/newsfirstlive-kannada/media/media_files/2025/08/06/varamahalaxmi3-2025-08-06-12-12-00.jpg)
ಸಿಲಿಕಾನ್ ಸಿಟಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ವಸ್ತುಗಳ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಅದರಲ್ಲೂ ಕೆ.ಆರ್. ಮಾರ್ಕೆಟ್ನಲ್ಲಿ ಜನಸಾಗರವೇ ಹರಿದು ಬರುತ್ತಿದೆ. ಆಗಸ್ಟ್ 08 ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಈ ಬಾರಿ ವರಮಹಾಲಕ್ಷ್ಮೀ ಹಬ್ಬವು ಆಗಸ್ಟ್ 8 ಶುಕ್ರವಾರದಂದೇ ಬಂದಿದೆ. ಹೀಗಾಗಿ ಮಹಿಳೆಯರು ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಈ ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು. ಮಹಿಳೆಯನ್ನು ಏಕೆ ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಅದರಲ್ಲಿ ಯಾವ ಶಕ್ತಿ ಇರುತ್ತದೆ ಎಂದು ತಿಳಿದುಕೊಳ್ಳಿ.
ಇದನ್ನೂ ಓದಿ: Raksha Bandhan: ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!
ತಾಯಿ ಲಕ್ಷ್ಮಿಯನ್ನು ಹಿಂದೂ ಧರ್ಮದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತೆ. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಯಾರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವುದಿಲ್ಲ. ಮತ್ತು ಯಾವುದೇ ಸೌಕರ್ಯಗಳಿಗೆ ಕೊರತೆ ಇರೋದಿಲ್ಲ ಎಂದು ನಂಬಲಾಗಿದೆ. ಈ ಕಾರಣದಿಂದಲೇ ಜನರು ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಮಾತ್ರವಲ್ಲದೆ ಕೆಲಸ ಮಾಡುವ ಸ್ಥಳದಲ್ಲೂ ಪೂಜಿಸುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ ಅನ್ನೋ ನಂಬಿಕೆ.
ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅದೇ ಕಾರಣಕ್ಕೆ ಮನೆಯಲ್ಲಿ ಹೆಣ್ಣು ಹುಟ್ಟಿದಾಗ ಲಕ್ಷ್ಮಿ ಬಂದಿದ್ದಾಳೆ ಅನ್ನೋದು. ಅಷ್ಟೇ ಅಲ್ಲದೇ ಮನೆಯ ಸೊಸೆಯರನ್ನೂ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮನೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸೊಸೆಯಂದಿರಿಗೆ ವಹಿಸಲಾಗಿದೆ. ಆದರೆ ಮಹಿಳೆಯರನ್ನು ಲಕ್ಷ್ಮಿ ಎಂದು ಏಕೆ ಕರೆಯುತ್ತಾರೆ ಗೊತ್ತಾ? ದುರ್ಗಾ, ಪಾರ್ವತಿ, ಸರಸ್ವತಿ ಅಥವಾ ಇತರ ದೇವತೆಗಳೆಂದು ಯಾಕೆ ಪರಿಗಣಿಸಲ್ಲ ಎಂಬ ಪ್ರಶ್ನೆ ಕಾಡಬಹುದು!
ಮಹಿಳೆಯರನ್ನು ಲಕ್ಷ್ಮಿ ಎಂದು ಏಕೆ ಕರೆಯುತ್ತಾರೆ?
ತಾಯಿ ಲಕ್ಷ್ಮಿ ಕೇವಲ ಸಂಪತ್ತಿನ ದೇವತೆಯಲ್ಲ. ಬದಲಿಗೆ ಅಪಾರ ಶಕ್ತಿ ಮತ್ತು ಧನಾತ್ಮಕ ಶಕ್ತಿಯ ಉಗ್ರಾಣವನ್ನೇ ಹೊಂದಿದ್ದಾಳೆ. ಲಕ್ಷ್ಮಿ ದೇವಿಯನ್ನು ಬ್ರಹ್ಮಾಂಡದ ಶಕ್ತಿ ಎಂದು ನಂಬಲಾಗಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಸಮಾನ ಎಂದು ಭಾವಿಸಲಾಗುತ್ತದೆ. ಇದರ ಹಿಂದಿನ ಅರ್ಥವೇನೆಂದರೆ ತಾಯಿ ಲಕ್ಷ್ಮಿಯಲ್ಲಿ ಹೇಗೆ ಸಕಾರಾತ್ಮಕತೆ ಇದೆಯೋ, ಅದೇ ರೀತಿಯಲ್ಲಿ ಮಗಳು ಹುಟ್ಟಿದಾಗ ಅಥವಾ ಹೊಸ ಮಗಳು ಬರುವಾಗ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಅನ್ನೋ ವಾದ ಇದೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್ಗೆ ಅತಿದೊಡ್ಡ ಟ್ವಿಸ್ಟ್.. ನಿನ್ನೆ ಸಿಕ್ಕಿದ್ದು ಒಂದಲ್ಲ.. ಬರೋಬ್ಬರಿ 3 ಅಸ್ಥಿಪಂಜರ..!
ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆ ಏಕೆ..?
ಲಕ್ಷ್ಮಿ ಪೂಜೆಯನ್ನು ಮನೆಯಲ್ಲಿ ನಿಯಮಿತವಾಗಿ ಮಾಡಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಎಲ್ಲಾ ದೇವಾನು ದೇವತೆಗಳಿಗೆ ಮೀಸಲಿರುವ ವಿಶೇಷ ದಿನ ಇದೆ. ಶುಕ್ರವಾರ ದೇವಿಯರ ಪೂಜೆಗೆ ಮೀಸಲಿಡಲಾಗಿದೆ. ಈ ಕಾರಣಕ್ಕಾಗಿಯೇ ಶುಕ್ರವಾರ ಲಕ್ಷ್ಮಿ ದೇವಿಯ ಆರಾಧನೆಗೆ ಮತ್ತು ಅವಳ ರೂಪಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