8211km ಪ್ರಯಾಣ.. ಭಾರತಕ್ಕೆ ವಾಪಾಸ್ಸಾದ ವಿರಾಟ್ ಕೊಹ್ಲಿ
ಬಾಂಗ್ಲಾ ಟೆಸ್ಟ್ ಸರಣಿಗಾಗಿ ಓಡೋಡಿ ಬಂದ ಕಿಂಗ್ ಕೊಹ್ಲಿ
ಕೊಹ್ಲಿ ಅಭ್ಯಾಸದ ಹಿಂದಿದೆ ಹಲವು ಲೆಕ್ಕಾಚಾರ
ಎಲ್ಲಿ ವಿರಾಟ್ ಕೊಹ್ಲಿ ಇರ್ತಾರೋ ಅಲ್ಲಿ ಒಂದು ಸೆನ್ಸೇಷನ್ ಇದ್ದೇ ಇರುತ್ತೆ. ಕಳೆದ 2 ತಿಂಗಳಿಂದ ವಿದೇಶದಲ್ಲಿ ನೆಲೆಸಿದ್ದ ಕೊಹ್ಲಿ ಕೊನೆಗೂ ಭಾರತಕ್ಕೆ ವಾಪಾಸ್ಸಾಗಿದ್ದಾರೆ. 18 ತಿಂಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು, ನಿನ್ನೆ ಬೆಳಗಿನ ಜಾವ 4 ಗಂಟೆಗೆ ಚೆನ್ನೈಗೆ ಬಂದಿಳಿದ್ರು. ಫೀಲ್ಡ್ಗೆ ವಾಪಾಸ್ಸಾದ ಬೆನ್ನಲ್ಲೇ ಕ್ರಿಕೆಟ್ ಲೋಕ ಕೊಹ್ಲಿಯನ್ನ ಕೊಂಡಾಡ್ತಿದೆ. ಕಿಂಗ್ ಕೊಹ್ಲಿಯ ಕಮಿಟ್ಮೆಂಟ್ಗೆ ಫ್ಯಾನ್ಸ್ ಸಲಾಂ ಅಂತಿದ್ದಾರೆ. ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?.
ಇಂಡೋ-ಬಾಂಗ್ಲಾ ಟೆಸ್ಟ್ ಸರಣಿ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮೊದಲ ಟೆಸ್ಟ್ ಆರಂಭಕ್ಕೆ ಕೇವಲ 5 ದಿನಗಳು ಮಾತ್ರ ಬಾಕಿ. ಸಪ್ಟೆಂಬರ್ 19ರಿಂದ ಚೆಪಾಕ್ನಲ್ಲಿ ಫಸ್ಟ್ ಟೆಸ್ಟ್ ಆರಂಭವಾಗಲಿದ್ದು, ಟೀಮ್ ಇಂಡಿಯಾ ನಿನ್ನೆಯಿಂದ ಅಭ್ಯಾಸ ಆರಂಭಿಸಿದೆ. ಆಟಗಾರರು, ಸಪೋರ್ಟ್ಸ್ ಸ್ಟಾಫ್ಸ್ ಚೆನ್ನೈಗೆ ಬಂದಿಳಿದಿದ್ದು, ಚೆಪಾಕ್ನಲ್ಲಿ ನಿನ್ನೆಯಿಂದ ಅಭ್ಯಾಸ ಆರಂಭಿಸಿದ್ದಾರೆ.
ಮಿಷನ್ WTC ಫೈನಲ್.. ಚೆಪಾಕ್ನಲ್ಲಿ ಸಿದ್ಧತೆ ಆರಂಭ.!
