Advertisment

ಮೋದಿಯವರ ಪಾಕಿಸ್ತಾನಿ ಸಹೋದರಿ ಯಾರು? 30 ವರ್ಷದಿಂದ ರಾಖಿ ಕಟ್ತಿದ್ದಾರೆ.. ಅಣ್ಣ-ತಂಗಿ ಸಂಬಂಧ ಚಿಗುರಿದ್ದೇಗೆ..?

ರಕ್ಷಾ ಬಂಧನ ಸಮೀಪಿಸ್ತಿದ್ದಂತೆಯೇ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸದ ಕಥೆಗಳು ಎಲ್ಲೆಡೆ ಪ್ರತಿಧ್ವನಿಸುತ್ತವೆ. ನಿಮಗೆ ಗೊತ್ತಾ ಪ್ರಧಾನಿ ಮೋದಿಗೆ ಪಾಕಿಸ್ತಾನದ ಒಬ್ಬ ಸಹೋದರಿ ಇದ್ದಾರೆ. ಅವರು ಕಳೆದ 30 ವರ್ಷಗಳಿಂದ ರಾಖಿ ಕಟ್ಟುತ್ತ ಬಂದಿದ್ದಾರೆ.

author-image
Ganesh Kerekuli
raksha bandhan modi
Advertisment

ಪವಿತ್ರ ಹಬ್ಬ ರಕ್ಷಾ ಬಂಧನ (Raksha Bandhan) ಸಮೀಪಿಸ್ತಿದ್ದಂತೆಯೇ ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸದ ಕಥೆಗಳು ಎಲ್ಲೆಡೆ ಪ್ರತಿಧ್ವನಿಸುತ್ತವೆ. ಅಂತಹ ಒಂದು ಕಥೆ ಇದೆ, ಅದು ಗಡಿಗಳನ್ನು ದಾಟಿ ಮಾನವೀಯತೆ ಮತ್ತು ಸಹೋದರತ್ವದ ಉದಾಹರಣೆಯಾಗಿ ನಿಂತಿದೆ! ಹೌದು, ನಿಮಗೆ ಗೊತ್ತಾ ಪ್ರಧಾನಿ ಮೋದಿಗೆ (PM Narendra Modi) ಪಾಕಿಸ್ತಾನದ ಒಬ್ಬ ಸಹೋದರಿ ಇದ್ದಾರೆ. ಅವರು ಕಳೆದ 30 ವರ್ಷಗಳಿಂದ ರಾಖಿ (Rakhi) ಕಟ್ಟುತ್ತ ಬಂದಿದ್ದಾರೆ. 

Advertisment

ಇದನ್ನೂ ಓದಿ: ವರಲಕ್ಷ್ಮೀ ವೃತದಿಂದ ಸಂತೋಷ, ಸಮೃದ್ಧಿ.. ವರಮಹಾಲಕ್ಷ್ಮೀ ಪೂಜೆಗೆ ಮುಹೂರ್ತ ಹೇಗಿದೆ..?

raksha bandhan modi (2)

ಅಂದ್ಹಾಗೆ ಅವರ ಹೆಸರು, ಕಮರ್ ಮೊಹ್ಸಿನ್ ಶೇಖ್ (Qamar Mohsin Sheikh). ಕಳೆದ 30 ವರ್ಷಗಳಿಂದ ರಾಖಿ ಕಟ್ಟುತ್ತ ಬಂದಿರುವ ಅವರು ಈ ಬಾರಿಯೂ ಮೋದಿಗೆ ಸಿಹಿ ನೀಡಿ, ರಾಖಿ ಕಟ್ಟಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ತಾವೇ ಎರಡು ರಾಖಿಗಳನ್ನ ಸಿದ್ಧಮಾಡಿಕೊಂಡಿದ್ದು, ಪ್ರಧಾನಿ ಕಚೇರಿಯ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ. ಈ ವರ್ಷ ಅವರು ಓಂ ಮತ್ತು ಗಣೇಶನ ವಿನ್ಯಾಸಗಳನ್ನು ಹೊಂದಿರುವ ಎರಡು ರಾಖಿಗಳನ್ನು ತಯಾರಿಸಿದ್ದಾರೆ.

