/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್; ಬುರುಡೆ ಇಟ್ಕೊಂಡು ಸುಪ್ರೀಂಗೆ ಹೋಗಿದ್ದ ಫೋಟೋ ರಿವೀಲ್..!
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಜ್ಯೇಷ್ಠಾ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ
ರಿಯಲ್ ಎಸ್ಟೇಟ್, ಭೂ ವ್ಯವಹಾರ ಮಾಡುವವರಿಗೆ ಈ ದಿನ ಲಾಭವಿದೆ- ಧಾರ್ಮಿಕ - ಆಧ್ಯಾತ್ಮ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಶುಭ
- ಈ ದಿನ ಆರ್ಥಿಕವಾಗಿ ಕೊರತೆ ಇರುವುದಿಲ್ಲ
- ಏಜೆಂಟ್ಸ್ಗಳಿಗೆ ಕಮೀಷನ್ ಮೂಲಕ ಲಾಭವಾಗುವ ಸಾಧ್ಯತೆಗಳಿವೆ
- ಕಳ್ಳತನದ ಆಪಾದನೆ ನಿಮ್ಮ ಮೇಲೆ ಬರುವ ಸಾಧ್ಯತೆಗಳಿವೆ ಎಚ್ಚರ
- ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ
- ರಾಜಕೀಯ ವ್ಯಕ್ತಿಗಳು ಈ ದಿನ ಗೌಪ್ಯವಾದ ಸ್ಥಳದಲ್ಲಿ ಕಳೆಯುವ ಯೋಗವಿದೆ
- ಉತ್ತಮವಾದ ಶಿಸ್ತನ್ನು ಬೆಳೆಸಿಕೊಂಡರೆ ಬೇರೆ ಅವಕಾಶಗಳು ಲಭಿಸುತ್ತದೆ
- ಬೆಟ್ಟದ ಮೇಲಿರುವ ದೇವಿಗೆ ಕಾಲ್ನಡಿಗೆಯಲ್ಲಿ ಹೋಗಿ ಸೇವೆ ಮಾಡಿ
ವೃಷಭ
- ಬರಬೇಕಾದ ಹಣ ಸಕಾಲದಲ್ಲಿ ಕೈ ಸೇರದೆ ತೊಂದರೆಯಾಗಬಹುದು
- ಇವತ್ತಿನ ನಷ್ಟ ಮುಂದೆ ವ್ಯಾವಹಾರಿಕವಾಗಿ ಅನುಕೂಲವಾಗಲಿದೆ
- ಅನಿಲ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟ ಉಂಟಾಗಬಹುದು
- ಆರ್ಥಿಕವಾದ ಮುಗ್ಗಟ್ಟು ತುಂಬಾ ಕಾಡಬಹುದು
- ಇಂದು ಕೆಲಸದಲ್ಲಿ ವ್ಯತ್ಯಯ ಆಗಲಿದೆ
- ಕೆಲಸದ ಬದಲಾವಣೆ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಕೈಬಿಡಿ
- ಈ ದಿನ ಮನಸ್ಸನ್ನು ಸ್ಥಿಮಿತವಾಗಿಟ್ಟುಕೊಳ್ಳಿ
- ಮುಂದಿನ ದಿನಗಳಲ್ಲಿ ಲಾಭದ ಸೂಚನೆಗಳಿರುತ್ತವೆ
- ಮೇಲಾಧಿಕಾರಿಗಳಿಂದ ಸಿಗುವ ಮಾರ್ಗದರ್ಶನದಿಂದ ನಷ್ಟವನ್ನು ಭರಿಸಬಹುದು
- ಶನಿಶಾಂತಿಯನ್ನು ಮಾಡಿಸಿ
ಮಿಥುನ
- ಕಾರ್ಯದೊತ್ತಡ ಬದಿಗಿಟ್ಟು ಈ ದಿನ ಆನಂದವಾಗಿರುತ್ತೀರಿ
- ತಾಯಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
- ಈ ದಿನ ಹಣವನ್ನು ಮಿತವಾಗಿ ಖರ್ಚು ಮಾಡಿ
- ಇಂದು ಅವಿವಾಹಿತರಿಗೆ ಶುಭ ಸುದ್ದಿ