ಚೆಪಾಕ್ನಲ್ಲಿ ಆರಂಭವಾಗೋ ಮೊದಲ ಟೆಸ್ಟ್ ಪಂದ್ಯದೊಂದಿಗೆ ಟೀಮ್ ಇಂಡಿಯಾದ ಟೆಸ್ಟ್ ಸೀಸನ್ ಆರಂಭವಾಗಲಿದೆ. ಬರೋಬ್ಬರಿ 10 ಟೆಸ್ಟ್ ಪಂದ್ಯಗಳ ಬ್ಯಾಕ್ ಟು ಬ್ಯಾಕ್ ಸವಾಲು ಟೀಮ್ ಇಂಡಿಯಾದ ಮುಂದಿದೆ. ಈ ಪಂದ್ಯಗಳಲ್ಲಿ ಅಬ್ಬರಿಸಿ WTC ಫೈನಲ್ಗೆ ಎಂಟ್ರಿಕೊಡೋ ತವಕದಲ್ಲಿ ಟೀಮ್ ಇಂಡಿಯಾ ಇದೆ. WTC ಫೈನಲ್ ಗುರಿಯಾಗಿಸಿಕೊಂಡು ನಿನ್ನೆಯಿಂದ ಚೆಪಾಕ್ನಲ್ಲಿ ಸಿದ್ಧತೆ ಶುರುವಾಗಿದೆ. ರೋಹಿತ್, ಬೂಮ್ರಾ, ಪಂತ್, ರಾಹುಲ್ ಎಲ್ಲರೂ ತಂಡ ಕೂಡಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಆದ್ರೆ, ಉಳಿದೆಲ್ಲರಿಗಿಂತ ಹೆಚ್ಚು ಗಮನ ಸೆಳೆದಿರೋದು ವಿರಾಟ್ ಕೊಹ್ಲಿ.! ಹಾಗೂ ಕೊಹ್ಲಿಯ ಕಮಿಟ್ಮೆಂಟ್.!
Virat came directly to Chennai airport from London at 4 AM in the morning🤍#ViratKohli pic.twitter.com/KNkOriDX2K
— 𝙒𝙧𝙤𝙜𝙣🥂 (@wrognxvirat) September 13, 2024
8211 ಕಿಲೋ ಮೀಟರ್ ಪ್ರಯಾಣ ಮಾಡಿದ ಕೊಹ್ಲಿ
ಟೀಮ್ ಇಂಡಿಯಾದ ಯಾವುದೇ ಸರಣಿ ಇರಲಿ, ಪಂದ್ಯ ಇರಲಿ, ಅಲ್ಲಿ ವಿರಾಟ್ ಕೊಹ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರ್ತಾರೆ. ನಿನ್ನೆಯಿಂದ ಆರಂಭವಾದ ಟೀಮ್ ಇಂಡಿಯಾದ ಪ್ರಾಕ್ಟಿಸ್ ಸೆಷನ್ನಲ್ಲೂ ಕೊಹ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಕೊಹ್ಲಿಯ ಕಮಿಟ್ಮೆಂಟ್ಗೆ ಕ್ರಿಕೆಟ್ ಲೋಕವೇ ಉಘೇ ಉಘೇ ಅಂತಿದೆ.
ಇದನ್ನೂ ಓದಿ: KL ರಾಹುಲ್ ಎಡ ತೋಳಿನ ಮೇಲಿದೆ ಲೈಟ್ಹೌಸ್ ಟ್ಯಾಟು! ಇದು ಏನನ್ನ ನೆನಪಿಸುತ್ತೆ ಗೊತ್ತಾ?
