Advertisment

ಆ ಕರ್ಣನಂತೆ, ನೀ ದಾನಿಯಾದೆ.. ಜೀವದಾನ ಮಾಡಿ ಮನೆಗೆ ಶವವಾಗಿ ಮರಳಿದ ಮನಕಲುಕುವ ಕಥೆ ಇದು!

author-image
Bheemappa
Updated On
ಆ ಕರ್ಣನಂತೆ, ನೀ ದಾನಿಯಾದೆ.. ಜೀವದಾನ ಮಾಡಿ ಮನೆಗೆ ಶವವಾಗಿ ಮರಳಿದ ಮನಕಲುಕುವ ಕಥೆ ಇದು!
Advertisment
  • ದುರಂತ ಅಂತ್ಯ ಕಂಡ ಜೀವ ಉಳಿಸಿ, ಜೀವ ಕಳೆದುಕೊಂಡ ಅರ್ಚನಾ
  • ಮಹಿಳೆಗೆ ಯಕೃತ್ ದಾನ ಮಾಡಿದ್ದ ಉಪನ್ಯಾಸಕಿ ಅರ್ಚನಾ ಕಾಮತ್​
  • 4 ವರ್ಷದ ಕಂದಮ್ಮನನ್ನ ಬಿಟ್ಟು ಇಹಲೋಕ ತ್ಯಜಿಸಿದ ಉಪನ್ಯಾಸಕಿ

ಇದನ್ನು ದುರಂತ ಅನ್ನಬೇಕೋ ಹೃದಯವಿದ್ರಾವಕ ಘಟನೆ ಅನ್ನಬೇಕೋ, ದುರದೃಷ್ಟ ಅನ್ನಬೇಕೋ ಗೊತ್ತಾಗ್ತಿಲ್ಲ. ಬೇರೆಯವರ ಜೀವ ಉಳಿಸಿದ ಮಹಿಳೆಯೇ ಸಾವಿನ ಕದ ತಟ್ಟಿದ್ದಾರೆ. ಜೀವದಾನ ಮಾಡಿ ಮನೆಗೆ ಶವವಾಗಿ ಮರಳಿದ ಮನಕಲುಕುವ ಕಥೆ ಇದು.

Advertisment

ಚೆಲುವೆಯರನ್ನು ನಾಚಿಸುವಂತ ಸೌಂದರ್ಯವತಿ. ಬಟ್ಟಲು ಕಂಗಳ ಬೆಡಗಿ. ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕಿ. ಎಂಥಾ ಖುಷಿ, ಎಂಥಾ ಹುಮ್ಮಸ್ಸು, ಎಂಥಾ ಎನರ್ಜಿ. ಇದೇ ಆಕೆ ಸೌಂದರ್ಯವನ್ನ ಇಮ್ಮಡಿಗೊಳಿಸ್ತಿದೆ. ಬಾಹ್ಯ ಸೌಂದರ್ಯವಷ್ಟೇ ಅಲ್ಲ, ಅವಳಷ್ಟೇ ಅವಳ ಹೃದಯವು ಕೊಡ ಸೌಂದರ್ಯವಾಗಿತ್ತು. ಸದಾ ಇನ್ನೊಬ್ಬರಿಗಾಗಿ ತುಡಿಯುತಿತ್ತು. ಆದ್ರೆ, ಅದೇ ಇವತ್ತು ಆಕೆಯ ದುರಂತ ಅಂತ್ಯಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಮಹಿಳೆ.. ಉಡುಪಿಯಲ್ಲಿ ಘೋರ ದುರಂತ; ಆಗಿದ್ದೇನು?

publive-image

ಕುಂದಾಪುರ ತಾ.ಕೊಟೇಶ್ವರದ ಅರ್ಚನಾ ದುರಂತ ಸಾವು

ಆ ಕರ್ಣನಂತೆ, ನೀ ದಾನಿಯಾದೆ. ಇನ್ನೊಂದು ಜೀವಕ್ಕೆ ಆಧಾರವಾದೆ ಹಾಡು ಈ ದುರಂತ ಕಥೆಗೆ ಹೊಂದಿಕೊಳ್ಳುತ್ತೆ. ಜೀವ ಉಳಿಸಿದವರೇ ಜೀವಕಳೆದುಕೊಂಡ ಸ್ಟೋರಿಯಿದು. ಕುಂದಾಪುರ ತಾಲೂಕಿನ ಕೊಟೇಶ್ವರದ ಅರ್ಚನಾ ಎಂಬಾಕೆ ಈ ಕಥೆಯ ದುರಂತ ನಾಯಕಿ. ಕೇವಲ 33 ವರ್ಷಕ್ಕೆ ಅರ್ಚನಾ, ಪತಿ ಚೇತನ್​ ಮತ್ತು 4 ವರ್ಷದ ಕಂದಮ್ಮನನ್ನ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

