ಲೇಡಿ ಅಲ್ಲ ರೌಡಿ.. ಗ್ಯಾಂಗ್‌ಸ್ಟರ್‌ ಹೆಂಡತಿಗೆ ಬೌನ್ಸರ್‌ ಆಗಿದ್ದವಳು ಡಾನ್‌ ಆಗಿದ್ದೇ ರೋಚಕ; ಯಾರಿವರು?

author-image
admin
Updated On
ಲೇಡಿ ಅಲ್ಲ ರೌಡಿ.. ಗ್ಯಾಂಗ್‌ಸ್ಟರ್‌ ಹೆಂಡತಿಗೆ ಬೌನ್ಸರ್‌ ಆಗಿದ್ದವಳು ಡಾನ್‌ ಆಗಿದ್ದೇ ರೋಚಕ; ಯಾರಿವರು?
Advertisment
  • ಕೈಯಲ್ಲಿ ಪಿಸ್ತೂಲ್ ಹಿಡಿದು ಪೋಸ್‌ ಕೊಡುವ ಲೇಡಿ ಡಾನ್‌!
  • ದೆಹಲಿಯ ಈ ಏರಿಯಾದಲ್ಲಿ ಲೇಡ್ ಡಾನ್ ಝಿಕ್ರಾ ಫುಲ್ ಹವಾ
  • ಜೈಲಿಗೆ ಹೋಗಿ ಬಂದ ಮೇಲೆ ಮತ್ತೆ ಪೊಲೀಸರಿಗೆ ತಗ್ಲಾಕೊಂಡ ರೌಡಿ

ದರೋಡೆಕೋರನ ಹೆಂಡತಿಗೆ ಬೌನ್ಸರ್ ಆಗಿದ್ದಳು. ಆಮೇಲೆ ತನ್ನದೇ ಗ್ಯಾಂಗ್ ಕಟ್ಟಿದವಳು ಈ ಝಿಕ್ರಾ. ಈ ಲೇಡಿ ಡಾನ್ ಝಿಕ್ರಾ ಕಥೆ ರೋಚಕವಾಗಿದೆ. ಝಿಕ್ರಾ ಸೋಷಿಯಲ್ ಮೀಡಿಯಾದಲ್ಲಿ ತಾನು ಲೇಡಿ ಡಾನ್ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಝಿಕ್ರಾಗೆ ಪಿಸ್ತೂಲ್ ಅಂದ್ರೆ ಪಂಚಪ್ರಾಣ. ಕೈಯಲ್ಲಿ ಪಿಸ್ತೂಲ್ ಹಿಡಿದು ಸಖತ್‌ ಫೋಸ್ ಕೊಟ್ಟ ಲೇಡಿ ಡಾನ್‌ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.

publive-image

ದೆಹಲಿಯ ಸೀಲಾಂಪುರದಲ್ಲಿ 17 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಲೇಡಿ ಡಾನ್ ಝಿಕ್ರಾ ಬಂಧಿಸಿದ್ದಾರೆ. ಕಳೆದ ಗುರುವಾರ ಸಂಜೆ ಈಶಾನ್ಯ ದೆಹಲಿಯ ಸೀಲಾಂಪುರದ ಜೆ-ಬ್ಲಾಕ್‌ನಲ್ಲಿ ಬಾಲಕನನ್ನು ಬರ್ಬರವಾಗಿ ಇರಿದು ಕೊಲ್ಲಲಾಗಿತ್ತು.

ಇದನ್ನೂ ಓದಿ: ಮಲತಾಯಿ ಮಸಲತ್ತು? ಮುತ್ತಪ್ಪ ರೈ 2ನೇ ಪತ್ನಿ ಮೇಲೆ ಅನುಮಾನ ಯಾಕೆ? ಅಸಲಿಗೆ ಆಗಿದ್ದೇನು? 