ಶ್ರೀಲಂಕಾ ಸರಣಿ ಅಂತ್ಯದ ಬಳಿಕ ಕೊಲಂಬೋದಿಂದ ನೇರವಾಗಿ ಲಂಡನ್ಗೆ ಹಾರಿದ್ದ ಕೊಹ್ಲಿ, ಭಾರತಕ್ಕೆ ವಾಪಾಸ್ಸಾಗಿದ್ದು ನಿನ್ನೆ ಬೆಳಗಿನ ಜಾವ. ಸುಮಾರು 8211 ಕಿಲೋ ಮೀಟರ್ ದೂರವನ್ನ ಕ್ರಮಿಸಿ ಬಂದ ಕೊಹ್ಲಿ, ಜರ್ನಿ ಮಾಡಿದ್ದು ಬರೋಬ್ಬರಿ 12 ಗಂಟೆ ಕಾಲ.! ಇಷ್ಟು ದೂರ, ಇಷ್ಟು ಸುದೀರ್ಘ ಅವಧಿಯ ಜರ್ನಿ ಮಾಡಿದ ಮೇಲೆ ಎಂತವರಾದ್ರೂ ಸ್ವಲ್ಪ ವಿಶ್ರಾಂತಿ ಬೇಕು ಅಂತಾರೆ. ಆದ್ರೆ, ಕೊಹ್ಲಿ ರೆಸ್ಟ್ಗೆ ಕೊಕ್ ಕೊಟ್ಟು, ಡೈರೆಕ್ಟ್ ಪ್ರಾಕ್ಟಿಸ್ ಸೆಷನ್ಗೆ ಹಾಜಾರಾಗಿದ್ದಾರೆ. ನೆಟ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಕೊಹ್ಲಿಯ ಈ ಕಮಿಟ್ಮೆಂಟ್ಗೆ ಕ್ರಿಕೆಟ್ ಲೋಕ ಫಿದಾ ಆಗಿದೆ.
2 ತಿಂಗಳಿಂದ ಮೈದಾನದಿಂದ ದೂರ ದೂರ..!
ಶ್ರೀಲಂಕಾ ಎದುರು 3 ಪಂದ್ಯಗಳ ಏಕದಿನ ಸರಣಿ ಆಡಿದ ಬಳಿಕ ಕೊಹ್ಲಿ, ಸಂಪೂರ್ಣವಾಗಿ ಮೈದಾನದಿಂದ ದೂರ ಉಳಿದಿದ್ದಾರೆ. ಕೊನೆಯದಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದು, ಈ ವರ್ಷ ಜನವರಿ 3ಕ್ಕೆ! 9 ತಿಂಗಳ ಬಳಿಕ ರೆಡ್ಬಾಲ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿರೋ ಕೊಹ್ಲಿ, ಕಳೆದ 1 ತಿಂಗಳಿಂದ ಬ್ಯಾಟ್ನ ಮುಟ್ಟೇಯಿಲ್ಲ. ಹೀಗಾಗಿ ಅಭ್ಯಾಸದ ಅಗತ್ಯತೆ ಹೆಚ್ಚಿದೆ. ಇದನ್ನ ಅರಿತೇ ನೋ ರೆಸ್ಟ್ ಅಂದಿರೋ ಕೊಹ್ಲಿ ನೇರವಾಗಿ ಸಮಾರಾಭ್ಯಾಸದ ಅಖಾಡಕ್ಕೆ ಧುಮುಕಿದ್ದಾರೆ.
ರೆಡ್ಬಾಲ್ ಕ್ರಿಕೆಟ್ನಲ್ಲಿ ಕೊಹ್ಲಿಗೆ ಶತಕದ ಬರ.!
3 ವರ್ಷಗಳ ಕಾಲ ಶತಕದ ಬರ ಅನುಭವಿಸಿದ ಕೊಹ್ಲಿ, ವೈಟ್ಬಾಲ್ ಕ್ರಿಕೆಟ್ನಲ್ಲಿ ಕೊನೆಗೂ ಹಳೆ ಖದರ್ಗೆ ಮರಳಿದ್ರು. ಆದ್ರೆ, ರೆಡ್ಬಾಲ್ ಕ್ರಿಕೆಟ್ನಲ್ಲಿ ಹಳೆ ರಿಧಮ್ ಕಂಡುಕೊಂಡಿಲ್ಲ. 2019 ನವೆಂಬರ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿ ಸಿಡಿಸಿರೋದು ಕೇವಲ 2 ಶತಕ ಮಾತ್ರ. ಕೊನೆಯ ಶತಕ ಸಿಡಿಸಿ 1 ವರ್ಷದ ಮೇಲಾಗಿದೆ. ರೆಡ್ಬಾಲ್ ಕ್ರಿಕೆಟ್ನಲ್ಲಿ ರನ್ಗಳಿಕೆಗೆ ಪರದಾಡ್ತಿರೋ ಕೊಹ್ಲಿ, ಈ ವೈಫಲ್ಯವನ್ನ ಮೆಟ್ಟಿ ನಿಲ್ಲೋ ಲೆಕ್ಕಾಚಾರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: IPL 2025: ಕೆ.ಎಲ್ ರಾಹುಲ್ ಅಲ್ಲ; ಆರ್ಸಿಬಿ ತಂಡಕ್ಕೆ ಸ್ಟಾರ್ ಕನ್ನಡಿಗ ರಾಯಲ್ ಎಂಟ್ರಿ!
ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ಕೊಹ್ಲಿಗೆ ಅಗ್ನಿಪರೀಕ್ಷೆ.!
ಒಂದೆಡೆ ಟೆಸ್ಟ್ ಫಾರ್ಮೆಟ್ನಲ್ಲಿ ರನ್ಗಳಿಕೆಗೆ ಪರದಾಟ ನಡೆಸ್ತಿರೋ ಕೊಹ್ಲಿ ಪಾಲಿಗೆ ಸ್ಪಿನ್ನರ್ಗಳೇ ವಿಲನ್ಗಳಾಗಿ ಕಾಡ್ತಿದ್ದಾರೆ. ಇನ್ನೊಂದೆಡೆ ಬಾಂಗ್ಲಾದೇಶ ತಂಡದಲ್ಲಿ ಸ್ಪಿನ್ನರ್ಗಳೇ ಮ್ಯಾಚ್ ವಿನ್ನರ್ಗಳಾಗಿದ್ದಾರೆ. ಕಳೆದ ಪಾಕಿಸ್ತಾನ ಸರಣಿಯಲ್ಲಿ ಮಾಡಿದ ಮ್ಯಾಜಿಕನ್ನೇ ಮುಂದುವರೆಸೋ ಆತ್ಮವಿಶ್ವಾಸ ಬಾಂಗ್ಲಾ ಪಡೆಯಲ್ಲಿದೆ. ಹೀಗಾಗಿ ಸ್ಪಿನ್ ಚಾಲೆಂಜ್ನ ಕೊಹ್ಲಿ ಹೇಗೆ ಮೆಟ್ಟಿ ನಿಲ್ತಾರೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: 4,4,4,4,4,4,4,4,4,4,4,4,4,4,4; ದುಲೀಪ್ ಟ್ರೋಫಿಯಲ್ಲಿ ಕೊಹ್ಲಿ ಆಪ್ತನ ಸಿಡಿಲಬ್ಬರದ ಬ್ಯಾಟಿಂಗ್!
ಒಟ್ಟಿನಲ್ಲಿ, ಭಾರತಕ್ಕೆ ವಾಪಾಸ್ಸಾಗ್ತಿದ್ದಂತೆ ಅಭ್ಯಾಸದ ಅಖಾಡಕ್ಕೆ ಧುಮುಕಿರೋ ಕೊಹ್ಲಿ, ತನ್ನ ಕಮಿಟ್ಮೆಂಟ್ ಏನು ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ. ಜೊತೆಗೆ ಕಳಪೆ ಫಾರ್ಮ್ನಿಂದ ಎಚ್ಚೆತ್ತುಕೊಂಡು, ಅದರಿಂದ ಹೊರಬರಲು ಸಿದ್ಧತೆಯನ್ನೂ ಆರಂಭಿಸಿದ್ದಾರೆ. ಕಠಿಣ ಅಭ್ಯಾಸಕ್ಕೆ ಮುಂದಾಗಿರೋ ಕೊಹ್ಲಿ, ಅಸಲಿ ಅಖಾಡದಲ್ಲಿ ಬಾಂಗ್ಲಾ ಟೈಗರ್ಸ್ನ ಬೇಟೆಯಾಡಲಿ ಅನ್ನೋದು ಫ್ಯಾನ್ಸ್ ಆಶಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