- ಭೂ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ
- ಹಣ ನಿರ್ವಹಣೆಯನ್ನು ನೀವು ಚೆನ್ನಾಗಿ ನಿರ್ವಹಿಸುತ್ತೀರಿ ಶುಭಫಲ
- ಪಶುಸಂಗೋಪನೆ ಮಾಡುವವರಿಗೆ ಒಳ್ಳೆಯ ದಿನ
- ಒಡಹುಟ್ಟಿದವರಿಗೆ ಸಹಾಯವನ್ನು ಮಾಡುವ ಯೋಗ ನಿಮ್ಮದಾಗುತ್ತದೆ
- ಹಳೆಯ ಹೂಡಿಕೆಯ ಬಗ್ಗೆ ಹೆಚ್ಚು ಚಿಂತನೆ ಮಾಡಿದರೆ ಅನುಕೂಲವಾಗುತ್ತದೆ
- ಗಾಯಿತ್ರಿದೇವಿಯನ್ನು ಆರಾಧಿಸಿ
ಕಟಕ
- ಎಲೆಕ್ಟ್ರಿಕಲ್ ಮತ್ತು ವಾಹನ ರಿಪೇರಿ ಮಾಡುವವರಿಗೆ ಧನಲಾಭ
- ಬ್ಯಾಂಕ್, ಫೈನಾನ್ಸ್ ಕೆಲಸ ಮಾಡುವವರಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
- ಹಣದ ಮತ್ತು ವ್ಯಾವಹಾರಿಕ ಲೆಕ್ಕಾಚಾರದಿಂದ ಒದ್ದಾಡಬೇಕಾಗುವ ಪರಿಸ್ಥಿತಿ
- ಇಂದು ಪರೀಕ್ಷಾ ಸ್ಪರ್ಧಿಗಳಿಗೆ ಶುಭದಿನ
- ಇಂದಿನ ಕೆಲಸವನ್ನು ನಾಳೆಗೆ ಮುಂದೂಡಬೇಡಿ
- ದೂರದೂರಿಗೆ ಪ್ರವಾಸ ಹೋಗಲು ಇಂದು ಪ್ಲಾನ್ ಮಾಡುತ್ತೀರಿ
- ಗುರುದತ್ತಾತ್ರೇಯರನ್ನು ಆರಾಧಿಸಿ
ಸಿಂಹ
- ಸರ್ಕಾರಿ ಗುತ್ತಿಗೆ ಕೆಲಸಗಳು ಹೇರಳವಾಗಿ ಬರಬಹುದು
- ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗಬಹುದು
- ಮಾನಸಿಕವಾಗಿ, ದೈಹಿಕವಾಗಿ ಹೆಚ್ಚು ಸಂತೋಷದಿಂದಿರುತ್ತೀರಿ
- ನೌಕರಿಯಲ್ಲಿ ಉತ್ತಮ ಪದವಿಯನ್ನು ಪಡೆಯುತ್ತೀರಿ
- ಅಧಿಕಾರ, ಪ್ರೋತ್ಸಾಹ ದೊರಕುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಉಂಟಾಗುವ ದಿನ
- ಬರಹಗಾರರಿಗೆ, ಸಂಶೋಧಕರಿಗೆ ಸಿಹಿ ಸುದ್ದಿ ಸಿಗುವ ದಿನ
- ಉಪಕರಣಗಳು ನಷ್ಟವಾಗುವುದರಿಂದ ನಷ್ಟವನ್ನು ತುಂಬ ಬೇಕಾಗಬಹುದು
- ಚಿತ್ರೀಕರಣ ಮಾಡುವ ವ್ಯಕ್ತಿಗಳಿಗೆ ಲಾಭವಿದೆ
- ಕುಲದೇವತಾ ಹೋಮವನ್ನು ಮಾಡಿಸಿ
ಕನ್ಯಾ
- ನೌಕರರಿಗೆ ಶುಭಫಲಗಳು ಹೆಚ್ಚಾಗಿರುತ್ತದೆ
- ಆತ್ಮೀಯರಿಂದ ಸುಖ-ಸಂತೋಷ ಸಿಗುವ ದಿನ
- ಇಂದು ಕುಟುಂಬದಲ್ಲಿ ಪ್ರಗತಿ ಕಾಣುತ್ತೀರಿ
- ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ಚಾಲಕರಿಗೆ ವಿಶೇಷವಾದ ಲಾಭವಿದೆ
- ಹಿನ್ನಡೆಯಾದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಮಗ್ನರಾದರೆ ಒಳಿತು
- ವಿಶೇಷ ವ್ಯಕ್ತಿಯ ಸಹಕಾರ ದೊರಕುವ ದಿವಸ
