/newsfirstlive-kannada/media/post_attachments/wp-content/uploads/2024/07/Money.jpg)
ಇವತ್ತು ನವೆಂಬರ್ ಒಂದು. ಕನ್ನಡದ ಹಬ್ಬ. ಈ ಸಂಭ್ರಮದ ನಡುವೆ ನಿಮ್ಮ ದೈನಂದಿನ ಖರ್ಚುಗಳ ಮೇಲೆ ನೇರವಾಗಿ ಪರಿಣಾಮ ಬೀರುವ 7 ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಆಧಾರ್ ಅಪ್​ಡೇಟ್ಸ್​ ಫೀಸ್ ಮತ್ತು ಬ್ಯಾಂಕ್ ನಾಮಿನಿ, GST ಸ್ಲ್ಯಾಬ್ ಸೇರಿದಂತೆ ಅನೇಕ ಬದಲಾವಣೆಗಳು ಆಗುತ್ತಿವೆ.
ಆಧಾರ್​ ಕಾರ್ಡ್
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಮಕ್ಕಳ ಆಧಾರ್ ಕಾರ್ಡ್ಸ್​ (Aadhaar cards for children) ಬಯೋಮೆಟ್ರಿಕ್ ಅಪ್​ಡೇಟ್ಸ್​ ಮಾಡಲು ಇನ್ಮುಂದೆ 125 ರೂಪಾಯಿ ಶುಲ್ಕ ವಿಧಿಸುವಂತಿಲ್ಲ. ಒಂದು ವರ್ಷದೊಳಗೆ ಎಲ್ಲವೂ ಉಚಿತವಾಗಿರುತ್ತದೆ. ವಯಸ್ಕರಿಗೆ, ಹೆಸರು ಹುಟ್ಟಿದ ದಿನಾಂಕ, ವಿಳಾಸ ಅಥವಾ ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ನವೀಕರಿಸಲು 75 ರೂಪಾಯಿ ವೆಚ್ಚವಾಗುತ್ತದೆ. ಫಿಂಗರ್​ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್ ನವೀಕರಣಗಳಿಗೆ 125 ರೂಪಾಯಿ ನೀಡಬೇಕಾಗುತ್ತದೆ. ಜೊತೆಗೆ ಆಧಾರ್ ವಿಳಾಸ, ಜನ್ಮ ದಿನಾಂಕ ಅಥವಾ ಹೆಸರನ್ನು ಆನ್‌ಲೈನ್‌ನಲ್ಲಿ ನವೀಕರಿಸಬಹುದು.
ನ್ಯೂ ನಾಮಿನಿ ರೂಲ್ಸ್​
ಇವತ್ತಿನಿಂದ ಬ್ಯಾಂಕ್‌ಗಳು ಗ್ರಾಹಕರು ಖಾತೆ, ಲಾಕರ್ ಅಥವಾ ಸುರಕ್ಷಿತ ಆಸ್ತಿಗಾಗಿ 4 ಜನರ ನಾಮಿನಿ ಮಾಡಲು ಅವಕಾಶ ನೀಡಲಾಗುತ್ತಿದೆ. ಹೊಸ ನಿಯಮವು ತುರ್ತು ಸಂದರ್ಭಗಳಲ್ಲಿ ಕುಟುಂಬಗಳಿಗೆ ಹಣವನ್ನು ಸುಲಭವಾಗಿ ತಲುಪಲು ಮತ್ತು ಮಾಲೀಕತ್ವದ ವಿವಾದಗಳನ್ನು ತಪ್ಪಿಸಲು ಈ ನಿಯಮ ಜಾರಿಗೆ ಬಂದಿದೆ. ಗ್ರಾಹಕರಿಗೆ ನಾಮಿನಿಗಳನ್ನು ಸೇರಿಸುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ.
ಇದನ್ನೂ ಓದಿ: ಮಂದಾನ ಭಾವಿ ಪತಿ ಹಾಕಿಸಿಕೊಂಡಿರೋ ಟ್ಯಾಟೂ ಏನು..? ಅಷ್ಟೊಂದು ಪ್ರೀತಿಸ್ತಾರಾ?
ಹೊಸ GST ಸ್ಲ್ಯಾಬ್​ ಜಾರಿಗೆ..