ಯಾರು ಈ ಕಮರ್ ಮೊಹ್ಸಿನ್ ಶೇಖ್..?

ಕಮರ್ ಮೊಹ್ಸಿನ್ ಶೇಖ್ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. 1981ರಲ್ಲಿ ಅಹಮದಾಬಾದ್‌ನ ಪ್ರಸಿದ್ಧ ವರ್ಣಚಿತ್ರಕಾರ ಮೊಹ್ಸಿನ್ ಶೇಖ್ ಅವರನ್ನು ವಿವಾಹವಾದ ನಂತರ ಭಾರತಕ್ಕೆ ಬಂದು ನೆಲೆಸಿದ್ದಾರೆ. ಪ್ರಸ್ತುತ ಅವರು ತಮ್ಮ ಪತಿಯೊಂದಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.  ಕಮರ್ ಮತ್ತು ಮೋದಿ ನಡುವಿನ ವಿಶೇಷ ಸಂಬಂಧವು ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಾಮಾನ್ಯ ಕಾರ್ಯಕರ್ತನಾಗಿದ್ದಾಗ ಪ್ರಾರಂಭವಾಗಿದೆ.

Advertisment

ಇದನ್ನೂ ಓದಿ: ಎಲ್ಲೆಲ್ಲೂ ವರಮಹಾಲಕ್ಷ್ಮೀ ಜಪ.. ಸಿನಿಮಾ, ಸೀರಿಯಲ್ ತಾರೆಯರ ಮನೆಯಲ್ಲಿ ಹೆಂಗಿತ್ತು ಸಡಗರ..?

raksha bandhan modi (3)

ಅಣ್ಣ-ತಂಗಿ ಸಂಬಂಧ ಹೇಗೆ ಆರಂಭವಾಯಿತು?

1990 ರಲ್ಲಿ ಅಂದಿನ ಗುಜರಾತ್ ರಾಜ್ಯಪಾಲ ಡಾ.ಸ್ವರೂಪ್ ಸಿಂಗ್ (Dr. Swaroop Singh) ಮೂಲಕ ಮೋದಿಯನ್ನು ಭೇಟಿಯಾದೆ ಎಂದು ಕಮರ್ ಹೇಳುತ್ತಾರೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಭೇಟಿಯಾದರು. ಕಮರ್ ತನ್ನ ಪತಿಯ ಚಿತ್ರಕಲಾ ಪ್ರದರ್ಶನಕ್ಕಾಗಿ ದೆಹಲಿಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಡಾ. ಸ್ವರೂಪ್ ಸಿಂಗ್ ನರೇಂದ್ರ ಮೋದಿಗೆ ಕಮರ್ ಅವರನ್ನು ತಮ್ಮ ಮಗಳೆಂದು ಪರಿಗಣಿಸುವುದಾಗಿ ಹೇಳಿದರು. ಅದಕ್ಕೆ ಮೋದಿ, ಹಾಗಿದ್ದರೆ ಅವರು ನನ್ನ ಸಹೋದರಿ ಆಗುತ್ತಾಳೆ ಎಂದು ಉತ್ತರಿಸಿದ್ದರಂತೆ. ಅಲ್ಲಿಂದ ಈ ವಿಶಿಷ್ಟ ಸಂಬಂಧಕ್ಕೆ ಅಡಿಪಾಯ ಬಿದ್ದಿದೆ. 

ಇದನ್ನೂ ಓದಿ: ಎಲ್ಲೆಲ್ಲೂ ವರಮಹಾಲಕ್ಷ್ಮೀ ಜಪ.. ಸಿನಿಮಾ, ಸೀರಿಯಲ್ ತಾರೆಯರ ಮನೆಯಲ್ಲಿ ಹೆಂಗಿತ್ತು ಸಡಗರ..?

Advertisment


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Modi's 'Pakistani sister raksha bandhan
Advertisment
Advertisment
Advertisment