newsfirstkannada.com

ಐಪಿಎಲ್​ಗೆ ಮತ್ತೊಂದು ನಾಮಕರಣ.. LPL ಟೂರ್ನಿ ಎಂದೇ ಫೇಮಸ್ ಆಗ್ತಿದೆ.. ಯಾಕೆಂದರೆ..!

Share :

Published May 1, 2024 at 2:46pm

    IPL​​ ಬದಲು LPL ಟೂರ್ನಿ ಅಂತಿರೋದು ಯಾಕೆ?

    IPL ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್

    ಹೊಡಿಬಡಿ ಆಟದಲ್ಲಿ ಮಂಕಾದ ಈ ಬ್ಯಾಟರ್ಸ್​..!

ಈ ಬಾರಿಯ ಇಂಡಿಯನ್​​​ ಪ್ರೀಮಿಯರ್ ಲೀಗ್​ನಲ್ಲಿ​​​​​​​​​​​​​​ ಲೆಫ್ಟ್​ ​ಹ್ಯಾಂಡರ್ಸ್​ ಹವಾ ಜೋರಾಗಿದೆ. ಬಲಗೈ ಬ್ಯಾಟ್ಸ್​​ಮನ್​ಗಳಿಗಿಂತ ಎಡಗೈ ಬ್ಯಾಟ್ಸ್​​ಮನ್​ಗಳು ದರ್ಬಾರ್ ನಡೆಸ್ತಿದ್ದಾರೆ. ವಿಕೆಟ್​ ಕಬಳಿಸೋಕೆ ಆಗದೇ ಬೌಲರ್​ಗಳು ಪರದಾಡ್ತಿದ್ರೆ, ಫ್ಯಾನ್ಸ್​​ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಎಡಗೈ ದಾಂಡಿಗರ ದರ್ಬಾರ್​ನ ಸ್ಪೆಷಲ್​ ಸ್ಟೋರಿ.

ಇದು IPL ಟೂರ್ನಿ ಅಲ್ಲ, LPL ಟೂರ್ನಿ
ಇಂಡಿಯನ್ಸ್ ಪ್ರೀಮಿಯರ್​ ಲೀಗ್​​! ಹೇಳಿ ಕೇಳಿ ಬ್ಯಾಟ್ಸ್​​​ಮನ್​ಗಳ ಕೂಟ. ಇಲ್ಲಿ ವಿಕೆಟ್ ಸದ್ದಿಗಿಂತ ಸಿಕ್ಸರ್​​​-ಬೌಂಡ್ರಿಗಳ ಅರ್ಭಟವೇ ಜೋರಾಗಿ ಮಾರ್ದನಿಸುತ್ತೆ. ಬ್ಯಾಟ್ಸ್​​​ಮನ್​​ಗಳ ಘರ್ಜನೆಯ ಮುಂದೆ ಬೌಲರ್ಸ್​ ಹಣ್ಣುಗಾಯಿ ನೀರುಗಾಯಿ ಆಗ್ತಾರೆ. ಆ ಮಟ್ಟಿಗೆ ಇಲ್ಲಿ ಬ್ಯಾಟ್ಸ್​​ಮನ್​ಗಳು ವಿಜೃಂಭಿಸ್ತಾರೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್​ಐಟಿ ಜಾಣ ನಡೆ.. ದಿಟ್ಟ ಹೆಜ್ಜೆಯಿಟ್ಟ ತನಿಖಾ ತಂಡ..!

ಈ ಬಾರಿಯಂತೂ ಲೆಫ್ಟ್​ ಹ್ಯಾಂಡರ್ಸ್​ ದರ್ಬಾರ್​ ಜೋರಾಗಿದೆ. ವಿದೇಶಿ ಸ್ಟಾರ್​​ಗಳನ್ನೂ ಮೀರಿಸಿ ಇಂಡಿಯನ್​​​​ ಲೆಫ್ಟಿ ಬ್ಯಾಟರ್ಸ್​ ಧೂಳೆಬ್ಬಿಸಿದ್ದಾರೆ. ದಂಡಂ ದಶಗುಣಂ ಆಟ, ಹಿಂಜರಿಕೆ ಇಲ್ಲದೆ ಮುನ್ನುಗ್ಗಿ ಆಡುವ ಎದೆಗಾರಿಕೆಯಿಂದ ವಿಶ್ವಶ್ರೇಷ್ಠ ಬೌಲರ್ಸ್​ ಮಾರಣ ಹೋಮ ನಡೆಸಿ ಬಲಗೈ ಬ್ಯಾಟ್ಸ್​​ಮನ್​ಗಳಿಗೆ ಸೆಡ್ಡು ಹೊಡೆದಿದ್ದಾರೆ.

ಸಿಕ್ಸ್​​​ ಸಿಡಿಸೋದ್ರಲ್ಲಿ ಎಡಗೈ ಬ್ಯಾಟರ್ಸ್​ ಪಾರಮ್ಯ
ಐಪಿಎಲ್​ಗೆ ಟೂರ್ನಿಗೆ ಕಿಚ್ಚು ಹಚ್ಚೋದೇ ಸಿಕ್ಸರ್​ಗಳು. ಬ್ಯಾಟ್​​​​​ನಿಂದ ಸಿಡಿಯುವ ಭಿನ್ನ-ವಿಭನ್ನ ಸಿಕ್ಸರ್​ಗಳು ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತವೆ. ಆಟದ ಕ್ರೇಜ್​​​ಅನ್ನ ನೆಕ್ಸ್ಟ್​ ಲೆವೆಲ್​ ಕೊಂಡೊಯ್ಯುತ್ತೆ. ಈ ಬಾರಿ ಐಪಿಎಲ್​ನಲ್ಲಿ ಇಂತಹ ಸಿಕ್ಸ್​ ಬಾರಿಸೋದ್ರಲ್ಲಿ ಭಾರತೀಯ ಎಡಗೈ ಬ್ಯಾಟ್ಸ್​​​ಮನ್​​ ಮಧ್ಯೆ ಮೆಗಾ ಪೈಪೋಟಿ ಏರ್ಪಟ್ಟಿದೆ.

