newsfirstkannada.com

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌; ರಾಜ್ಯ ಸರ್ಕಾರದ ಅತಿ ದೊಡ್ಡ ಫೇಲ್ಯೂರ್- ಕೆ. ಎಸ್‌ ಈಶ್ವರಪ್ಪ

Share :

Published March 1, 2024 at 7:55pm

    ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಎರಡು ಬಾಂಬ್​ ಸ್ಫೋಟ

    ರಾಜ್ಯ ಸರ್ಕಾರದ ಇಂಟಲಿಜೆನ್ಸಿ ಫೇಲ್ಯೂರ್ ಎಂದ ಕೆ.ಎಸ್‌ ಈಶ್ವರಪ್ಪ ಕಿಡಿ

    ಬಾಂಬ್ ಸ್ಫೋಟದ ಜೊತೆಗೆ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಬಂಧಿಸಿ

ಶಿವಮೊಗ್ಗ: ಬೆಂಗಳೂರು ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟ ಸಂಭವಿಸಿದೆ. ಮಧ್ಯಾಹ್ನ ಒಂದು ಗಂಟೆಗೆ ಬಾಂಬ್ ಬ್ಲಾಸ್ಟ್ ಆಗಿದ್ದು, ಇಷ್ಟೊತ್ತಾದರೂ ಯಾವ ಸಂಘಟನೆಯವರು ಬ್ಲಾಸ್ಟ್ ಮಾಡಿದ್ದಾರೆ ಎಂಬುದನ್ನ ಇನ್ನೂ ತಿಳಿಯೋದಕ್ಕೆ ಆಗಿಲ್ಲ. ಅವರನ್ನ ಬಂಧಿಸುವಂತಹ ಕೆಲಸ ಇನ್ನೂ ಆಗಿಲ್ಲ. ಆದರೆ ಯಾರನ್ನು ಬಂಧಿಸಬೇಕು ಎಂಬ ಕಲ್ಪನೆ ನಿಮಗೆ ಇನ್ನೂ ಇಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ  ಮಾಜಿ ಡಿಸಿಎಂ, ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಕಿಡಿಕಾರಿದ್ದಾರೆ.

ವೈಟ್‌ ಫೀಲ್ಡ್‌ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ 60ಕ್ಕೂ ಹೆಚ್ಚು ಜನರು ಇರುವ ಸಂದರ್ಭದಲ್ಲೇ ಬಾಂಬ್​ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.  ಈ ಬಗ್ಗೆ ಮಾತಾಡಿದ ಅವರು, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಸುಮಾರು ಎಂಟು ಹತ್ತು ಜನರಿಗೆ ಪೆಟ್ಟಾಗಿದೆ. ಇದು ರಾಜ್ಯ ಸರ್ಕಾರದ ಇಂಟಲಿಜೆನ್ಸಿ ಫೇಲ್ಯೂರ್. ಒಂದು ಗಂಟೆಗೆ ಬಾಂಬ್ ಬ್ಲಾಸ್ಟ್ ಆದರೂ ಕೂಡ ಈಗಾಗಲೇ ಆರು ಗಂಟೆ ಆಗಿದೆ. ಇಷ್ಟೊತ್ತಾದರೂ ಯಾವ ಸಂಘಟನೆಯವರು ಬ್ಲಾಸ್ಟ್ ಮಾಡಿದ್ದಾರೆ ಎಂಬುದನ್ನ ಇನ್ನೂ ತಿಳಿಯೋದಕ್ಕೆ ಆಗಿಲ್ಲ. ಅವರನ್ನ ಬಂಧಿಸುವಂತಹ ಕೆಲಸ ಇನ್ನೂ ಆಗಿಲ್ಲ. ಸುತ್ತಲೂ ಸಿಸಿ ಕ್ಯಾಮೆರಾಗಳು ಇವೆ ಎನ್ನುವ ಮಾತನ್ನ ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಯಾರನ್ನು ಬಂಧಿಸಬೇಕು ಎಂಬ ಕಲ್ಪನೆ ನಿಮಗೆ ಇನ್ನೂ ಇಲ್ವಾ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನು ಓದಿ: VIDEO: ಹೋಟೆಲ್​ ಬ್ಲಾಸ್ಟ್​​ ವಿಡಿಯೋ ನ್ಯೂಸ್​ಫಸ್ಟ್​ಗೆ ಲಭ್ಯ; ಮಾಸ್ಟರ್​ ಮೈಂಡ್​ ಯಾರು? ಆಗಿದ್ದೇನು?

ಹೀಗೆ ಮಾತನ್ನು ಮುಂದುವರೆಸಿದ ಅವರು, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಆಯ್ತು. ಆಗ ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮ ಬ್ರದರ್ಸ್ ಅಂತ ಹೇಳಿದ್ರು. ಅವರು ಏನೇ ತಪ್ಪು ಮಾಡಿಲ್ಲ ಅಂತ ಹೇಳಿದ್ರು. ತನಿಖೆ ನಂತರ ಅವರ ಹಿಂದೆ ಸಾಕಷ್ಟು ಜನ ಇದ್ದಾರೆ ಎಂಬುದು ಗೊತ್ತಾಯ್ತು. ಅದರ ಹಿಂದೆ ದೊಡ್ಡ ಜಾಲವಿದೆ ಹಾಗೂ ರಾಷ್ಟ್ರಧ್ವೈಗಳ ಸಂಘಟನೆಯ ಇದೆ ಗೊತ್ತಾಯ್ತು. ರಾಜ್ಯ ಸರ್ಕಾರ ಇದನ್ನ ಹಗುರವಾಗಿ ತೆಗೆದುಕೊಳ್ಳುತ್ತಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗುತ್ತಿದೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಕೂಡ ಇದೆ. ಇದನ್ನ ರಾಷ್ಟ್ರ ಧ್ವನಿಗಳು ಬಳಸಿಕೊಂಡು ಕರ್ನಾಟಕದಲ್ಲಿ ಹಿಂದೆ ಇದ್ದ ಕಾಶ್ಮೀರ ಹಾಗೆ ಬಾಂಬ್ ಸ್ಫೋಟ ಹಾಗೂ ಗಲಾಟೆಗಳನ್ನ ಶಿಫ್ಟ್ ಆಗಿದೆ ಎನ್ನುವ ಅನುಮಾನ ಬರುತ್ತಿದೆ. ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಹೋಗಿ ಆ ಶಕ್ತಿ ನಮ್ಮಲ್ಲಿದೆ ಎನ್ನುವ ಹಾಗೆ ತೋರಿಸಿಕೊಟ್ಟಾಗಿದೆ. ಆದರೆ ರಾಜ್ಯ ಸರ್ಕಾರದ ಪ್ರಮುಖರು ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿ ಇಲ್ಲ ಎಂದು ಹೇಳುತ್ತಿದ್ದಾರೆ. ಎಫ್​ಎಸ್​ಎಲ್ ರಿಸಲ್ಟ್ ಬಂದರೂ ಕೂಡ ಬಹಿರಂಗ ಮಾಡುತ್ತಿಲ್ಲ. ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದಕ್ಕೆ ಯಾವುದೇ ಅನುಮಾನವಿಲ್ಲ. ಎಲ್ಲಾ ಟಿವಿ ಮಾಧ್ಯಮಗಳಲ್ಲೂ ಇದು ಪ್ರಸಾರವಾಗಿದೆ. ಎಲ್ಲರೂ ಕಿವಿ ಹಾರ ಅದನ್ನ ಕೇಳಿದ್ದಾರೆ ಹಾಗೂ ಕಣ್ಣಾರೆ ನೋಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಗೆ ಇಲ್ಲ ಎಂದು ಹೇಳುತ್ತಾರಲ್ಲ ಅವರಿಗೆ ಕಿವಿನೇ ಇಲ್ವಾ.

ಇದನ್ನು ಓದಿ: ಕಸದ ಬುಟ್ಟಿಯಲ್ಲಿದ್ದ ನಿಗೂಢ ವಸ್ತು ಸ್ಫೋಟ.. ರಾಮೇಶ್ವರಂ ಕೆಫೆಯಲ್ಲಿ ತಪ್ಪಿದೆ ದೊಡ್ಡ ಅನಾಹುತ

ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ರಕ್ಷಣೆ ಕೂಡ ಕೊಡಲಾಗುತ್ತಿದೆ. ವರದಿ ಬರುವ ಮುನ್ನವೇ ಕೂಗೆ ಇಲ್ಲ ಅನ್ನುವ ರೀತಿ ಹೇಳುತ್ತಿದ್ದಾರೆ. ಆದರೆ ಗೃಹ ಸಚಿವ ಪರಮೇಶ್ವರ್ ಅವರು ಆ ರೀತಿ ಹೇಳಲಿಲ್ಲ. ಗೃಹ ಮಂತ್ರಿ ಪರಮೇಶ್ವರ್ ಅವರು ಸಾಕಷ್ಟು ಪ್ರಯತ್ನವನ್ನ ಮಾಡಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಮಾತನ್ನ ಕೂಗೆ ಇಲ್ಲ ಅನ್ನೋದನ್ನ ಅವರು ಎಲ್ಲೂ ಹೇಳಿಲ್ಲ. ಯಾರು ಆ ರೀತಿ ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಹಾಗೂ ಉಳಿದ ಸಚಿವರುಗಳು ಆ ರೀತಿ ಹೇಳಿರುವುದರಿಂದ ಪಾಕಿಸ್ತಾನ ಪರವಾಗಿ ಇರುವವರ ಬೆಂಬಲಕ್ಕೆ ನಿಂತಂತೆ ಆಗಿದೆ. ಅದರ ಪ್ರತಿಫಲ ಇಂದು ನಾವು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದ ಮೂಲಕ ನೋಡುತ್ತಿದ್ದೇವೆ. ಬಾಂಬ್ ಸ್ಫೋಟದ ಜೊತೆಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ಕೂಡ ಕೂಡಲೇ ಬಂಧಿಸಿ ಎಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌; ರಾಜ್ಯ ಸರ್ಕಾರದ ಅತಿ ದೊಡ್ಡ ಫೇಲ್ಯೂರ್- ಕೆ. ಎಸ್‌ ಈಶ್ವರಪ್ಪ

https://newsfirstlive.com/wp-content/uploads/2024/01/ks-eshwarappa.jpg

Load More