿ ಮಾನ ಮರ್ಯಾದೆ ತೆಗೆದ. ಹುಡುಗಿಗೆ 5 ಜನ ಸಹೋದರ-ಸಹೋದರಿಯರು. ಅದರಲ್ಲಿ ಮೂವರಿಗೆ ವಿವಾಹವಾಗಿದೆ. ಮತ್ತಿಬ್ಬರು ಸಹೋದರರಿದ್ದಾರೆ.

ಇದನ್ನೂ ಓದಿ: ಕೊಡಗು: SSLC ಹುಡುಗಿಯ ತಲೆ ಕಡಿದ ಪ್ರಕರಣ.. ರುಂಡಕ್ಕಾಗಿ ಶ್ವಾನದಳದಿಂದ ಹುಡುಕಾಟ

ಕೊಲೆಗಾರ ಪ್ರಕಾಶನಿಗೆ ಸಹಚರರು ಇದ್ದಾರೆ

ಇನ್ನು ಕೊಲೆಗಾರ ಪ್ರಕಾಶನಿಗೆ ಸಹಚರರು ಇದ್ದಾರೆ. ಆತನಿಗೆ ಸಪೋರ್ಟ್​ ಮಾಡಲು ಬೇರೆ ಜನರಿದ್ದಾರೆ. ಅವರನ್ನ ಮೊದಲಿಗೆ ಬಂಧಿಸಿ. ಘಟನೆ ನಡೆಯಬೇಕಾದರೆ ಅದನ್ನ ನೋಡಿಕೊಂಡು ಇರೋದು ಮಾನವೀಯತೆ ದೃಷ್ಟಿ ಅಲ್ಲ. ಹುಡುಗಿಯ ರುಂಡ ಕಡಿದ ಕೊಲೆಗಾರ ಪ್ರಕಾಶ ಪಿಕಪ್​ ಏರಿ ಎಸ್ಕೇಪ್​ ಆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿಗೆ ಚಾಕಲೇಟ್​ ಕೊಡಿಸ್ತಿದ್ದ, ಪ್ರಶ್ನಿಸಿದ್ರೆ ಅವಾಜ್​ ಹಾಕ್ತಿದ್ದ; ಕೊಲೆಗಾರನ ಬಗ್ಗೆ ಸ್ಥಳೀಯರು ಬಿಚ್ಚಿಟ್ರು ಅಚ್ಚರಿಯ ಮಾಹಿತಿ

https://newsfirstlive.com/wp-content/uploads/2024/05/Kodagu-murder-4.jpg

Load More