ಭಾರತದ ಈ AI ಎಕ್ಸ್‌ಪರ್ಟ್‌, ex-Microsoft ಉದ್ಯೋಗಿ ರಷ್ಯಾದಲ್ಲಿ ಕಸಗುಡಿಸ್ತಿದ್ದಾರೆ.. ಸಂಬಳ ಎಷ್ಟು ಗೊತ್ತಾ..?

ಈ ಹಿಂದೆ ಭಾರತದಲ್ಲಿ ಸಾಫ್ಟ್​ವೇರ್ ಡೆವಲಪರ್ ಆಗಿ ಕೆಲಸ ಮಾಡಿದ್ದ ಮುಖೇಶ್ ಮಂಡಲ್, AI ತಂತ್ರಜ್ಞಾನ, ಚಾಟ್​​ಬಾಟ್​, ಜಿಪಿಟಿ ಅಂತ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದಾರೆ. ಕೀ ಬೋರ್ಡ್​​ನಲ್ಲಿ ಸಾಫ್ಟ್​ವೇರ್ ಕೋಡಿಂಗ್ ಟೈಪ್ ಮಾಡುತ್ತಿದ್ದ ಮಂಡಲ್​ ಇದೀಗ ರಷ್ಯಾದ ಬೀದಿಗಳಲ್ಲಿ ಕಸ ಗುಡಿಸುತ್ತಿದ್ದಾರೆ.

author-image
Ganesh Kerekuli
Mukesh Mandal (1)
Advertisment

ಭಾರತೀಯರು ಹೆಚ್ಚಾಗಿ ಉದ್ಯೋಗಾವಕಾಶ ಹುಡುಕಿಕೊಂಡು ವಿದೇಶಕ್ಕೆ ಹೋಗುತ್ತಾರೆ. ಅದು ಸಾಫ್ಟ್​ವೇರ್ ಉದ್ಯೋಗವಾಗಿರಲಿ ಅಥವಾ ಪ್ರತಿಷ್ಠಿತ ಸಂಸ್ಥೆಗಳ ಉದ್ಯೋಗವಾಗಿರಲಿ, ತಮ್ಮ ಕುಟುಂಬ ಅಥವಾ ಅವರ ವೈಯಕ್ತಿಕ ಕನಸು ನನಸಾಗಿಸಿಕೊಳ್ಳುವುದು ಅಥವಾ ಹಣಗಳಿಸುವ ಗುರಿಯನ್ನಿಟ್ಟುಕೊಂಡು ವಿದೇಶಕ್ಕೆ ಹೋಗುವವರೇ ಹೆಚ್ಚು. ಅಲ್ಲಿ ಕಷ್ಟಪಟ್ಟು ದುಡಿದ ಹಣ ತಮ್ಮ ಮನೆಗಳಿಗೆ ಕಳುಹಿಸುತ್ತಾರೆ. 

ಭಾರತದಲ್ಲಿ ವೈದ್ಯ ವೃತ್ತಿಯ ನಂತರ ಸಾಫ್ಟ್​ವೇರ್ ಎಂಜಿನಿಯರ್ ಕೆಲಸ ಅತ್ಯಂತ ಪ್ರತಿಷ್ಠಿತ ಕೆಲಸವೆಂದೇ ಬಹುತೇಕರು ಭಾವಿಸುತ್ತಾರೆ. ಸಾಪ್ಟ್​ವೇರ್ ಎಂಜಿನಿಯರ್ ಆಗುವುದು ಕನಸಿನ ವೃತ್ತಿ ಎಂದೇ ಹಲವರು ಪರಿಗಣಿಸುತ್ತಾರೆ. 

