/newsfirstlive-kannada/media/media_files/2025/08/11/team-india-world-cup-1-2025-08-11-22-57-17.jpg)
ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ದೇಶದಲ್ಲಿ ದ್ವಿಗುಣವಾಗಿದೆ. ದಿನದಿಂದ ದಿನಕ್ಕೆ EVಗಳನ್ನು ಖರೀದಿ ಮಾಡೋರ ಸಂಖ್ಯೆ ಜಾಸ್ತಿ ಆಗ್ತಾ ಇದೆ. ಈ ಟ್ರೆಂಡ್ ದೇಶದ ಬಹುತೇಕ ಭಾಗದಲ್ಲಿ ಹೀಗೇ ಇದೆ. ಆದ್ರೆ ಇದರ ವಿರುದ್ಧದ ಪ್ಯಾಟರ್ನ್ನ ನಾವು ನಮ್ಮ ಬೆಂಗಳೂರಿನಲ್ಲಿ ಕಾಣ್ತಾ ಇದ್ದೀವಿ. ದೇಶದಲ್ಲಿ ಅತೀ ಹೆಚ್ಚು ದ್ವಿ-ಚಕ್ರ ವಾಹನಗಳನ್ನು ಹೊಂದಿರುವ ನಗರವಾದ್ರೂ ಯಾಕೋ ನಮ್ ಮಂದಿ ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಯಾಕೋ ಹಿಂದೆ ಉಳಿದಿರುವಂತೆ ಕಾಣ್ತಾ ಇದೆ.. ಅದ್ರಲ್ಲೂ ಇವಿ ಚಾರ್ಜಿಂಗ್ ಸ್ಟೇಷನ್ ಅಳವಡಿಕೆಗಳಲ್ಲಿ ಬೆಂಗಳೂರೇ ನಂಬರ್ 1 ಆಗಿದ್ರೂ, ರಾಜ್ಯದಲ್ಲಿ ಈ ಬೆಳವಣಿಗೆ ನಿಜಕ್ಕೂ ಅನಿರೀಕ್ಷಿತ.
ಇದನ್ನೂ ಓದಿ: ಬೈಕ್ ಪ್ರಿಯರಿಗೆ ಬಂಪರ್ ಆಫರ್.. HARLEY-DAVIDSON ಕಂಪನಿಯಿಂದ 3 ಲಕ್ಷ ಡಿಸ್ಕೌಂಟ್; ಏನದು..?
ಸಾಕಷ್ಟು ಜನ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿರೋದು, ಮಾಲಿನ್ಯದ ಹಿತದೃಷ್ಟಿಯಿಂದ ನಿಜಕ್ಕೂ ಒಳ್ಳೆಯ ಬೆಳವಣಿಗೆ ಆಗಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಸದ್ದು ಮಾಡ್ತಿದ್ದ ಇವಿ, ಯಾಕೋ ಮೂಲೆ ಗುಂಪಾಗೋ ಎಲ್ಲಾ ಲಕ್ಷಣ ಕಾಣಿಸ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ಇಳಿಕೆ ಕಂಡಿದೆ.
ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಪ್ರತಿನಿತ್ಯ 3 ಸಾವಿರದ 170 ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು ನೋಂದಣಿಯಾದ್ರೆ, ಕೇವಲ 370 ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಮಾತ್ರ ನೋಂದಾಯಿಸಲ್ಪಟ್ಟಿವೆ. ಹಾಗಿದ್ರೆ ಏಕಾಏಕಿ ಇಳಿಕೆ ಆಗೋದಕ್ಕೆ ಕಾರಣಗಳೇನು? 2019ರಲ್ಲಿ ಎಷ್ಟು ಇವಿ ಎಲೆಕ್ಟ್ರಿಕ್ ನೋಂದಣಿ ಆಗಿತ್ತು ಈಗ ಎಷ್ಟಿದೆ ಅನ್ನೋದನ್ನ ನೋಡೋದಾದ್ರೆ.. ಸಾರಿಗೆ ಇಲಾಖೆಯ ಪ್ರಕಾರ 2019-20ರಲ್ಲಿ ಕರ್ನಾಟಕದಲ್ಲಿ 4 ಸಾವಿರದ 616 ಎಲೆಕ್ಟಿಕ್ ಸ್ಕೂಟರ್ಗಳನ್ನ ನೋಂದಾಯಿಸಲಾಗಿದೆ. ಇದು 2022-23ರಲ್ಲಿ 95 ಸಾವಿರದ 160ಕ್ಕೆ ಏರಿತ್ತು.. ನಂತರ 2023 -24ರಲ್ಲಿ 1 ಲಕ್ಷದ 43 ಸಾವಿರದ 433ಕ್ಕೆ ಏರಿಕೆ ಕಂಡಿತ್ತು.. ಇದೀಗ 2024-25ರಲ್ಲಿ 1 ಲಕ್ಷದ 37ಸಾವಿರದ 569ಕ್ಕೆ ಇಳಿಕೆ ಆಗಿದೆ.
