/newsfirstlive-kannada/media/post_attachments/wp-content/uploads/2024/08/KAS-Exam-2.jpg)
ಬೆಂಗಳೂರು: ಕೆಲವು ಪರೀಕ್ಷಾರ್ಥಿಗಳ ವಿರೋಧದ ನಡುವೆಯೇ ಕರ್ನಾಟಕ ಲೋಕಸೇವಾ ಆಯೋಗ (KPSC) ಆಗಸ್ಟ್ 27 ರಂದು ಕೆಎಎಸ್ ಪರೀಕ್ಷೆ ನಡೆಸಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಉಂಟಾಗಿರುವ ಗೊಂದಲ ವಿವಾದಕ್ಕೆ ಕಾರಣವಾಗಿದೆ. ಕನ್ನಡ ಪ್ರಶ್ನೆಗಳಲ್ಲಿನ ತಪ್ಪುಗಳು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಇಂಗ್ಲಿಷ್​ನಿಂದ ಕನ್ನಡ ಅನುವಾದದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಕೆಪಿಎಸ್ಸಿ ಹಾಗೂ ಸರ್ಕಾರದ ವಿರುದ್ಧ ಪರೀಕ್ಷಾರ್ಥಿಗಳು ಕೆಂಡಕಾರುತ್ತಿದ್ದಾರೆ.
ಇದನ್ನೂ ಓದಿ:KAS ಪರೀಕ್ಷೆ ಬೆನ್ನಲ್ಲೇ ಕೆಪಿಎಸ್​ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಭವ್ಯ ನರಸಿಂಹಮೂರ್ತಿ..!
ಪರೀಕ್ಷಾರ್ಥಿಗಳು ಕೆಪಿಎಸ್​ಸಿ ಮಾಡಿರುವ 20 ತಪ್ಪಗಳು ಬಗ್ಗೆ ಆರೋಪ ಮಾಡಿದ್ದಾರೆ
- ಪ್ರಶ್ನೆಪತ್ರಿಕೆ ಕನ್ನಡ ಅನುವಾದದಲ್ಲಿ ಘೋರ ತಪ್ಪುಗಳು, ಒಟ್ಟು 58 ಪ್ರಶ್ನೆಗಳಲ್ಲಿ ತಪ್ಪಾಗಿದೆ. (ಉದಾಹರಣೆ : State Assembly ವಿಧಾನಸಭೆ ಎಂದಾಗಬೇಕು KPSC ನೀಡಿದ್ದು ರಾಜ್ಯ ಸಭೆ)
- ಏಪ್ರಿಲ್ ತಿಂಗಳಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿರೋದು, ನಿಯಮಗಳ ಪ್ರಕಾರ ಪರೀಕ್ಷೆಯ 1 ವಾರ ಮುಂಚೆ ಸಿದ್ಧಪಡಿಸಬೇಕು
- ವಾರದ ಮಧ್ಯ ಕೆಲಸದ ದಿನ ಪರೀಕ್ಷೆ ನಿಗದಿ, ಸಾಮಾನ್ಯವಾಗಿ ಭಾನುವಾರ ನಡೆಯುತ್ತಿತ್ತು
- ಎಲ್ಲ ಹುಡುಗರಿಗೆ ದೂರದ ಊರುಗಳಲ್ಲಿ ಪರೀಕ್ಷೆ ನಿಗದಿ ಆಗಿದೆ. ಚಿತ್ರದುರ್ಗದವರಿಗೆ ಮಂಗಳೂರು, ಉಡುಪಿಯವರಿಗೆ ದಾವಣಗೆರೆ ಇತ್ಯಾದಿ
- ಪರೀಕ್ಷಾ ಕೇಂದ್ರದ ಒಳಗೆ ಬರುವುದರೊಳಗೆ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಆಗಿರೋ ಆರೋಪ, ಇದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ
- ಪ್ರಶ್ನೆ ಪತ್ರಿಕೆ ತಡವಾಗಿ ವಿತರಣೆ, ಈ ಸಂಬಂಧ ಬಳ್ಳಾರಿ, ಚಿಕ್ಕ ಬಳ್ಳಾಪುರದಲ್ಲಿ ಪ್ರತಿಭಟನೆ ನಡೆದಿದೆ.
