/newsfirstlive-kannada/media/post_attachments/wp-content/uploads/2024/09/Thalapathy69-KVN-Productions.jpg)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಹಾಗೂ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗೆ ಬಂಡವಾಳ ಹೂಡಿರುವ ಪ್ರತಿಷ್ಠಿತ ಕೆವಿಎನ್ ಸಿನಿಮಾ ನಿರ್ಮಾಣ ಸಂಸ್ಥೆ ಈಗ ಮತ್ತೊಂದು ಬಿಗ್ ಸರ್‌ಪ್ರೈಸ್ ಕೊಟ್ಟಿದೆ. ತಮಿಳಿನ ಖ್ಯಾತ ನಟ ದಳಪತಿ ವಿಜಯ್​​​ ನಟನೆಯ ಹೊಸ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದೆ. ಈಗಾಗಲೇ ಎರಡು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್​ ಪ್ರೊಡಕ್ಷನ್ಸ್ ಸಂಸ್ಥೆ ಈಗ ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದು, ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.
/newsfirstlive-kannada/media/post_attachments/wp-content/uploads/2024/09/Vijay.jpg)
ಈಗಾಗಲೇ ಸಿನಿಮಾ ನಿರ್ಮಾಣ ಮಾಡುವುದಾಗಿ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಅನೌನ್ಸ್ ಮಾಡಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ, ಅವರ ಅಭಿಮಾನಿಗಳ ದಂಡು ಯಾವ ಮಟ್ಟಿನಲ್ಲಿದೆ ಹಾಗೂ ಅವರೆಲ್ಲಾ ವಿಜಯ್​ರನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಬಿಂಬಿಸುವ ವಿಡಿಯೋ ಪೋಸ್ಟ್ ಮಾಡಿದೆ. ನಾಳೆ ಅಂದ್ರೆ ಸೆಪ್ಟಂಬರ್​ 14 ರಂದು ವಿಜಯ್​ ನಟನೆಯ ಹಾಗೂ ಕೆವಿಎನ್​ ಪ್ರೊಡಕ್ಷನ್​ನ ಹೊಸ ಸಿನಿಮಾದ ಮೊದಲ ಪೋಸ್ಟರ್​ ಲಾಂಚ್ ಆಗಲಿದೆ.
ಇದೇ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆಯಾ?
ಒಂದು ಮೂಲಗಳ ಪ್ರಕಾರ ಇದು ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆಯಂತೆ. ಈ ಸಿನಿಮಾ ಬಳಿಕ ವಿಜಯ್ ಸಂಪೂರ್ಣವಾಗಿ ತಮ್ಮನ್ನು ತಾವು ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ವಿಜಯ್ ನೇತೃತ್ವದ ತಮಿಳಿಗಾ ವೆಟ್ರಿ ಕಳಗಂ ಪಕ್ಷ ಅಖಾಡಕ್ಕೆ ಇಳಿಯಲಿದೆ. ಹೀಗಾಗಿ ಇದು ವಿಜಯ್​ ಅವರ ಸಿನಿ ಜರ್ನಿಯ ಕೊನೆಯ ಚಿತ್ರವಾಗಲಿದ್ದು. ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುವ ಕನಸನ್ನು ಕಂಡಿದೆ KVN ಪ್ರೊಡಕ್ಷನ್ಸ್ ಸಂಸ್ಥೆ.
ಇದನ್ನೂ ಓದಿ:714 ಡೈಮಂಡ್.. ಜಗತ್ತಿನ ದುಬಾರಿ ವಾಚ್ ಧರಿಸಿದ ಸಲ್ಮಾನ್ ಖಾನ್; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಮೂಲಗಳ ಪ್ರಕಾರ ಈ ಸಿನಿಮಾ ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರೋ ಕಥೆ ಎಂದು ಹೇಳಲಾಗುತ್ತಿದೆ. ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಸಿನಿಮವೊಂದು ದಿವ್ಯ ಬಾಗಿಲು ತೆರೆಯಲಿದೆ ಎಂದೇ ಹೇಳಲಾಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಹೆಚ್. ವಿನೋದ್​ ಈ ಸಿನಿಮಾ ನಿರ್ದೇಶಿಸಲಿದ್ದು. ಕೆವಿಎನ್​ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಐದನೇ ಸಿನಿಮಾ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us