/newsfirstlive-kannada/media/media_files/2025/08/12/nita-ambani-audi-a9-chameleon-2025-08-12-16-36-55.jpg)
ನಿತಾ ಅಂಬಾನಿ (Nita Ambani) ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ. ಉದ್ಯಮಿ ಕೂಡ ಆಗಿರುವ ನಿತಾ ಅಂಬಾನಿ ಬಳಿ ಅತ್ಯಂತ ದುಬಾರಿ ಬೆಲೆಯ ಕಾರು ಇದೆ. ಆ ಕಾರಿನ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ!
ಹೇಗಿದೆ ಆ ಕಾರು..?
ಅಂದಹಾಗೆ ಅಂಬಾನಿ ಕುಟುಂಬವು ಅನೇಕ ದುಬಾರಿ ಕಾರುಗಳನ್ನು ಹೊಂದಿದೆ. ದೇಶದ ಅತ್ಯಂತ ದುಬಾರಿ ಕಾರು ಆಡಿ A9 ಚಮೆಲಿಯನ್ (Audi a9 chameleon) ಎಂದು ಪರಿಗಣಿಸಲಾಗಿದೆ. ಈ ಕಾರಿನ ಮಾಲೀಕರು ನೀತಾ ಅಂಬಾನಿ. ನೀತಾ ಅಂಬಾನಿ ದೇಶದ ಅತ್ಯಂತ ದುಬಾರಿ ಕಾರನ್ನು ಹೊಂದಿದ್ದು, ಇದರ ಬೆಲೆ ಸುಮಾರು 100 ಕೋಟಿ ರೂಪಾಯಿ. ವರದಿಗಳ ಪ್ರಕಾರ ಈ ಆಡಿ ಕಾರು ಸುಮಾರು 600 ಅಶ್ವಶಕ್ತಿಯ ಶಕ್ತಿಶಾಲಿ ಎಂಜಿನ್‌ನೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಕಾರಿನ ಸ್ಪೆಷಲ್ ಏನು?
ಈ ಆಡಿ ಕಾರಿನ ವಿಶೇಷತೆಯನ್ನು ಏನೆಂದರೆ.. ಒಂದು ಬಟನ್ ಒತ್ತುವ ಮೂಲಕ ಕಾರಿನ ಬಣ್ಣವನ್ನೇ ಬದಲಾಯಿಸಬಹುದು. ಇಡೀ ಜಗತ್ತಿನಲ್ಲಿ ಕೇವಲ 11 ಕಾರುಗಳು ಮಾತ್ರ ಮಾರಾಟವಾಗಿವೆ. ಈ ಕಾರು 4.0 ಲೀಟರ್ V8 ಎಂಜಿನ್ (powerful 4.0-liter V8 engine ) ಹೊಂದಿದೆ. ಈ ಎಂಜಿನ್ ಗರಿಷ್ಠ 600 HP (horsepower) ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕೇವಲ ಎರಡು ಬಾಗಿಲುಗಳನ್ನು ಮಾತ್ರ ಇದೆ. ಕಾರಿನ ಉದ್ದ ಸುಮಾರು 5 ಮೀಟರ್.
ಇದನ್ನೂ ಓದಿ:ಬೈಕ್ ಪ್ರಿಯರಿಗೆ ಬಂಪರ್ ಆಫರ್.. HARLEY-DAVIDSON ಕಂಪನಿಯಿಂದ 3 ಲಕ್ಷ ಡಿಸ್ಕೌಂಟ್; ಏನದು..?
ಆಧುನಿಕ ತಂತ್ರಗಳಿಂದ ಕಾರನ್ನು ವಿನ್ಯಾಶಗೊಳಿಸಲಾಗಿದೆ. ಅಂಬಾನಿ ಕುಟುಂಬ ಈ ಕಾರು ಹೊಂದಿರುವ ಬಗ್ಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನಿತಾ ಅಂಬಾನಿ ಕಾರನ್ನು ಖರೀದಿಸಿರುವ ಬಗ್ಗೆ ವರದಿಗಳು ಹೇಳಿವೆ. Audi a9 chameleon ಮಾತ್ರವಲ್ಲ, ಅನೇಕ ಐಷಾರಾಮಿ ಕಾರುಗಳನ್ನು ನಿತಾ ಅಂಬಾನಿ ಹೊಂದಿದ್ದಾರೆ. Rolls-Royce Phantom VIII EWB, Mercedes-Maybach S600 Guard, Ferrari 812 Superfast, Bentley Continental Flying Spur, Rolls-Royce Cullinan, and BMW 7 Series 760Li ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇಳಿಕೆಯಾಯ್ತು ಎಲೆಕ್ಟ್ರಿಕ್ ವಾಹನಗಳ ಖರೀದಿ.. ಯಾಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