newsfirstkannada.com

ಕೊಡಗು: SSLC ಬಾಲಕಿಯ ರುಂಡವೂ ಸಿಕ್ಕಿಲ್ಲ, ಆರೋಪಿಯ ಸುಳಿವೂ ಇಲ್ಲ.. ಕೊಲೆಗಾರ ಎಲ್ಲಿ ಹೋದ?

Share :

Published May 11, 2024 at 7:20am

Update May 11, 2024 at 3:56pm

    ಅಪ್ರಾಪ್ತೆಯ ಹತ್ಯೆ ಮಾಡಿದ್ದ ಆರೋಪಿ ಆತ್ಮಹತ್ಯೆ ವಂದತಿ

    ಆರೋಪಿಗಾಗಿ ಮತ್ತೆ ಹುಡುಕಾಟ ಶುರು ಮಾಡಿದ ಪೊಲೀಸರು

    ಯಾರೋ ಸ್ಥಳೀಯರು ಆತ್ಮಹತ್ಯೆ ಸುಳ್ಳು ಸುದ್ದಿ ಹಬ್ಬಿಸಿರುವ ಶಂಕೆ

ಇಡೀ ಕೊಡಗು ಜನತೆಯನ್ನ ಬೆಚ್ಚಿ ಬೀಳಿಸಿದ್ದ ಎಸ್ಎಸ್ಎಲ್​ಸಿ ವಿದ್ಯಾರ್ಥಿನಿ ಮೀನಾ ಕೊಲೆ ಪ್ರಕರಣ ತನಿಖೆ ಚುರುಕುಕೊಂಡಿದೆ. ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿ, ತಾನೂ ನೇಣಿಗೆ ಶರಣಾಗಿದ್ದಾನೆ ಎಂಬ ವದಂತಿ ಸುಳ್ಳು ಅಂತ ಹೇಳಲಾಗ್ತಿದೆ.

ಕಳೆದ ಗುರುವಾರ ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯ ಹತ್ಯೆಯಾಗಿತ್ತು. ಬಾಲಕಿಯನ್ನ ಕೊಂದು ಹಂತಕ ಆಕೆಯ ತಲೆ ಕೊಂಡೊಯ್ದಿದ್ದ. ಇದೀಗ ಆರೋಪಿ 34 ವರ್ಷದ ಪ್ರಕಾಶ್‌ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಮಧ್ಯೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವದಂತಿ ಸುಳ್ಳಾಗಿದೆ.

ಆರೋಪಿ ಪ್ರಕಾಶ್‌, ಬಾಲಕಿಯ ರುಂಡಕ್ಕಾಗಿ ಹುಡುಕಾಟ

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರೋ ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಸುದೀರ್ಘ ಕಾರ್ಯಾಚರಣೆ ಬಳಿಕ ಇದೀಗ ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ ಎಂದು ಸುದ್ದಿಹಬ್ಬಿತ್ತು. ಆದ್ರೆ ಇದೀಗ ಪತ್ತೆಯಾದ ಮೃತದೇಶ ಆರೋಪಿ ಪ್ರಕಾಶ್​ನದ್ದು ಅಲ್ಲ ಎಂದು ಕೊಡಗು ಎಸ್​ಪಿ ಕೆ.ರಾಮರಾಜನ್​ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.. ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

ಎಸ್​ಪಿ ಕೆ.ರಾಮರಾಜನ್​ ಹೇಳಿದ್ದೇನು?