ಆದರೆ ಭಾರತೀಯ ಸಾಫ್ಟ್​​​ವೇರ್ ಎಂಜಿನಿಯರ್​ ಒಬ್ಬರು ರಷ್ಯಾದಲ್ಲಿ ಬೀದಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ವಿಚಾರ ಐಟಿ ಕನಸು ಕಾಣುವವರಿಗೆ ಆತಂಕ ಉಂಟು ಮಾಡುತ್ತಿದೆ. ಭಾರತೀಯ ಮೂಲದ 26 ವರ್ಷದ ಸಾಫ್ಟ್​ವೇರ್ ಎಂಜಿನಿಯರ್ ಮುಖೇಶ್ ಮಂಡಲ್​​ ಅವರು ರಷ್ಯಾದಲ್ಲಿ ಬೀದಿ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ.  ಮಂಡಲ್ ಜೊತೆಗೆ ಒಟ್ಟು 17 ಭಾರತೀಯ ವಲಸಿಗಾರರು ಸಾಫ್ಟ್​ವೇರ್ ಉದ್ಯೋಗವನ್ನು ತೊರೆದು ಸ್ವಚ್ಛತಾ ಕಾರ್ಮಿಕರಾಗಿ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ಭಾರತದಲ್ಲಿ ಸಾಫ್ಟ್​ವೇರ್ ಡೆವಲಪರ್ ಆಗಿ ಕೆಲಸ ಮಾಡಿದ್ದ ಮುಖೇಶ್ ಮಂಡಲ್, AI ತಂತ್ರಜ್ಞಾನ, ಚಾಟ್​​ಬಾಟ್​, ಜಿಪಿಟಿ ಅಂತ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದಾರೆ. ಕೀ ಬೋರ್ಡ್​​ನಲ್ಲಿ ಸಾಫ್ಟ್​ವೇರ್ ಕೋಡಿಂಗ್ ಟೈಪ್ ಮಾಡುತ್ತಿದ್ದ ಮಂಡಲ್​ ಇದೀಗ ರಷ್ಯಾದ ಬೀದಿಗಳಲ್ಲಿ ಕಸ ಗುಡಿಸುತ್ತಿದ್ದಾರೆ. ಸೇಂಟ್ ಪೀಟರ್ಸ್​​ಬರ್ಗ್​ನಲ್ಲಿ  ಬೀದಿ ಸ್ವಚ್ಚಗೊಳಿಸುತ್ತಿರುವ ಮಂಡಲ್​ ತಿಂಗಳಿಗೆ 1 ಲಕ್ಷ ರೂ. ಸಂಬಳ ಪಡೆಯುತ್ತಿದ್ದಾರೆ. 

ಇದನ್ನೂ ಓದಿ: ಗ್ರಾಹಕರ ಗೌಪ್ಯತೆ ಉಲಂಘನೆ: ಉದಯಪುರದ ದಿ ಲೀಲಾ ಪ್ಯಾಲೇಸ್‌ ಹೋಟೇಲ್‌ಗೆ 10 ಲಕ್ಷ ಪರಿಹಾರ ಪಾವತಿಗೆ ಆದೇಶ

Mukesh Mandal

ರಷ್ಯಾದಲ್ಲಿ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡುತ್ತಿದ್ದು ಕೊಲೊಮ್ಯಾಜ್ಸ್ಕೊಯ್ ಪುರಸಭೆಯ ರಸ್ತೆ ನಿರ್ವಹಣಾ ಕಂಪನಿಯು 17 ಭಾರತೀಯರನ್ನು ಬೀದಿ ಸ್ವಚ್ಚಗೊಳಿಸುವಿಕೆ, ನಿರ್ವಹಣೆಗೆ ನೇಮಿಸಿದೆ. ಇವರೆಲ್ಲರನ್ನೂ ಅಲ್ಪಾವಧಿಯ ಒಪ್ಪಂದಗಳ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ರಷ್ಯಾದಲ್ಲಿ ಕಾರ್ಮಿಕರ ತೀವ್ರ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಕಂಪನಿಗಳು ಕಾರ್ಮಿಕರನ್ನ ಹೊರದೇಶದಿಂದ ನೇಮಿಸಿಕೊಳ್ಳುತ್ತಿವೆ. ಸ್ವಚ್ಚಗೊಳಿಸುವ ಕೆಲಸಕ್ಕೆ ಪ್ಯಾಕೇಜ್ ಭಾಗವಾಗಿ ಅವರಿಗೆ ವಸತಿ, ಆಹಾರ, ಮೂಲಭೂತ ಸೌಕರ್ಯವನ್ನೂ ಒದಗಿಸುತ್ತಿವೆ

