‘Halo Lips’ 2026ರಲ್ಲಿ ಸಖತ್ ಟ್ರೆಂಡಿಂಗ್​ನಲ್ಲಿ..! ಏನಿದು..?

ಕಾಲ ಬದಲಾದ ಹಾಗೆ ಯುವತಿಯರ ಫ್ಯಾಷನ್​ ಬದಲಾಗುತ್ತಾ ಹೋಗುತ್ತದೆ. ಅದು ದೈಹಿಕವಾಗಿ ಇರಬಹುದು ಅಥವಾ ಸೌಂದರ್ಯ ವರ್ಧಕಗಳಾಗಿರಬಹುದು. 2026ರಲ್ಲಿ ವೈರಲ್​ ಆಗುತ್ತಿರುವ ಹೊಸ ಬ್ಯೂಟಿ ಟ್ರೆಂಡ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..

author-image
Ganesh Kerekuli
Halo Lips
Advertisment

ಪ್ರಸಿದ್ಧ ಮೇಕಪ್ ಆರ್ಟಿಸ್ಟ್ ಕೇಟೀ ಜೇನ್ ಹ್ಯೂಸ್ ( Katie Jane Hughes) ವಿವರಿಸಿರುವ ‘ಹ್ಯಾಲೋ ಲಿಪ್ಸ್’ (Halo Lips) ಸಖತ್ ಟ್ರೆಂಡಿಂಗ್​ನಲ್ಲಿದೆ. 

ಏನಿದು ‘ಹ್ಯಾಲೊ ಲಿಪ್ಸ್’ ಟ್ರೆಂಡ್?

ಇದೊಂದು ತುಟಿಗಳ ಸುತ್ತ ಇರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ನಿವಾರಿಸಲು ಬಳಸಲಾಗುವ ಹ್ಯಾಲೊ ಫ್ರಾಕ್ಷನಲ್ ಲೇಸರ್ ಚಿಕಿತ್ಸೆಯಾಗಿದೆ. ಇಲ್ಲಿಯವರೆಗೆ ಫ್ಯಾಷನ್‌ನಲ್ಲಿದ್ದ ಗಾಢವಾದ ಅಥವಾ ಕಟ್ಟುನಿಟ್ಟಾದ ಲಿಪ್ ಲೈನರ್​ಗಳು ಈಗ ಹಳೆಯದಾಗಿವೆ. ಅದರ ಬದಲಿಗೆ, ಮೃದುವಾದ ಮತ್ತು ಮಸುಕಾದ ತುಟಿಗಳ ಅಂಚುಗಳು 2026ರ ಪ್ರಮುಖ ಆಕರ್ಷಣೆ.  

ಇಲ್ಲಿಯವರೆಗೆ ಅಲ್ಟ್ರಾ-ಡಿಫೈನ್ಡ್ ಲೈನರ್ ಮತ್ತು ಗ್ಲಾಸಿ ಲಿಪ್‌ಗಳು ಎಲ್ಲರ ಅಚ್ಚುಮೆಚ್ಚುಗಳಾಗಿದ್ದವು. ಆದರೆ ಈಗ ಅವುಗಳ ಸ್ಥಾನವನ್ನು ಹ್ಯಾಲೋ ಲಿಪ್ಸ್ ಆಕ್ರಮಿಸಿಕೊಂಡಿವೆ. ಲಿಲಿ ಅಲೆನ್, ದುವಾ ಲಿಪಾ ಮತ್ತು ಹೈಲಿ ಬೈಬರ್ ಅವರಂತಹ ಜಾಗತಿಕ ಐಕಾನ್‌ಗಳೊಂದಿಗೆ ಕೆಲಸ ಮಾಡಿರುವ ಪ್ರಸಿದ್ಧ ಮೇಕಪ್ ಕಲಾವಿದೆ ಕೇಟೀ ಜೇನ್ ಹ್ಯೂಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: BCCI ಮುಂದೆ ಗಿಲ್ ‘ಪಾಲಿಸಿ ಅಸ್ತ್ರ’.. ಬಲಿಷ್ಠ ತಂಡ ಕಟ್ಟಲು ಗಿಲ್ ಹೊಸ ಪ್ರಯೋಗ..!

Halo Lips (1)

2026ರಲ್ಲಿ ಶಾರ್ಪ್ ಆಗಿ ಕಾಣುವ ಮುಖಕ್ಕಿಂತ, ಮೃದುವಾಗಿ ಮತ್ತು ನೈಸರ್ಗಿಕವಾಗಿ ಕಾಣುವ ಮುಖವೇ ಹೆಚ್ಚು ಆಕರ್ಷಕ. ಮೇಕಪ್ ಇಲ್ಲದೆನೇ ಸುಂದರವಾಗಿ ಕಾಣುವ 'ನೋ-ಮೇಕಪ್ ಲುಕ್'ಗೆ ಈ 'ಹ್ಯಾಲೊ ಲಿಪ್ಸ್' ಮಹಿಳೆಯರ ಭಿನ್ನಾಣವನ್ನು ಹೆಚ್ಚಿಸುತ್ತದೆ.
ಹುಡಾ ಕಟನ್ ಅವರ 'ಲಿಪ್ ಕಫಿಂಗ್' ತಂತ್ರವು ಗಾಢವಾದ ಲೈನರ್ ಬಳಸಿ ತುಟಿಗಳಿಗೆ ಒಂದು ನಿಖರ ಚೌಕಟ್ಟು ನೀಡಿ ಅವು ದಪ್ಪವಾಗಿ ಕಾಣಿಸುವಂತೆ ಮಾಡುತ್ತದೆ. 'ಹ್ಯಾಲೊ ಲಿಪ್ಸ್' ಇದರ ವಿರುದ್ಧದ ಶೈಲಿಯಾಗಿದೆ.

ಹ್ಯಾಲೊ ಲಿಪ್ಸ್​ನಲ್ಲಿ ತುಟಿಗಳ ಅಂಚುಗಳು ಗಾಢವಾಗಿ ಅಥವಾ ಶಾರ್ಪ್ ಆಗಿ ಇರುವುದಿಲ್ಲ. ಬದಲಿಗೆ ಅವುಗಳನ್ನು ಬ್ಲೆಂಡ್ ಮಾಡಿ ಕಾಣದಂತೆ ಮುಸುಕುಗೊಳಿಸಲಾಗುತ್ತದೆ. ಇದು ತುಟಿಗಳು ಸ್ವಾಭಾವಿಕವಾಗಿ ತುಂಬಿದಂತೆ (Plump) ಮತ್ತು ಮೃದುವಾಗಿ (Soft) ಕಾಣುವಂತೆ ಮಾಡುತ್ತದೆ. ಇತ್ತೀಚಿನ ನಟಿಯರು, ಯುವತಿಯರು, ಮಹಿಳಾ ಮಣಿಗಳು ಸೇರಿದಂತೆ ಇದೀಗ ಈ ಟ್ರೆಂಡ್​ನ ರೂವಾರಿಯಾಗಿದ್ದಾರೆ.

ಇದನ್ನೂ ಓದಿ: ಚೀನಾಬ್ ನದಿಯ ನಾಲ್ಕು ಹೈಡ್ರೋಪವರ್ ಪ್ರಾಜೆಕ್ಟ್ ಗಳಿಗೆ ವೇಗ : ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Halo Lips,
Advertisment