- ತೀವ್ರ ಕಠಿಣ ಪ್ರಶ್ನೆ
- ಪ್ರಶ್ನೆಗಳು ಅಭ್ಯರ್ಥಿಯ ವಿಷಯ ಜ್ಞಾನ ಪರೀಕ್ಷಿಸುವ ಬದಲು, ಫ್ಯಾಕ್ಟ್ಸ್ ಚೆಕಿಂಗ್ ತರಹ ಇದ್ದವು ಅನ್ನೋ ಆರೋಪ ಇದೆ
- ಅತೀ ದೀರ್ಘವಾದ ಪತ್ರಿಕೆ -72 ಪುಟಗಳು ಒಂದು ಪತ್ರಿಕೆ. UPSC ನೀಡೋದೇ 40 ಪುಟಗಳ ಪತ್ರಿಕೆ ಆಗಿದೆ
- ಕೆಲವು ಕೇಂದ್ರಗಳಲ್ಲಿ ಬಯೋ ಮೆಟ್ರಿಕ್ ಚೆಕಿಂಗ್ ನಡೆಸಿಲ್ಲ. ಉದಾಹರಣೆ ಮದಕರಿ ನಾಯಕ ಚಿತ್ರದುರ್ಗ ಶಾಲೆ
- ಪರೀಕ್ಷೆ ಮುಂದೂಡಲು ಒತ್ತಾಯ ಬಂದಾಗ, ತರಾತುರಿಯಲ್ಲಿ ನಾಲ್ಕು ದಿನ ಮೊದಲೇ ಜಿಲ್ಲಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ರವಾನೆ ಆಗಿದೆ
- ಬೇಕೆಂದಲೇ ಮುಂದೂಡಿಕೆ ಹೋರಾಟ ಹತ್ತಿಕ್ಕಲು ಪ್ರಶ್ನೆ ಪತ್ರಿಕೆ ರವಾನಿಸುವ ಮಾರ್ಗ ಉಲ್ಲೇಖ ಇರುವ ಗೌಪ್ಯ ಮಾಹಿತಿಯ ದಾಖಲೆ ಬಿಡುಗಡೆ ಆಗಿದೆ ಅನ್ನೋ ಆರೋಪ
- ಆಕ್ಷೇಪಣೆ ಸಲ್ಲಿಸಬೇಕೆಂದರೆ ಪ್ರತೀ ಪ್ರಶ್ನೆಗೆ 50 ಕಟ್ಟಬೇಕು, ಆ ಹಣ ವಾಪಸ್ ಬರಲ್ಲ
- ಅಪ್ಲಿಕೇಶನ್ ಕೇಳೋದು ಆನ್​ಲೈನ್​​ನಲ್ಲಿ, ಆದರೆ ಪರೀಕ್ಷೆ ನಡೆದ ಬಳಿಕ ಆಕ್ಷೇಪಣೆ ಸಲ್ಲಿಸಲು ಪೋಸ್ಟಲ್ ಬಳಕೆ. ದುಡ್ಡು ಕೂಡ DD ಮೂಲಕ ಬೇಡಿಕೆ. ಪ್ರಕ್ರಿಯೆ ಸಂಕೀರ್ಣ - ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಲು ಹೋಗಬಾರದು ಅಂತಾ ಹೀಗೆ ಮಾಡಿದ್ದಾರೆಂಬ ಆರೋಪ
- ಬೇಕು ಅಂತಲೇ ಕೀ ಉತ್ತರ ತಪ್ಪು ನೀಡಿರೋದು. ಸರಳ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡೋದು. ಆಕ್ಷೇಪಣೆಯಲ್ಲಿ ದುಡ್ಡು ಮಾಡುವ ಹುನ್ನಾರ ಎಂಬ ಆರೋಪ ಇದೆ
- ಸಿಲೆಬಸ್ ಪ್ರಕಾರ ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸದೆ ಇದ್ದದ್ದು, ವಿಷಯವಾರು ಅಂಕ ವಿಂಗಡನೆ ನಿಯಮ ಪಾಲಿಸಲಿಲ್ಲ ಎಂಬ ಆರೋಪ ಇದೆ. ಉದಾಹರಣೆ: ಅಧಿಸೂಚನೆ ಪ್ರಕಾರ ಮೆಂಟಲ್ ಎಬಿಲಿಟಿಯಿಂದ 30 ಪ್ರಶ್ನೆ ಕೇಳಬೇಕು. ಆದರೆ ಕೇಳಿದ್ದು ಬರೀ 18 ಪ್ರಶ್ನೆಗಳು.
- ವಾರದ ಮಧ್ಯೆ ಪರೀಕ್ಷೆ - ಅಂಗವಿಕಲರ ಲಿಪಿಕಾರರ ಕೊರತೆ ಸಮಸ್ಯೆ ಆಗಿದೆ
- ಪರೀಕ್ಷಾ ಕೇಂದ್ರದಲ್ಲಿ ಪರಿವೀಕ್ಷಕರು ಗೈರುಹಾಜರಾದ ಅಭ್ಯರ್ಥಿಗಳ ಮಾಹಿತಿ ಇತರರಿಗೆ ನೀಡದೆ ಇರುವುದು‘
- ಕನ್ನಡ ಮತ್ತು ಇಂಗ್ಲೀಷ್ ಪ್ರಶ್ನೆಗಳಲ್ಲಿ ತರ್ಜುಮೆ ವಿಷಯದಲ್ಲಿ ಗೊಂದಲ ಉಂಟಾದರೆ ಇಂಗ್ಲಿಷ್ ಪ್ರಶ್ನೆ ಅಂತಿಮ ಎಂಬ ಅವೈಜ್ಞಾನಿಕ ನಿಯಮ
- ಅಭ್ಯರ್ಥಿಗಳು ಪರೀಕ್ಷೆ ಮುಗಿಸಿ, ರಾತ್ರಿ ಹೊತ್ತು ತಮ್ಮ ಕಷ್ಟಗಳನ್ನು ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಹಂಚುತಿದ್ದಾಗ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ IAS ಅವರು ಟ್ವೀಟ್ ಮಾಡಿ, ತಾನು ಇವುಗಳನ್ನು ಎಂಜಾಯ್ ಮಾಡ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತೀವ್ರ ವಿರೋಧ ಬಂದಾಗ ಕೂಡಲೇ ಡಿಲೀಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us