Advertisment

ನಟ ದರ್ಶನ್ ಜೊತೆ ಮಾತಾಡಿಕೊಂಡು ಬಂದ್ವಿ -ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?

author-image
Ganesh
Updated On
ನಟ ದರ್ಶನ್ ಜೊತೆ ಮಾತಾಡಿಕೊಂಡು ಬಂದ್ವಿ -ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?
Advertisment
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್
  • ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದರ್ಶನ್ ವಿಚಾರಣೆ
  • ಕಾನೂನು ಹೋರಾಟ ಸಂಬಂಧ ದರ್ಶನ್ ಭೇಟಿಯಾದ ವಕೀಲರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ತೀವ್ರ ವಿಚಾರಣೆಗೆ ಎದುರಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿರುವ ದರ್ಶನ್ ಅವರನ್ನು ಇವತ್ತು ವಕೀಲರು ಭೇಟಿಯಾದರು.

Advertisment

ಇಂದು ಬೆಳಗ್ಗೆ ದರ್ಶನ್ ಪರ ವಕೀಲರು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ಮಾಡಿದ್ದಾರೆ ವಕೀಲರು ತಿಳಿಸಿದ್ದಾರೆ. ವಕೀಲ ಅನಿಲ್ ಬಾಬು ಮಾತನಾಡಿ.. ಕೋರ್ಟ್​​ ನಿರ್ದೇಶನದ ಪ್ರಕಾರ ಇವತ್ತು ಸಂಜೆ ಐದು ಗಂಟೆಯೊಳಗೆ ಆರೋಪಿಗಳನ್ನು ಹಾಜರುಪಡಿಸಬೇಕು. ನಮ್ಮ ಪ್ರಕಾರ ಇವತ್ತು ಮಧ್ಯಾಹ್ನ ಹಾಜರು ಮಾಡಿಯೇ ಮಾಡುತ್ತಾರೆ. ಅವರು ಇನ್ನೂ ಕಸ್ಟಡಿಗೆ ಕೇಳ್ತಾರೋ? ಇಲ್ಲವೋ ಅನ್ನೋದ್ರ ಬಗ್ಗೆ ನಮಗೆ ಗೊತ್ತಿಲ್ಲ. ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ನಿರ್ಧಾರವನ್ನು ನೋಡಿ ನಾವು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.

ಇದನ್ನೂ ಓದಿ:IND vs AFG.. ಯಾರಿಗೆಲ್ಲಾ ಚಾನ್ಸ್​​​.. ಯಾರಿಗೆಲ್ಲಾ ಕೊಕ್​​​..​ ಕೊಹ್ಲಿ ಸ್ಲಾಟ್​ನಲ್ಲಿ ಸರ್​ಪ್ರೈಸ್​..!

publive-image

ಬಹುತೇಕ ತನಿಖೆ ಮುಗಿದಿರಬಹುದು. ಬೇಲ್​ ಹಾಕಬೇಕೋ? ಬೇಡವೋ ಅನ್ನೋದು ಈಗ ನಿರ್ಧಾರ ಮಾಡಿಲ್ಲ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಬೇಲ್​ಗೆ ಅರ್ಜಿ ಹಾಕ್ತೇವೆ. ಇದಕ್ಕೆ ಒಂದು ವಾರಗಳ ಸಮಯ ಬೇಕಾಗುತ್ತದೆ. ದರ್ಶನ್ ಜೊತೆ ಮಾತುಕತೆ ಮಾಡಿಕೊಂಡು ಬಂದಿದ್ದೇವೆ ಅಷ್ಟೇ. ಅವರ ಆರೋಗ್ಯ ಚೆನ್ನಾಗಿದೆ ಎಂದು ವಕೀಲ ಅನೀಲ್ ಬಾಬು ತಿಳಿಸಿದ್ದಾರೆ.

Advertisment

ಇದನ್ನೂ ಓದಿ:ಮೂರು ವರ್ಷದ ಪುಟಾಣಿ ಕಂದನ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ..

ನಿನ್ನೆ ಆರೋಪಿಗಳಿಗೆ ಡಿಎನ್ಎ ಟೆಸ್ಟ್ ಮಾಡಿದ್ದಾರೆ ಎನ್ನಲಾಗಿರುವ ವಿಚಾರಕ್ಕೆ ವಕೀಲ ರಂಗನಾಥ್ ರೆಡ್ಡಿ ಪ್ರತಿಕ್ರಿಯಿಸಿ.. ಪರೀಕ್ಷೆಗೆ ಕೋರ್ಟ್ ಅನುಮತಿ ಬೇಕು, ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದ್ರೆ ಪೊಲೀಸರು ತಗೊಂಡಿದ್ದಾರಾ ಇಲ್ವೊ ಗೊತ್ತಿಲ್ಲ. ಡಿಎನ್ಎ ಟೆಸ್ಟ್ ಮಾಡಿದ್ರಾ ಇಲ್ವೊ ಅನ್ನೋದು ನಮಗೆ ಗೊತ್ತಿಲ್ಲ. ಅದೆಲ್ಲಾ ಚಾರ್ಜ್ ಶೀಟ್ ನಲ್ಲಿರುತ್ತದೆ. ಅಲ್ಲಿ ನಮಗೆ ಗೊತ್ತಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ:ದರ್ಶನ್ ಮಾತ್ರವಲ್ಲ.. ಅಭಿಮಾನಿಗಳಿಗೂ ಇದೆ ಹಬ್ಬ.. ಬಾಲ ಕಟ್ ಮಾಡಲು ಲಿಸ್ಟ್ ರೆಡಿ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment