ಪಾಂಡ್ಯ ವಾಚ್​ನ ಬೆಲೆ 15-18 ಕೋಟಿ ಅಲ್ಲ -ಏಷ್ಯಾ ಕಪ್ ವಿಜೇತರಿಗೂ ಇಷ್ಟು ಹಣ ಸಿಗಲ್ಲ..!

ಏಷ್ಯಾ ಕಪ್‌ಗಾಗಿ ದುಬೈ ತಲುಪಿದ ಹಾರ್ದಿಕ್ ಪಾಂಡ್ಯ, ಹೊಸ ಹೇರ್​ಸ್ಟೈಲ್​ನಿಂದಾಗಿ ಸುದ್ದಿಯಾದರು. ಈಗ ಪ್ರ್ಯಾಕ್ಟೀಸ್ ಅವಧಿಯಲ್ಲಿ ಧರಿಸಿದ್ದ ದುಬಾರಿ ಗಡಿಯಾರದ ಬಗ್ಗೆ ಜನ ಮಾತಾಡ್ತಿದ್ದಾರೆ. ಅವರು ರಿಚರ್ಡ್ ಮಿಲ್ಲೆ RM27-04 ಗಡಿಯಾರ ಧರಿಸಿದ್ದರು. ಇದರ ಮೌಲ್ಯ ಸುಮಾರು 20 ಕೋಟಿ ರೂಪಾಯಿ ಆಗಿದೆ.

author-image
Ganesh Kerekuli
Hardik pandya watch
Advertisment

ಏಷ್ಯಾ ಕಪ್‌ಗಾಗಿ ದುಬೈ ತಲುಪಿದ ಹಾರ್ದಿಕ್ ಪಾಂಡ್ಯ, ಹೊಸ ಹೇರ್​ಸ್ಟೈಲ್​ನಿಂದಾಗಿ ಸುದ್ದಿಯಾದರು. ಈಗ ಪ್ರ್ಯಾಕ್ಟೀಸ್ ಅವಧಿಯಲ್ಲಿ ಧರಿಸಿದ್ದ ದುಬಾರಿ ಗಡಿಯಾರದ ಬಗ್ಗೆ ಜನ ಮಾತಾಡ್ತಿದ್ದಾರೆ. ಅವರು ರಿಚರ್ಡ್ ಮಿಲ್ಲೆ RM27-04 ಗಡಿಯಾರ ಧರಿಸಿದ್ದರು. ಇದರ ಮೌಲ್ಯ ಸುಮಾರು 20 ಕೋಟಿ ರೂಪಾಯಿ ಆಗಿದೆ. ಏಷ್ಯಾ ಕಪ್ ಗೆಲ್ಲುವ ತಂಡಕ್ಕೂ ಸಹ ಇಷ್ಟೊಂದು ಬಹುಮಾನದ ಹಣ ಸಿಗಲ್ಲ. 

50 ಜನರ ಬಳಿ ಮಾತ್ರ ಈ ವಾಚ್​..!

ರಿಚರ್ಡ್ ಮಿಲ್ಲೆ RM27-04 ವಾಚ್​ ಅನ್ನು ಟೆನಿಸ್ ಆಟಗಾರ ರಾಫೆಲ್ ನಡಾಲ್‌ಗಾಗಿ ತಯಾರಿಸಲಾಗಿತ್ತು. ನಂತರ ಇದೇ ಮಾದರಿಯ 50 ಕೈಗಡಿಯಾರಗಳನ್ನು ತಯಾರಿಸಲಾಗಿದೆ. ಇದರ ತೂಕ ಕೇವಲ 30 ಗ್ರಾಂ. ವೆಬ್‌ಸೈಟ್ ಪ್ರಕಾರ, ಈ ಗಡಿಯಾರದ ಬೆಲೆ ಸುಮಾರು 20 ಕೋಟಿ ರೂಪಾಯಿ.

2025ರ ಏಷ್ಯಾ ಕಪ್ ವಿಜೇತರ ಬೆಲೆ ಎಷ್ಟು?

ಸೆಪ್ಟೆಂಬರ್ 9 ರಿಂದ ಏಷ್ಯಾ ಕಪ್ ಆರಂಭವಾಗಲಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಸೆಪ್ಟೆಂಬರ್ 10 ರಿಂದ ತನ್ನ ಅಭಿಯಾನ ಪ್ರಾರಂಭಿಸಲಿದೆ. ಮೊದಲ ಪಂದ್ಯದಲ್ಲಿ ಯುಎಇ ಎದುರಿಸಲಿದ್ದು, ಸೆಪ್ಟೆಂಬರ್ 14 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ. 

ಇದನ್ನೂ ಓದಿ:ವಿಶ್ವದ 5 ಅಂತ್ಯಂತ ದುಬಾರಿ , ಐಷಾರಾಮಿ ಫೋನ್​ಗಳು..! ಇವುಗಳನ್ನ ಯಾರೆಲ್ಲ ಬಳಸುತ್ತಾರೆ?

ಭಾರತವು ಗುಂಪು ಹಂತದ ಮೂರನೇ ಪಂದ್ಯವನ್ನು ಒಮನ್ ಜೊತೆ ಆಡಲಿದೆ. ಗುಂಪು ಬಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಹಾಂಗ್ ಕಾಂಗ್ ಸೇರಿವೆ. ಈ ಬಾರಿ ಏಷ್ಯಾಕಪ್ ಗೆದ್ದ ತಂಡಕ್ಕೆ ಬಹುಮಾನದ ಹಣವನ್ನು ಹೆಚ್ಚಿಸಲಾಗಿದೆ. 3 ಲಕ್ಷ ಅಮೆರಿಕನ್ ಡಾಲರ್‌ಗಳು ಸಿಗಲಿವೆ, ಇದು ಭಾರತೀಯ ಕರೆನ್ಸಿಯಲ್ಲಿ 2.6 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ:ಟಾಟಾ ಕಂಪನಿಯ ಕಾರ್ ಗಳ ಬೆಲೆ 65 ಸಾವಿರದಿಂದ 1.45 ಲಕ್ಷ ರೂ.ವರೆಗೆ ಕಡಿತ, ಗ್ರಾಹಕರಿಗೆ ಭರ್ಜರಿ ಲಾಭ!



ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Hardik Pandya, Krunal Pandya Hardik Pandya
Advertisment