Advertisment

ಕೊಹ್ಲಿಯನ್ನು ಕಾಣುವಾಸೆ.. 58km ಸೈಕಲ್​ ಏರಿ ಬಂದ 10ನೇ ತರಗತಿ ಬಾಲಕ

author-image
AS Harshith
Updated On
ಕೊಹ್ಲಿಯನ್ನು ಕಾಣುವಾಸೆ.. 58km ಸೈಕಲ್​ ಏರಿ ಬಂದ 10ನೇ ತರಗತಿ ಬಾಲಕ
Advertisment
  • ಕೊಹ್ಲಿ ನೋಡಲು ಓಡೋಡಿ ಬಂದ 10ನೇ ತರಗತಿ ಬಾಲಕ
  • 58km​​ ಸೈಕಲ್​ ತುಳಿದುಕೊಂಡು ಕೊಹ್ಲಿ ನೋಡಲು ಬಂದ
  • 7 ಗಂಟೆಗಳ ಕಾಲ ಸೈಕಲ್​ ತುಳಿದುಕೊಂಡು ಬಂದ ಅಭಿಮಾನಿ

ವಿರಾಟ್​​ ಕೊಹ್ಲಿಗೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಫ್ಯಾನ್ಸ್​ ಇದ್ದಾರೆ. ಕೊಹ್ಲಿ ಏರ್​ಫೋರ್ಟ್​ನಲ್ಲಿ ಕಾಣಿಸಿಕೊಂಡರೆ ಮುಗಿಬೀಳುವವರೇ ಹೆಚ್ಚು. ಇನ್ನು ಮೈದಾನಕ್ಕೆ ಇಳಿದಾಗ ಹೇಳುವುದು ಬೇಡ. ಕೊಹ್ಲಿಯನ್ನು ಕಾಣಲು ಎಲ್ಲೆಲ್ಲಿಂದಲೋ ಬರುವವರು ಇದ್ದಾರೆ. ಅದರಂತೆಯೇ 15 ವರ್ಷದ ಬಾಲಕನು ಕೊಹ್ಲಿಯನ್ನು ಕಾಣಲು 58 ಕಿಲೋ ಮೀಟರ್​​ ಸೈಕಲ್​ ತುಳಿದುಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ.

Advertisment

ಇದನ್ನೂ ಓದಿ: ಒಂದೇ ಇನ್ನಿಂಗ್ಸ್​​ನಲ್ಲಿ 600ಕ್ಕೂ ಅಧಿಕ ರನ್.. ಮೂವರು ಶತಕ, ಡಬಲ್ ಸೆಂಚುರಿ ಮಿಸ್; ಬೆಚ್ಚಿಬಿದ್ದ ಕಿವೀಸ್

ಕಾರ್ತಿಕ್​ ಎಂಬ ಬಾಲಕನು ಕೊಹ್ಲಿಯ ಅಪ್ಪಟ ಅಭಿಮಾನಿ. ಕಾನ್ಪುರದ ಗ್ರೀನ್​ ಪಾರ್ಕ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿಯನ್ನು ಕಾಣಲು ಈತ ಸೈಕಲು ಏರಿ ಬಂದಿದ್ದಾನೆ. ಬರೋಬ್ಬರಿ 58 ಕಿಲೋ ಮೀಟರ್​ ಸೈಕಲ್​ ತುಳಿದಿದ್ದಾನೆ.

Advertisment


">September 27, 2024

ಇದನ್ನೂ ಓದಿ: ಮಹಾಕಾಳೇಶ್ವರ ದೇಗುಲದ ಆವರಣದ ಗೋಡೆ ಕುಸಿತ; 2 ಸಾವು, ನಾಲ್ವರಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ಅಂದಹಾಗೆಯೇ ಕಾರ್ತಿಕ್​ ಉನ್ನಾವೋದಿಂದ ಕಾನ್ಪುರಕ್ಕೆ ಪ್ರಯಾಣ ಬೆಳೆಸಿದ್ದಾನೆ. 7 ಗಂಟೆಗಳ ಕಾಲ ಸೈಕಲ್​ ತುಳಿದು ಕೊಹ್ಲಿಯನ್ನು ನೋಡಲು ಬಂದಿದ್ದಾನೆ. ಬೆಳಗ್ಗೆ 4 ಗಂಟೆಗೆ ಸೈಕಲ್​ ತುಳಿಯಲು ಪ್ರಾರಂಭಿಸಿದ್ದಾನೆ. ಅಂದಹಾಗೆಯೇ ಕಾರ್ತಿಕ್​ 10ನೇ ತರಗತಿ ಓದುತ್ತಿದ್ದು, ಕೊಹ್ಲಿ ನೋಡಲು ಆತನ ಪೋಷಕರು ಒಪ್ಪಿಗೆ ನೀಡಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment