/newsfirstlive-kannada/media/post_attachments/wp-content/uploads/2024/07/KRS.jpg)
ಮಂಡ್ಯ: ಮಳೆಯನ್ನು ನಂಬಿ ಅದೆಷ್ಟೋ ರೈತರು ಬದುಕುತ್ತಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಕೊಂಚ ರೈತರಿಗೆ ಧೈರ್ಯ ತುಂಬಿದೆ. ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದ್ದು, ಬೀಜ ಬಿತ್ತನೆ ಮಾಡಲು ರೈತರಿಗೆ ಧೈರ್ಯ ಬಂದಿದೆ.
ಮಳೆಯಿಂದಾಗಿ ಕಾವೇರಿ ಒಡಲು ತುಂಬಿಸಿಕೊಳ್ಳುತ್ತಿದ್ದು, ಸದ್ಯ 103.90 ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.
ಇದನ್ನೂ ಓದಿ: ಬಸ್ ಮತ್ತು ಹಾಲಿನ ಟ್ಯಾಂಕರ್ ನಡುವೆ ಭೀಕರ ಅಪಘಾತ; 18 ಜನರು ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ
ಇಂದು ಡ್ಯಾಂಗೆ 5,666 ಕ್ಯೂಸೆಕ್ ಒಳ ಹರಿವು ಬಂದಿದೆ. ನಿನ್ನೆ 6,600 ಕ್ಯೂಸೆಕ್ ಇದ್ದ ಒಳ ಹರಿವು ಗಮನಿಸಿದಾಗ ಇಂದು ಕೊಂಚ ಕಡಿಮೆಯಾಗಿದೆ.
ಇನ್ನು ಕೊಡಗು ಭಾಗದಲ್ಲಿ ಮಳೆ ತಗ್ಗಿರುವ ಹಿನ್ನಲೆ ಇಂದು ಒಳಹರಿವು ಮತ್ತಷ್ಟು ಇಳಿಕೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 103.90 ಅಡಿ ನೀರು ಭರ್ತಿಯಾಗಿದೆ. 49.452 ಟಿಎಂಸಿ ಸಾಮರ್ಥ್ಯ ಡ್ಯಾಂನಲ್ಲಿ 26.023 ಟಿಎಂಸಿ ನೀರು ಸಂಗ್ರಹವಾಗಿದೆ. ಕುಡಿಯುವ ಉದ್ದೇಶಕ್ಕಾಗಿ 581 ಕ್ಯೂಸೆಕ್ ಡ್ಯಾಂನಿಂದ ಹೊರಕ್ಕೆ ಹರಿಬಿಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಳೆಯ ಅವಾಂತರ; ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಈ ನದಿ! ಸೇತುವೆ ಮುಳುಗಡೆ
ಇಂದಿನ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 103.90 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 26.023 ಟಿಎಂಸಿ
ಒಳ ಹರಿವು - 5,666 ಕ್ಯೂಸೆಕ್
ಹೊರ ಹರಿವು - 581 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