ಹೆಚ್ಚು ಸಿಕ್ಸರ್​​​​​​​ ಸಿಡಿಸಿದ ಭಾರತೀಯರು
ಪ್ರಸಕ್ತ ಐಪಿಎಲ್​​ನಲ್ಲಿ ಎಡಗೈ ಬ್ಯಾಟರ್​​ ಅಭಿಷೇಕ್​​ ಶರ್ಮಾ 27 ಸಿಕ್ಸರ್​ ಸಿಡಿಸಿದ್ದಾರೆ. ಇನ್ನು, ಸಿಎಸ್​​ಕೆ ತಂಡದ ಬೀಸ್ಟ್​​​​ ಶಿವಂ ದುಬೆ 26 ಸಿಕ್ಸರ್ ಸಿಡಿಸಿದ್ದಾರೆ. ನಿರ್ಭೀತ ಆಟಕ್ಕೆ ಹೆಸರುವಾಸಿಯಾದ ರಿಷಬ್ ಪಂತ್​ 24 ಸಿಕ್ಸ್​ ಬಾರಿಸಿದ್ದಾರೆ. ಬರೀ ಸಿಕ್ಸರ್​​​ ಅಷ್ಟೇ ಅಲ್ಲ. ರನ್ ಗಳಿಕೆಯಲ್ಲೂ ಇಂಡಿಯನ್ ಹ್ಯಾಂಡರ್ಸ್​ ಪರಾಕ್ರಮ ಮೆರೆದಿದ್ದಾರೆ. ರಿಷಬ್​ ಪಂತ್​​​, ಸಾಯಿ ಸುದರ್ಶನ್, ಶಿವಂ ದುಬೆ, ತಿಲಕ್​ ವರ್ಮಾ ಹಾಗೂ ಅಭಿಷೇಕ್​ ಶರ್ಮಾ ರನ್ ಹೊಳೆ ಹರಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಗುಡ್​ ನ್ಯೂಸ್.. ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಹೆಚ್ಚು ರನ್​ ಗಳಿಸಿದ ಎಡಗೈ ಬ್ಯಾಟ್ಸ್​​​ಮನ್​
ಸಾಯಿ ಸುದರ್ಶನ್​​ 418 ರನ್​ಗಳಿಸಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಿಷಬ್ ಪಂತ್​ 398 ರನ್​ ಕೊಳ್ಳೆ ಹೊಡೆದಿದ್ದಾರೆ. ಇನ್ನು, ಶಿವಂ ದುಬೆ 350 ರನ್​ ಗಳಿಸಿದ್ರೆ, ತಿಲಕ್​ ವರ್ಮಾ 336, ಅಭಿಷೇಕ್ ಶರ್ಮಾ 288 ರನ್ ಗಳಿಸಿದ್ದಾರೆ. ಬೌಂಡರಿ ಸಿಡಿಸೋದ್ರಲ್ಲೂ ಭಾರತದ ಎಡಗೈ ಬ್ಯಾಟರ್ಸ್​ ಹಿಂದೆ ಬಿದ್ದಿಲ್ಲ. ಒಟ್ಟಾರೆಯಾಗಿ, ಬೌಂಡರಿ, ಸಿಕ್ಸರ್​, ರನ್​ ಎಲ್ಲಾ ವಿಚಾರದಲ್ಲೂ ಎಡಗೈ ಬ್ಯಾಟ್ಸ್​​ಮನ್​​ಗಳು ಮೇಲುಗೈ ಸಾಧಿಸಿದ್ದಾರೆ. ಇನ್ನೂ 4 ವಾರಗಳ ಐಪಿಎಲ್ ಟೂರ್ನಿ ಬಾಕಿ ಇದ್ದು, ಲೆಫ್ಟ್ ಹ್ಯಾಂಡರ್ಸ್​ ಮತ್ತಷ್ಟು ಆರ್ಭಟಿಸಲು ಸಜ್ಜಾಗಿದ್ದಾರೆ. ಇವ್ರ ಆಟಕ್ಕೆ ಬೌಲರ್ಸ್​ ಮುಂದಾದ್ರೂ ಬ್ರೇಕ್​ ಹಾಕ್ತಾರಾ ಕಾದು ನೋಡೋಣ.

ಇದನ್ನೂ ಓದಿ:ಅಭಿಮಾನಿಗಳಿಗೆ ಬಿಗ್ ಶಾಕ್.. ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ.. ಏನಾಯ್ತು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಐಪಿಎಲ್​ಗೆ ಮತ್ತೊಂದು ನಾಮಕರಣ.. LPL ಟೂರ್ನಿ ಎಂದೇ ಫೇಮಸ್ ಆಗ್ತಿದೆ.. ಯಾಕೆಂದರೆ..!

https://newsfirstlive.com/wp-content/uploads/2024/05/NICHOLAS.jpg

Load More