ಇವತ್ತಿನಿಂದ ಸರ್ಕಾರ ಕೆಲವು ಸರಕುಗಳಿಗೆ ವಿಶೇಷ ದರಗಳೊಂದಿಗೆ ಹೊಸದಾಗಿ ಎರಡು ಫ್ಲ್ಯಾಟ್ ಜಿಎಸ್ಟಿ ವ್ಯವಸ್ಥೆಯನ್ನು ಪರಿಚಯಿಸಲಿದೆ. ಹಿಂದಿನ ನಾಲ್ಕು ತೆರಿಗೆ ವ್ಯವಸ್ಥೆಯನ್ನು 5%, 126, 18% ಮತ್ತು 28% ಕ್ಕೆ ಬದಲಾಯಿಸುತ್ತದೆ. 12% ಮತ್ತು 28% ಸ್ಲ್ಯಾಬ್​ಗಳನ್ನು ತೆಗೆದುಹಾಕಲಾಗಿದೆ. ಐಷಾರಾಮಿ ಸರಕುಗಳಿಗೆ 40% ತೆರಿಗೆ ವಿಧಿಸಲಾಗುತ್ತದೆ.
NPS ನಿಂದ UPSಗೆ ವಲಸೆ ಡೆಡ್​ಲೈನ್ ವಿಸ್ತರಣೆ..
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಯಿಂದ ಏಕೀಕೃತ ಪಿಂಚಣಿ ಯೋಜನೆ (UPS)ಗೆ ಬದಲಾಯಿಸಲು ಬಯಸುವ ಕೇಂದ್ರ ಸರ್ಕಾರಿ ನೌಕರರು ಈಗ ನವೆಂಬರ್ 30 ರವರೆಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶವಿದೆ. ಈ ವಿಸ್ತರಣೆಯು ನೌಕರರಿಗೆ ಪರಿಶೀಲಿಸಲು ಮತ್ತು ಬದಲಾವಣೆ ಮಾಡಲು ಹೆಚ್ಚಿನ ಸಮಯ ನೀಡಲಾಗುತ್ತದೆ.
ಪಿಂಚಣಿದಾರರು ಜೀವಿತ ಪ್ರಮಾಣಪತ್ರ ಸಲ್ಲಿಸಬೇಕು..
ಎಲ್ಲಾ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ನವೆಂಬರ್ ಅಂತ್ಯದೊಳಗೆ ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರವನ್ನು ( Life Certificate) ಸಲ್ಲಿಸಬೇಕು. ಇದನ್ನು ಅವರ ಬ್ಯಾಂಕ್ ಶಾಖೆಯಲ್ಲಿ ಅಥವಾ ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದು. ಈ ಗಡುವನ್ನು ತಪ್ಪಿಸಿಕೊಂಡ್ರೆ ಪಿಂಚಣಿ ಪಾವತಿಗಳು ವಿಳಂಬವಾಗಬಹುದು ಅಥವಾ ನಿಲ್ಲಬಹುದು.
PNBಯಲ್ಲಿ ಲಾಕರ್ ಫೀಸ್ ಬದಲಾವಣೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಶೀಘ್ರದಲ್ಲೇ ಭಾರತದಾದ್ಯಂತ ‘ಲಾಕರ್ ಬಾಡಿಗೆ’ ಶುಲ್ಕವನ್ನು ಪರಿಷ್ಕರಿಸಲಿದೆ. ಹೊಸ ದರಗಳು ಲಾಕರ್‌ನ ಗಾತ್ರ ಮತ್ತು ವರ್ಗವನ್ನು ಅವಲಂಬಿಸಿರುತ್ತದೆ. ವರದಿಗಳ ಪ್ರಕಾರ, ಹೊಸ ಶುಲ್ಕಗಳನ್ನು ನವೆಂಬರ್‌ನಲ್ಲಿ ಘೋಷಿಸುವ ನಿರೀಕ್ಷೆ ಇದೆ. ಅಧಿಸೂಚನೆಯಾದ 30 ದಿನಗಳ ನಂತರ ಜಾರಿಗೆ ಬರಲಿದೆ.
SBI ಕಾರ್ಡ್‌ದಾರರಿಗೆ ಹೊಸ ಶುಲ್ಕಗಳು
SBI ಕಾರ್ಡ್ ಬಳಕೆದಾರರು MobiKwik ಮತ್ತು Cred ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಮಾಡುವ ಶಿಕ್ಷಣ ಸಂಬಂಧಿತ ಪಾವತಿಗಳಿಗೆ ಶೇಕಡಾ 1 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ SBI ಕಾರ್ಡ್‌ಗಳನ್ನು ಬಳಸಿಕೊಂಡು ಡಿಜಿಟಲ್ ವ್ಯಾಲೆಟ್‌ಗಳಲ್ಲಿ 1,000 ರೂಪಾಯಿಗಿಂತ ಹೆಚ್ಚಿನ ಠೇವಣಿಗಳಿಗೆ ಸಹ ಶೇಕಡಾ ಒಂದರಷ್ಟು ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ: ಚಿನ್ನ ಖರೀದಿ ಮಾಡೋರಿಗೆ ಮತ್ತೆ ಬಿಗ್ ಶಾಕ್.. ಬಂಗಾರದ ಬೆಲೆಯಲ್ಲಿ ಭಾರೀ ಹೆಚ್ಚಳ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us