ಅಪ್ರಾಪ್ತೆಯ ಹತ್ಯೆ ಮಾಡಿದ್ದ ಆರೋಪಿ ಆತ್ಮಹತ್ಯೆ ಕನ್ಫಮ್‌ ಇಲ್ಲ ಎಂದು ಕೊಡಗು ಎಸ್​ಪಿ ಕೆ.ರಾಮರಾಜನ್ ಸ್ಪಷ್ಟನೆ ನೀಡಿದ್ದಾರೆ. ಕುಗ್ರಾಮ ಹಾಗೂ ನೆಟ್‌ವರ್ಕ್ ಸರಿಯಾಗಿ ಇಲ್ಲದ ಕಾರಣ ಮಿಸ್ ಕಮ್ಯುನಿಕೇಷನ್ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಸುಳ್ಳು ಹರಿದಾಡುತ್ತಿದೆ. ಪೊಲೀಸರಿಗೆ ಆತ್ಮಹತ್ಯೆ ಮಾಡಿಕೊಂಡ‌ ಮಾಹಿತಿ ಬಂದಿತ್ತು, ಸ್ಥಳಕ್ಕೆ ಭೇಟಿ ನೀಡಿದಾಗ ಈ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಆರೋಪಿ ಪ್ರಕಾಶ್ ಆತ್ಮಹತ್ಯೆಯ ಯಾವುದೇ ಸುಳಿವು ಸಿಕ್ಕಿಲ್ಲ ಯಾರೋ ಸ್ಥಳೀಯರು ಸುಳ್ಳು ಸುದ್ದಿ ಹಬ್ಬಿಸಿರಬಹುದು. ದುರ್ಘಟನೆ ನಡೆದ ಪ್ರದೇಶ ದಟ್ಟ ಅರಣ್ಯಕ್ಕೆ ಹೊಂದಿಕೊಂಡಿದೆ, ಇತ್ತ ಆರೋಪಿ ಕೋವಿಯೊಂದಿಗೆ ಕಾಡಿನತ್ತ ಪರಾರಿಯಾಗಿದ್ದಾನೆ. ಆರೋಪಿಯ ಮನಸ್ಥಿತಿ ಸರಿಯಿಲ್ಲದ ಕಾರಣ ಅನಾಹುತ ಆಗಬುಹುದು, ರಾತ್ರಿ ವೇಳೆ ಕಾಡಿನಲ್ಲಿ ಹುಡುಕುವಾಗ ಆರೋಪಿ ಫೈರ್ ಮಾಡಿದ್ರೆ ಕಷ್ಟವಾಗುತ್ತೆ. ಹೀಗಾಗಿ ಸದ್ಯಕ್ಕೆ ಶೋಧ ಕಾರ್ಯ ಸ್ಥಗಿತಗೊಳಿಸಿ ಆರೋಪಿ ಮತ್ತು ಬಾಲಕಿ ರುಂಡ ಹುಡುಕಾಟ ಇವತ್ತಿಗೆ ಮುಂದೂಡಲಾಗದೆ ಎಂದ್ರು.

ಇದನ್ನೂ ಓದಿ: ಬಸವ ಜಯಂತಿ ದಿನದಂದೇ ಅನಾಹುತ.. ರಥದ ಚಕ್ರಕ್ಕೆ ಸಿಲುಕಿ ಭಕ್ತ ಸಾವು

ಒಟ್ಟಿನಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸ್ ಮತ್ತು ಕೊಲೆ ಕೇಸ್‌ ದಾಖಲಿಸಿದ್ದು, ಬಂಧನಕ್ಕಾಗಿ ಶೋಧ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದ್ರೆ ವಯಸ್ಕಳಲ್ಲದ ಕಾರಣ ಮದುವೆ ಮುಂದೂಡಿದ್ದಕ್ಕೆ ಬಾಲಕಿಯ ತಲೆ ಕತ್ತರಿಸಿದ್ದು ಎಷ್ಟು ಅಂತ ಜನರು ಪ್ರಶ್ನೆ ಮಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಗು: SSLC ಬಾಲಕಿಯ ರುಂಡವೂ ಸಿಕ್ಕಿಲ್ಲ, ಆರೋಪಿಯ ಸುಳಿವೂ ಇಲ್ಲ.. ಕೊಲೆಗಾರ ಎಲ್ಲಿ ಹೋದ?

https://newsfirstlive.com/wp-content/uploads/2024/05/mdk3.jpg

Load More