ಏನಿದು ಘಟನೆ?
ದೆಹಲಿಯಲ್ಲಿ 17 ವರ್ಷದ ಬಾಲಕ ಕುನಾಲ್ ಹಾಲು ತರಲು ಅಂಗಡಿಗೆ ತೆರಳಿದ್ದ. ಮನೆಯಿಂದ ಕೆಲ ದೂರದಲ್ಲಿದ್ದ ಶಾಪ್‌ಗೆ ಹಾಲು ತರಲು ಹೋದ ಕುನಾಲ್ ಮರಳಿ ಬರಲೇ ಇಲ್ಲ. ಕುನಾರ್ ಹತ್ಯೆಯಾಗಿದ್ದ. ಈ ಹತ್ಯೆಯ ಹಿಂದೆ ಝಿಕ್ರಾ ಹಾಗೂ ಆಕೆಯ ಗ್ಯಾಂಗ್ ಇದೆ ಅನ್ನೋದು ಪೊಲೀಸರ ಬಲವಾದ ಅನುಮಾನ ಆಗಿತ್ತು. ಈ ಕೊಲೆಗೆ ಕೆಲ ದಿನಗಳ ಹಿಂದೆ ಝಿಕ್ರಾ ಜೈಲಿನಿಂದ ಬಿಡುಗೆಯಾಗಿದ್ದಳು.

publive-image

ಯಾರು ಈ ಲೇಡಿ ಡಾನ್ ಝಿಖ್ರಾ?
ಲೇಡಿ ಡಾನ್ ಝಿಕ್ರಾ ಜೈಲು ಸೇರಿಕೊಂಡಿರುವ ಗ್ಯಾಂಗ್‌ಸ್ಟರ್ ಹಶೀಮ್ ಬಾಬಾ ಆಪ್ತೆಯಾಗಿದ್ದಾಳೆ. ಹಶೀಮ್ ಬಾಬಾ ಪತ್ನಿ ಝೋಯಾಗೆ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಸದಾ ಕಾಲ ಪಿಸ್ತೂಲ್ ಹಿಡಿದುಕೊಂಡೇ ತಿರುಗಾಡುತ್ತಿದ್ದಳು. ಗ್ಯಾಂಗ್‌ಸ್ಟರ್ ಹಶೀಮ್ ಬಾಬಾ ಜೈಲಿನಲ್ಲಿದ್ದರೆ, ಇತ್ತ ಆತನ ಪತ್ನಿ ಝೋಯಾ ಇತ್ತೀಚೆಗೆ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾಳೆ. ಇಬ್ಬರು ಗ್ಯಾಂಗ್‌ಸ್ಟರ್ ಜೈಲು ಸೇರಿದ ಬಳಿಕ ಇದೇ ಝಿಖ್ರಾ ತಾನು ಲೇಡಿ ಡಾನ್ ಎಂದು ಘೋಷಿಸಿಕೊಂಡು ಗ್ಯಾಂಗ್ ಕಟ್ಟಿದ್ದಳು.

ಸಹೋದರನ ಮೇಲಿನ ದಾಳಿಗೆ ರಿವೇಂಜ್!
ಲೇಡಿ ಡಾನ್ ಝಿಕ್ರಾ ಇತ್ತೀಚೆಗೆ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜೈಲು ಸೇರಿದ್ದಳು. ಇದಕ್ಕೂ ಮುನ್ನ ಝಿಕ್ರಾ ಸಹೋದರನ ಮೇಲೆ ದಾಳಿ ನಡೆದಿತ್ತು. ಈ ದಾಳಿಗೆ ಸೇಡು ತೀರಿಸಿಕೊಳ್ಳಲು ಸೀಲಾಂಪುರದಲ್ಲಿ 17 ವರ್ಷದ ಬಾಲಕನ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಝಿಖ್ರಾ ಸಹೋದರನ ಮೇಲೆ ದಾಳಿಯ ಆರೋಪಿ ಕುರಿತು ಸುಳಿವು ನೀಡಲು ಝಿಕ್ರಾ ಕುನಾಲ್‌ಗೆ ಬೆದರಿಸಿದ್ದಾಳೆ. ಆದರೆ ಕುನಾಲ್ ಮಾಹಿತಿ ನೀಡದ ಕಾರಣ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment