ನಿಮ್ಮ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದೀರಾ..? ಪೋಷಕರು ಓದಲೇಬೇಕಾದ ಸ್ಟೋರಿ..!

ಪುಟ್ಟ ಮಕ್ಕಳಿಗೆ ಕಾಡಿಗೆ ಹಚ್ಚುವ ಮುನ್ನ ಪೋಷಕರು ಇದರ ಬಗ್ಗೆ ತಿಳಿದುಕೊಂಡರೆ ಉತ್ತಮ. ಮುಖ ಚೆನ್ನಾಗಿ ಕಾಣಲು ಪೋಷಕರು ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚುವುದು ರೂಢಿ ಮಾಡಿಕೊಂಡಿರುತ್ತಾರೆ. ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆಯನ್ನು ತಯಾರು ಮಾಡಿ ಮಕ್ಕಳಿಗೆ ಹಚ್ಚುತ್ತಾರೆ.

author-image
NewsFirst Digital
kajal on baby
Advertisment

ಹೆಣ್ಣು ಮಕ್ಕಳು ಎಷ್ಟೇ ಚೆನ್ನಾಗಿ ರೆಡಿಯಾದ್ರು ಕಣ್ಣಿಗೆ ಕಾಡಿಗೆ ಹಚ್ಚಿಲ್ಲ ಅಂದರೆ ಮುಖದ ಸೌಂದರ್ಯ ಮಾಸಿದಂತೆ ಆಗುತ್ತೆ. ಕಾಡಿಗೆ ಕಣ್ಣಿನ ಅಂದವನ್ನು ದುಪ್ಪಟ್ಟುಗೊಳಿಸುತ್ತದೆ. ಸಿಂಪಲ್ ಮೇಕಪ್ ಎನ್ನುವವರು ಕೂಡ ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳೋತ್ತಾರೆ. ಕೆಲವರಂತೂ ಕಣ್ಣಿಗೆ ಕಾಡಿಗೆ ಹಚ್ಚದೆ ಮನೆಯಿಂದ ಹೊರಗೆ ಬರೋದಿಲ್ಲ. ಇನ್ನೂ, ಬಹುತೇಕ ಪೋಷಕರು ಪುಟ್ಟ ಮಕ್ಕಳ ಮೇಲೆ ಯಾರ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಕಾಡಿಗೆ ಹಚ್ಚುತ್ತಾರೆ. 

ಇದನ್ನೂ ಓದಿ:ಭರ್ಜರಿ ಬ್ಯಾಚುಲರ್ಸ್ 2 ಮುಕ್ತಾಯದ ಬೆನ್ನಲ್ಲೇ ಪ್ರವೀಣ್​ ಜೈನ್ ಮನೆಗೆ ಹೊಸ ಅತಿಥಿ ಆಗಮನ.. ಏನದು..?

ಆದರೆ ಹೀಗೆ ಪುಟ್ಟ ಮಕ್ಕಳಿಗೆ ಕಾಡಿಗೆ ಹಚ್ಚುವ ಮುನ್ನ ಪೋಷಕರು ಇದರ ಬಗ್ಗೆ ತಿಳಿದುಕೊಂಡರೆ ಉತ್ತಮ. ಸಾಮಾನ್ಯವಾಗಿ ಮುಖ ಚೆನ್ನಾಗಿ ಕಾಣಲು ಪೋಷಕರು ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚುವುದು ರೂಢಿ ಮಾಡಿಕೊಂಡಿರುತ್ತಾರೆ. ಕೆಲವರ ಮನೆಯಲ್ಲಿ ನೈಸರ್ಗಿಕವಾಗಿ ಕಪ್ಪು ಕಾಡಿಗೆಯನ್ನು ತಯಾರು ಮಾಡಿ ಮಕ್ಕಳಿಗೆ ಹಚ್ಚುತ್ತಾರೆ.

kajal on baby(1)

ಅದೇ ಕಾಡಿಗೆ ಮಕ್ಕಳ ಕಣ್ಣಿಗೆ ಹಾನಿಯುಂಟು ಮಾಡದೇ ಇರಬಹುದು ಎಚ್ಚರ. ಆದರೆ ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಮಕ್ಕಳ ಕಣ್ಣಿನ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯಕರವಲ್ಲ. ಹಾಗಿರುವಾಗ ಕಾಡಿಗೆ ಹಚ್ಚುವುದರಿಂದ ಮಕ್ಕಳ ಕಣ್ಣಿಗೆ ಸಮಸ್ಯೆಗಳು ಎದುರಾಗುತ್ತವೆ. ಮಕ್ಕಳ ಸೂಕ್ಷ್ಮವಾದ ಕಣ್ಣುಗಳಿಗೆ ಏನೆಲ್ಲಾ ಸೋಂಕುಗಳು ಅಟ್ಯಾಕ್​ ಮಾಡುತ್ತೆ ಅಂತ ಮೊದಲು ತಿಳಿದುಕೊಳ್ಳಿ.

publive-image

ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಅಡ್ಡ ಪರಿಣಾಮಗಳೇನು? 

  • ರಾಸಾಯನಿಕಗಳಿಂದ ತುಂಬಿರುವ ಕಾಜಲ್ ಕಣ್ಣಿಗೆ ಹಚ್ಚುವುದರಿಂದ ಸೋಂಕು ತಗುಲಬಹುದು.
  • ಕಣ್ಣಿಗೆ ಕಿರಿಕಿರಿ ಅನ್ನಿಸಿದಾಗ ಮಕ್ಕಳು ಕಣ್ಣನ್ನು ಉಜ್ಜಿಕೊಳ್ಳುತ್ತಿರುತ್ತಾರೆ. ಆಗ ಕಾಡಿಗೆ ಕಣ್ಣಿನ ಸುತ್ತ ಹರಡಬಹುದು. ಜತೆಗೆ ಸಣ್ಣ ಕಣಗಳು ಕಣ್ಣಿನೊಳಗೂ ಸೇರಿಸಿಕೊಳ್ಳುತ್ತವೆ.
  • ಹೀಗೆ ಕಣ್ಣಲ್ಲಿ ಕಾಡಿಗೆ ಕಣಗಳು ಹೋದರೆ ಕಣ್ಣುರಿ, ಕೆಂಪಾಗುವುದು, ನೋವು ಆಗುವುದು ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿರಬಹುದು.
  • ಹೀಗೆ ಕಣ್ಣಿಗೆ ಹಾಡಿಗೆ ಹಚ್ಚುವುದರಿಂದ ಬ್ಯಾಕ್ಟೀರಿಯಾದ ಸೋಂಕು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕೆ ಟ್ರಾಕೋಮಾ ಎಂದು ಕರೆಯಲಾಗಿದೆ. ಈ ಟ್ರಾಕೋಮಾ ಸಾಂಕ್ರಾಮಿಕವಾಗಿದ್ದು, ಸೋಂಕಿತ ಜನರ ಕಣ್ಣುಗಳು, ಕಣ್ಣುರೆಪ್ಪೆಗಳು ಮತ್ತು ಮೂಗು ಅಥವಾ ಗಂಟಲಿನ ಸ್ರವಿಸುವಿಕೆಯ ಸಂಪರ್ಕದ ಮೂಲಕ ಹರಡುತ್ತದೆ.
  • ಒಂದು ಬಾರಿ ಟ್ರಾಕೋಮಾವು ಸೋಂಕು ಹರಡಿದರೆ ಕಣ್ಣುಗಳು ಮತ್ತು ರೆಪ್ಪೆಗಳಲ್ಲಿ ತುರಿಕೆ ಮತ್ತು ಕಿರಿಕಿರಿಯನ್ನು ಉಂಟು ಮಾಡಬಹುದು. ನಂತರ ಊದಿಕೊಂಡ ಕಣ್ಣು ರೆಪ್ಪೆಗಳು ಮತ್ತು ಕಣ್ಣುಗಳಿಂದ ಕೀವು ಬರಿದಾಗುವುದನ್ನು ನೀವು ಗಮನಿಸಬಹುದು. ಇದು ಟ್ರಾಕೋಮಾ ಕುರುಡುತನಕ್ಕೆ ಕಾರಣವಾಗಬಹುದು.
  • ದೊಡ್ಡವರಿಗಿಂತ ವಿಶೇಷವಾಗಿ ಚಿಕ್ಕ ಮಕ್ಕಳು ಈ ಸೋಂಕಿಗೆ ಒಳಗಾಗುತ್ತಾರೆ. ಆದರೆ ರೋಗವು ನಿಧಾನವಾಗಿ ಮುಂದುವರಿಯುತ್ತದೆ ಅಂತ ವೈದ್ಯರು ಹೇಳುತ್ತಾರೆ. ನಿಮ್ಮ ಮಗುವಿನ ಕಣ್ಣುಗಳಲ್ಲಿ ತುರಿಕೆ ಅಥವಾ ಕಿರಿಕಿರಿ ಉಂಟಾದರೆ ಮೊದಲು ವೈದ್ಯರಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ತಿಳಿಸಿ. ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡುವುದು ಗಂಭೀರ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kajal on eyes, health benefits
Advertisment