ಬೆಂಗಳೂರಿನ ಈ ಜೋಡಿ ತಿಂಗಳಿಗೆ 5.9 ಲಕ್ಷ ರೂ ಖರ್ಚು ಮಾಡುತ್ತೆ.. ಖರ್ಚು, ವೆಚ್ಚದ ಈ ಲಿಸ್ಟ್..!​

ಬೆಂಗಳೂರು ಮೂಲದ ದಂಪತಿ ಭಾರೀ ಸುದ್ದಿ ಆಗ್ತಿದ್ದಾರೆ. ಅವರೇ ನೀಡಿದ ಮಾಹಿತಿ ಪ್ರಕಾರ, ತಿಂಗಳಿಗೆ 5.9 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಪ್ರಯಾಣಕ್ಕಾಗಿ 3.5 ಲಕ್ಷ ರೂಪಾಯಿ ಮೀಸಲಿಟ್ಟರೆ, ಪ್ರತಿ ತಿಂಗಳು 1 ಲಕ್ಷ ರೂಪಾಯಿ ಎಸ್​ಐಪಿ ಪಾವತಿಸುತ್ತಿದ್ದೇವೆ ಎಂದಿದ್ದಾರೆ.

author-image
Ganesh Kerekuli
bengaluru couples
Advertisment

ಬೆಂಗಳೂರು ಮೂಲದ ದಂಪತಿ ಭಾರೀ ಸುದ್ದಿ ಆಗ್ತಿದ್ದಾರೆ. ಅವರೇ ನೀಡಿದ ಮಾಹಿತಿ ಪ್ರಕಾರ, ತಿಂಗಳಿಗೆ 5.9 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಪ್ರಯಾಣಕ್ಕಾಗಿ 3.5 ಲಕ್ಷ ರೂಪಾಯಿ ಮೀಸಲಿಟ್ಟರೆ, ಪ್ರತಿ ತಿಂಗಳು 1 ಲಕ್ಷ ರೂಪಾಯಿ ಎಸ್​ಐಪಿ ಪಾವತಿಸುತ್ತಿದ್ದೇವೆ ಎಂದಿದ್ದಾರೆ. 

‘ಟ್ರಾವೆಲಿಂಗ್ ದಂಪತಿ’ ಎಂದೇ ಖ್ಯಾತಿ ಪಡೆದಿರುವ ಈ ಜೋಡಿಯ ಆಗಸ್ಟ್ ತಿಂಗಳ ಖರ್ಚು ದಿಗಿಲು ಹುಟ್ಟಿಸುವಂತಿದೆ. ಸದ್ಯ ಅವರೇ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದ್ದು, ಒಬ್ಬ ಬಳಕೆದಾರ ಇದು ನನ್ನ ವಾರ್ಷಿಕ ಆದಾಯ ಎಂದು ಕಾಮೆಂಟ್ ಮಾಡಿದ್ದಾನೆ. 

ಇದನ್ನೂ ಓದಿ:ಟಾಟಾ ಮಾಡಲು ರೆಡಿ ಆಗಿರುವ ಬಿಸಿಸಿಐಗೆ ಸಾವಲು ಎಸೆದ ರೋಹಿತ್ ಶರ್ಮಾ..!

ಪ್ರಕೃತಿ ಮತ್ತು ಆಶಿಶ್ ಅಗರ್ವಾಲ್ ತಿಂಗಳಿಗೆ 5.9 ಲಕ್ಷ ರೂಪಾಯಿ ಖರ್ಚು ಮಾಡ್ತಿರುವ ಜೋಡಿಯಾಗಿದೆ. ಅಂದ್ಹಾಗೆ ಇವರು ಆಗಸ್ಟ್ ತಿಂಗಳಲ್ಲಿ ಮಾಡಿದ ಎಲ್ಲಾ ಖರ್ಚುಗಳನ್ನು ವಿಡಿಯೋದಲ್ಲಿ ವಿವರವಾಗಿ ನೀಡಿದ್ದಾರೆ. 

ನಾವು ಬೆಂಗಳೂರಿನಲ್ಲಿ ವಾಸಿಸುವ ದಂಪತಿ. ಇದು ನಮ್ಮ ಮಾಸಿಕ ಖರ್ಚು. ಹಣ ಮತ್ತು ಹೂಡಿಕೆಯ ಬಗ್ಗೆ ಗಂಡ ಹೆಂಡತಿ ಸಂಭಾಷಣೆ ತುಂಬಾನೇ ಮುಖ್ಯ. ಮದುವೆಯ ನಂತರ ಒಟ್ಟಿಗೆ ವಾಸಿಸುವುದಲ್ಲದೇ, ಜೀವನಪೂರ್ತಿ ಒಟ್ಟಿಗೆ ಬದುಕುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ ಮುಂಚಿತವಾಗಿಯೇ ಮಾತುಕತೆಗಳು ನಡೆದರೆ ತುಂಬಾನೇ ಮುಖ್ಯ. ಇದಕ್ಕಾಗಿಯೇ ನಾವು ಪ್ರತಿ ತಿಂಗಳು ಮಾಸಿಕ ಸಭೆ ನಡೆಸ್ತೇವೆ ಎಂದು ಜೋಡಿ ಹೇಳಿಕೊಂಡಿದೆ. 

ಒಟ್ಟು ವೆಚ್ಚ 5.90 ಲಕ್ಷ ರೂಪಾಯಿ 

  • ಬಾಡಿಗೆ 42 ಸಾವಿರ ರೂಪಾಯಿ
  • ಫಿಟ್ನೆಸ್​ 40 ಸಾವಿರ ರೂಪಾಯಿ
  • ದಿನಸಿ 20 ಸಾವಿರ ರೂಪಾಯಿ
  • ಇತರೆ ಅಗತ್ಯತೆಗೆ 10 ಸಾವಿರ ರೂಪಾಯಿ
  • ಆಹಾರ 13 ಸಾವಿರ ರೂಪಾಯಿ
  • ತಿಂಗಳ ಹೂಡಿಕೆ 1 ಲಕ್ಷ ರೂಪಾಯಿ
  • ಕ್ಯಾಬ್ 15 ಸಾವಿರ ರೂಪಾಯಿ
  • ಎರಡು ದೇಶಿಯ ಹೋಟೆಲ್, ಅಂತಾರಾಷ್ಟ್ರೀಯ ಟ್ರಾವೆಲಿಂಗ್, ಹೋಟೆಲ್ ಬುಕಿಂಗ್ ಸೇರಿ 3.5 ಲಕ್ಷ ರೂಪಾಯಿ

ಇದನ್ನೂ ಓದಿ:ಕೆ. ಆರ್​ ಮಾರ್ಕೆಟ್​ನಲ್ಲಿ ಹೂವಿನ ವ್ಯಾಪಾರ ಬಂದ್​.. ಬೇರೆಡೆ ಶಿಫ್ಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru couple
Advertisment