Advertisment

ಸೋಂಕಿಗೆ ತುತ್ತಾಗಿ ಜೀವವೇ ಕಳೆದುಕೊಂಡ ಅರ್ಚನಾ

ಅರ್ಚನಾ ಮಾವನ ಸಹೋದರನ ಪತ್ನಿ ಕಳೆದ 2 ವರ್ಷದಿಂದ‌ ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಲಿವರ್ ಕಸಿ ಮಾಡಲು ನಿರ್ಧರಿಸಲಾಗಿತ್ತು. ಹಲವರು ಲಿವರ್ ದಾನ ನೀಡಲು ಬಂದರಾದರೂ, ರಕ್ತದ ಮಾದರಿ ಮ್ಯಾಚ್ ಆಗಿರಲಿಲ್ಲ. ಹೀಗಾಗಿ ಅರ್ಚನಾ ಕುಟುಂಬಸ್ಥರನ್ನು ಒಪ್ಪಿಸಿ ಖುದ್ದು ತಾನೇ ಯಕೃತ್​ ದಾನ ಮಾಡಿದ್ರು. ಚಿಕಿತ್ಸೆ ನಂತರ ಅರ್ಚನಾ ಕಾಮತ್ ಆರೋಗ್ಯದಿಂದ ಇದ್ದರು. 3 ದಿನದ ಬಳಿಕ ಮನೆಗೆ ಹಿಂತಿರುಗಿದ್ದರು. ಈ‌ ನಡುವೆ, ಅರ್ಚನಾ ಆರೋಗ್ಯದಲ್ಲಿ ಸಮಸ್ಯೆ ಕಂಡಿದ್ರಿಂದ ಮತ್ತೆ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳೂರಿನಿಂದ ಬೆಂಗಳೂರು ತಲುಪುವಷ್ಟರಲ್ಲಿ ಅರ್ಚನಾ ದೇಹದಲ್ಲಿ ಬಹು ಅಂಗಾಂಗ ವೈಪಲ್ಯ ಆಗಿದ್ದು, ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ‌.

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಕ್ಯೂ ನಿಂತರೂ ಸಿಗುತ್ತಿಲ್ಲ ಸ್ಯಾರಿ; ಕಾರಣವೇನು?

publive-image

ಮಂಗಳೂರಿನ ಬೊಂದೇಲ್ ಎಂಬಲ್ಲಿರುವ ಮಣೆಲ್‌ ಶ್ರೀನಿವಾಸ್ ನಾಯಕ್ ಇನ್​​ಸ್ಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಹೋದ್ಯೋಗಿಗಳೊಂದಿಗೆ ತುಂಬಾ ಲವಲವಿಕೆಯಿಂದ ಇರ್ತಿದ್ದ ಅರ್ಚನಾ. ಈಗ ಇಲ್ಲ ಅನ್ನೋದನ್ನು ಕಾಲೇಜಿನ ಸಹೋದ್ಯೋಗಿಗಳಿಗೆ ನಂಬಲು ಸಾಧ್ಯವಾಗುತ್ತಿಲ್ಲ.

Advertisment

ಅರ್ಚನಾ ಮೂಲತಃ ಕುಂದಾಪುರದವರಾಗಿದ್ದು ಮಂಗಳೂರಿಗೆ ಮದುವೆಯಾಗಿ ಬಂದಿದ್ದರು. ಅರ್ಚನಾ ಮೃತ ದೇಹವನ್ನ ಕರಂಗಲ್ಪಾಡಿಯ ನಿವಾಸಕ್ಕೆ ತಂದು ವಿಧಿ ವಿಧಾನ ಪೂರೈಸಿದ ಬಳಿಕ ಕುಂದಾಪುರದ ಕೋಟೆಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಚನಾ ಕಾಮತ್ ಅವರ ಅಕಾಲಿಕ ನಿಧನದಿಂದ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಇನ್ನೊಬ್ಬರ ಜೀವ ಉಳಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment