/newsfirstlive-kannada/media/post_attachments/wp-content/uploads/2024/05/Heavy-Rains-1.jpg)
ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿರಲಿದೆ. ಪೆಸಿಫಿಕ್ ಸಾಗರದಲ್ಲಿ ಶೀಘ್ರದಲ್ಲೇ ಲಾ ನಿನಾ (La Nina) ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರ ಪರಿಣಾಮ ಜೂನ್‌ನಿಂದ ಪ್ರಾರಂಭವಾಗುವ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು ಎಂದು ತಿಳಿಸಿದೆ.
US ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್‌ನ (NOAA) ನೀಡಿರುವ ಎಚ್ಚರಿಕೆ ಪ್ರಕಾರ ಶೀಘ್ರದಲ್ಲೇ ಲಾ ನಿನಾ ಪ್ರಕ್ರಿಯೆ ಶುರುವಾಗಲಿದೆ. ಅಂದಾಜಿನ ಪ್ರಕಾರ.. ಜೂನ್​ನಿಂದ ಆರಂಭವಾಗಲಿದೆ. ಈ ಸಂಬಂಧ NOAA ಕಳೆದ ವಾರ ಟೈಮ್ ಟೇಬಲ್ ಬಿಡುಗಡೆ ಮಾಡಿದೆ. ಅದರಲ್ಲಿ ಲಾ ನಿನಾದ ಪರಿಣಾಮವು ಜೂನ್ ಮತ್ತು ಆಗಸ್ಟ್ ಆರಂಭದಲ್ಲಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಭಾರತದಲ್ಲಿ ಭಾರೀ ಮಳೆಯಾಗಬಹುದು ಮತ್ತು ದೇಶದ ಕೆಲವು ಭಾಗಗಳಲ್ಲಿ ಭಾರೀ ಪ್ರವಾಹ ಆಗಬಹುದು ಎಂದು ಎಚ್ಚರಿಕೆ ನೀಡಿದೆ.
ಲಾ ನಿನಾ ಎಂದರೇನು..?
ಲಾ ನಿನಾ ಒಂದು ರೀತಿಯ ಹವಾಮಾನದಲ್ಲಿ ಆಗುವ ಬದಲಾವಣೆ. ಪೆಸಿಫಿಕ್ ಮಹಾಸಾಗರದಲ್ಲಿನ ಉಷ್ಣತೆಯಿಂದಾಗಿ ಉಂಟಾಗುವ ಅಲೆಗಳ ಮೇಲೆ ಪರಿಣಾಮ ಬೀರುತ್ತದೆ. ಉಷ್ಣತೆಯಿಂದ ತಾಪಮಾನವು ತುಂಬಾ ಬಿಸಿಯಾಗುತ್ತದೆ. ಈ ಕಾರಣದಿಂದ ಪಶ್ಚಿಮ ಪೆಸಿಫಿಕ್ ಪ್ರದೇಶದಲ್ಲಿ ಇರುವ ಬೆಚ್ಚಗಿನ ಮೇಲ್ಮೈ ನೀರು ಪೂರ್ವಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಇದು ಭಾರತದ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ.ಇದು ಸಾಮಾನ್ಯವಾಗಿ 9 ರಿಂದ 12 ತಿಂಗಳುಗಳವರೆಗೆ ಇರುತ್ತದೆ. ಅದರ ಪರಿಣಾಮವು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತದೆ.
/newsfirstlive-kannada/media/post_attachments/wp-content/uploads/2024/05/FARMER.jpg)
ಅಮೆರಿಕ ನೀಡಿರುವ ಮಾಹಿತಿ ಪ್ರಕಾರ.. ಲಾ ನಿನಾ ಜೂನ್​ನಿಂದ ಪ್ರಾರಂಭವಾಗುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಲಾ ನಿನಾಗೆ ಸಂಬಂಧಿಸಿ ಕೆಲವು ಅಪ್​ಡೇಟ್ಸ್​ ಸಿಗುತ್ತಿವೆ. ಭಾರತದಲ್ಲಿ ಜೂನ್​ನಿಂದ ಭಾರೀ ಮಳೆ ಆಗಲಿದೆ. ಅದರ ಅಬ್ಬರದ ಪರಿಣಾಮವು ಜೂನ್‌ನಿಂದ ಆಗಸ್ಟ್‌ವರೆಗೆ ಇರಲಿದೆ ಎಂದು ಅಮೆರಿಕ ಹೇಳಿದೆ.
ರೈತರಿಗೆ ಪ್ರಯೋಜನ..!
ಭಾರತದಲ್ಲಿ ಜುಲೈ ಮತ್ತು ಆಗಸ್ಟ್‌ನಲ್ಲಿ ಹೆಚ್ಚು ಮಳೆ ಬೀಳುತ್ತದೆ. ಲಾ ನಿನಾನಿಂದಾಗಿ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇದೆ. ಇದು ರೈತರಿಗೆ ಭಾರೀ ಅನುಕೂಲ ಆಗಬಹುದು ಎಂದು ಹೇಳಲಾಗಿದೆ. ಕಳೆದ ಮಾನ್ಸೂನ್‌ನಲ್ಲಿ ಕಡಿಮೆ ಮಳೆಯಾಗಿತ್ತು. ಈ ಬಾರಿ ಸರಾಸರಿಗಿಂತ ಹೆಚ್ಚು ಅಂದರೆ ಶೇ.106ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವರ್ಷ ಶೇ 94ರಷ್ಟು ಕಡಿಮೆ ಮಳೆ ಆಗಿತ್ತು.
ಇದನ್ನೂ ಓದಿ:‘ಪವಿ ಉಸಿರು ನಿಲ್ಲಿಸಿಬಿಟ್ಟಳು..’ ಪವಿತ್ರ ಜಯರಾಂ ಸಾವಿನ ಕೊನೆ ಕ್ಷಣಗಳ ವಿವರಿಸಿ ಕಣ್ಣೀರಿಟ್ಟ ಸ್ನೇಹಿತ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us