newsfirstkannada.com

ಬೆಂಗಳೂರಲ್ಲಿ ಮಳೆ.. ಬೀದರ್​ನಲ್ಲಿ​ ಬಿಸಿಲ ಬೇಗೆಗೆ ಕಾರ್ಮಿಕ ಸಾವು

Share :

Published May 10, 2024 at 11:47am

    ಬಿಸಿಲ ಬೇಗೆಗೆ ಉಸಿರು ನಿಲ್ಲಿಸಿದ ಕಾರ್ಮಿಕ, ಕುಸಿದು ಬಿದ್ದು ಸಾವು

    ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವು

    ಬಿಸಿಲಿಗೆ ಪ್ರಜ್ಞೆತಪ್ಪಿ ಬಿದ್ದ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದ

ಬೀದರ್: ಕಳೆದೆರಡು ದಿನಗಳಿಂದ ರಾಜ್ಯದ ಕೆಲವೆಡೆ ಭರ್ಜರಿ ಮಳೆಯಾಗಿದೆ. ಆದರೆ ಗಡಿನಾಡು ಬೀದರ್‌ನಲ್ಲಿ ಮಾತ್ರ ಬಿಸಿಲಿನ ಪ್ರಖರತೆ ಹೆಚ್ಚುತ್ತಿದೆ. ಬಿಸಿಲ ಝಳಕ್ಕೆ ಉದ್ಯೋಗ ಖಾತ್ರಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಿಟ್ಟಾ ಗ್ರಾಮದ ಮಲ್ಲಪ್ಪ ತೊಗರಖೇಡೆ (58) ನಿಧನರಾಗಿದ್ದಾರೆ. ಇವರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಪ್ರವೀಣ್​ ನೆಟ್ಟಾರು ಹತ್ಯೆಯ A4 ಆರೋಪಿ ಬಂಧನ.. ಎನ್​ಐಎ ಅಧಿಕಾರಿಗಳಿಗೆ ಈತ ಸಿಕ್ಕಿದ್ದೆಲ್ಲಿ ಗೊತ್ತಾ?

ಬಿಸಿಲ ತಾಪಕ್ಕೆ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ವೇಳೆ ಮಲ್ಲಪ್ಪ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ 

ತಾಲೂಕು ಪಂಚಾಯತ್​ ಇಒ ರಮೇಶ್ ಸುಲ್ಫೆ, ಸಹಾಯಕ ನಿರ್ದೇಶಕ ಸಂತೋಷಕುಮಾರ್ ಚವಾಣ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಳೆ.. ಬೀದರ್​ನಲ್ಲಿ​ ಬಿಸಿಲ ಬೇಗೆಗೆ ಕಾರ್ಮಿಕ ಸಾವು

https://newsfirstlive.com/wp-content/uploads/2024/05/Bidar-Farmar-Died.jpg

Load More