ಇದನ್ನೂ ಓದಿ:ಬರೀ 1 ರೂಪಾಯಿಗೆ 30 ದಿನ ಅನ್ ಲಿಮಿಟೆಡ್ ಕರೆ, 2GB ಡೇಟಾ; BSNL ಫ್ರೀಡಂ ಆಫರ್..!
ಕಾರಣ ಏನು..?
ಇವಿ ಸ್ಕೂಟರ್ ವೇಗವಾಗಿ ಚಾರ್ಜಿಂಗ್ ಆಗಲ್ಲ, ಇದ್ರಿಂದ ಸಿಕ್ಕಾಪಟ್ಟೆ ಟೈಮ್ ವೆಸ್ಟ್ ಆಗ್ತಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನದ ಮೇಲೆ ಆಸಕ್ತಿ ಕಡಿಮೆ ಆಗಿದೆ ಅನ್ನೋದು ಸಾರಿಗೆ ಇಲಾಖೆ ಅಧಿಕಾರಿಗಳ ವಾದವಾದ್ರೆ, ಮನೆಗಳಲ್ಲಿ ಬಳಸೋ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್, ನಿಧಾನ ಗತಿಯಲ್ಲಿ ಆಗುತ್ತೆ. ಇನ್ನು ಮಳೆಯ ಸಮಯದಲ್ಲಿ ಮತ್ತು ಗುಂಡಿಮಯ ರಸ್ತೆಗಳಲ್ಲಿ ಇದನ್ನ ಬಳಸೋದಕ್ಕೆ ಭಯ ಆಗ್ತಿದೆ ಅನ್ನೋದು ಜನ್ರ ಮಾತು. ಅಲ್ದೆ ಮೊದ್ಲು ದ್ವಿಚಕ್ರ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ಆಕರ್ಷಕ ರಿಯಾಯಿತಿಗಳನ್ನ ಕೊಟ್ಟು ಜನರನ್ನ ಸೆಳೆಯುತ್ತಿತ್ತು. ಆದ್ರೀಗ ಲಾಭದ ದೃಷ್ಟಿಯಿಂದ ರಿಯಾಯಿತಿಗಳನ್ನ ಕಡಿಮೆ ಮಾಡ್ಲಾಗಿದೆ ಅನ್ನೋದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ: ಫ್ಯಾಮಿಲಿ ಸ್ನೇಹಿ WAGON-R ಕಾರ್ನ ‘1 ಕೋಟಿ’ಯ ಸಾಧನೆ..!
ಒಟ್ಟಾರೆ ಪೆಟ್ರೋಲ್-ಡಿಸೇಲ್ ಗಾಡಿಗಿಂತ ಜನರು ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಬಳಕೆ ಮಾಡ್ತಿರೋದು, ಮಾಲಿನ್ಯದ ಹಿತತೃಷ್ಟಿಯಿಂದ ನಿಜಕ್ಕೂ ಒಳ್ಳೆಯ ಬೆಳವಣಿಗೆ ಆಗಿತ್ತು. ಆದ್ರೀಗ ಚಾರ್ಜಿಂಗ್ ಸಮಸ್ಯೆಯಿಂದ, ಮತ್ತು ಬೇರೆ ಬೇರೆ ಕಾರಣಗಳಿಂದ, EV ವೆಹಿಕಲ್ಸ್ ಮೂಲೆ ಗುಂಪಾಗುತ್ತಾ? ಇದು ಈ ಕಾಡ್ತಾ ಇರೋ ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