ರಷ್ಯಾದಲ್ಲಿ ನೈರ್ಮಲ್ಯ ಕಾರ್ಮಿಕರ ಸಂಬಳ 1 ರಿಂದ 1.10 ಲಕ್ಷ

ರಷ್ಯಾದಲ್ಲಿ ಕಾರ್ಮಿಕರಿಗಾಗಿ ವಸತಿ, ಆಹಾರ, ಸುರಕ್ಷತಾ ವ್ಯವಸ್ಥೆ ಸೇರಿ ಅವರ ದೈನಂದಿನ ಸಾರಿಗೆ ಸೇರಿ ಎಲ್ಲಾ ಮೂಲ ಸೌಕರ್ಯಗಳನ್ನ ಅವರ ಉದ್ಯೋಗದಾತರೇ ನೋಡಿಕೊಳ್ಳುತ್ತಾರೆ. ಅಲ್ಲದೇ ಗೋಮಾಂಸ ಹೊರತುಪಡಿಸಿ ಕಾರ್ಮಿಕರಿಗೆ ಊಟದ ಆಯ್ಕೆಯನ್ನು ಸಹ ಒದಗಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕಾರ್ಮಿಕರು ತಿಂಗಳಿಗೆ 100,000 ರೂಬಲ್ಸ್​ಗಳನ್ನ ಪಡೆಯುತ್ತಾರೆ. ಅಂದರೆ ಇದು ಸರಿ ಸುಮಾರು 1 ಲಕ್ಷದ 13 ಸಾವಿರ ರೂ. ತಮ್ಮ ಕೆಲಸದ ಬಗ್ಗೆ ಪ್ರತಿಕ್ರಿಯಿಸಿರುವ ಮುಖೇಶ್ ಮಂಡಲ್ ತಮಗೆ ಕೆಲಸದ ಸ್ವರೂಪ ಮುಖ್ಯವಲ್ಲ. ಕೆಲಸ ಎಲ್ಲಿ ಮಾಡಿದರೂ ಅದನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಅಂತಾರೆ. 

ಇದನ್ನೂ ಓದಿ:ಹಲ್​ಚಲ್ ಎಬ್ಬಿಸಿದ RCB ಮಾಜಿ ಸ್ಟಾರ್​​ನ ಚಾಟ್​​ಗಳು..!

ಈ ಕೆಲಸ ತಾತ್ಕಾಲಿಕ ವ್ಯವಸ್ಥೆ. ಸೀಮಿತ ಅವಧಿಗೆ ಕೆಲಸ ಮಾಡಿ, ಹಣ ಗಳಿಸಿ ಮನೆಗೆ ಮರಳುವೆ ಅಂತಾರೆ ಮಂಡಲ್. ಯಾವುದೇ ಸಣ್ಣ ಅಥವಾ ದೊಡ್ಡ ಕೆಲಸ ಎಂದುಕೊಳ್ಳಬಾರದು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮುಖ್ಯ ಅಂತಾರೆ ಮಂಡಲ್.

ಮುಖೇಶ್ ಮಂಡಲ್ ಜೊತೆಗಿರುವ ಇತರ 16 ಭಾರತೀಯರು ಸಹ ಸ್ವಯಂಪ್ರೇರಣೆಯಿಂದ ನೈರ್ಮಲ್ಯ ಕೆಲಸಕ್ಕೆ ಜಾಯಿನ್ ಆಗಿದ್ದಾರೆ. ಮಂಡಲ್ ಕೆಲಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಇದನ್ನು ಸ್ಪೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆರ್ಥಿಕ ಒತ್ತಡ ಇಂಥಾ ನಿರ್ಧಾರಕ್ಕೆ ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ.

ವಿಶೇಷ ವರದಿ: ವಿಶ್ವನಾಥ್ ಜಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Mukesh Mandal
Advertisment