- ಈ ರಾಶಿಯ ವಿದ್ಯಾರ್ಥಿಗಳಿಗೆ ಅಶುಭ
- ನೌಕರಿಯಲ್ಲಿರುವ ಸ್ತ್ರೀಯರಿಗೆ ವಿಶೇಷವಾದ ಸ್ಥಾನಮಾನಗಳು, ಲಾಭಗಳು ದೊರೆಯಲಿದೆ
- ಲಲಿತ ಪರಮೇಶ್ವರಿಯನ್ನು ಪ್ರಾರ್ಥಿಸಿ
ತುಲಾ
- ಹೊಸ ನಿಯಮಗಳನ್ನು ಅನ್ವಯಿಸದೆ ವ್ಯಾಪಾರ ಮಾಡುತ್ತಿದ್ದರೆ ದಂಡ ಕಟ್ಟಬೇಕಾಗಬಹುದು
- ನಿಮ್ಮ ಉದ್ಯೋಗ ಬದಲಾವಣೆಯ ವಿಚಾರವನ್ನು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ
- ಹಳೆಯ ನಿಯಮಗಳಿಗೆ ಅನುಸಾರವಾಗಿ ನಿಮ್ಮ ವ್ಯಾಪಾರದಲ್ಲಿ ಮುಂದುವರೆಯಬಹುದು
- ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ
- ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಉಂಟಾಗಬಹುದು
- ಲೇವಾದೇವಿ ವ್ಯವಹಾರ ಮಾಡುವವರಿಗೆ ವಿಶೇಷ ಲಾಭವಿದೆ
- ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಿ
- ಚಂಡಿಕಾ ಪಾರಾಯಣ ಮಾಡಿಸಿ
ವೃಶ್ಚಿಕ
- ಸಾಮಾಜಿಕ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ಸ್ಥಾನ ಸಿಗಲಿದೆ
- ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
- ಸಾಮಾಜಿಕವಾಗಿ ಪ್ರೋತ್ಸಾಹ ಸಿಗಲಿದೆ
- ಇಂದು ಖರ್ಚಿಗೆ ಹೆಚ್ಚಿನ ಕಡಿವಾಣ ಹಾಕಬೇಕು
- ವಿರೋಧಿಗಳಿಂದ ಕೆಲವು ಕೆಲಸಕ್ಕೆ ಅಡ್ಡಿಯಾಗಬಹುದು
- ಯಾವುದೇ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ
- ತೆಂಗು ಬೆಳೆಗಾರರಿಗೆ, ಕಾರ್ಮಿಕರಿಗೆ ಲಾಭವಾಗುವ ದಿನ
- ನಿರೀಕ್ಷಿತ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿದೆ
- ಬಹಳ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ
- ಕಾಶಿ ಬಿಂದುಮಾಧವನನ್ನು ಪೂಜಿಸಿ
ಧನಸ್ಸು
ಸರ್ಕಾರಿ ನೌಕರರಿಗೆ ಒತ್ತಡ ಹೆಚ್ಚಾಗುವ ದಿನ- ಈ ದಿನ ಹಿತಶತ್ರುಗಳ ಕಾಟ ಹೆಚ್ಚಾಗಬಹುದು
- ಈ ದಿನ ಧಾರ್ಮಿಕ ವೃತ್ತಿಯವರಿಗೆ , ಪುರೋಹಿತರಿಗೆ,ಅರ್ಚಕರಿಗೆ ಧನಲಾಭ
- ಇಂದು ಮನೆ ಬದಲಾಯಿಸುವವರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ
- ಸಾಹಿತ್ಯ - ಸಂಗೀತ ಕ್ಷೇತ್ರದಲ್ಲಿರುವವರಿಗೆ ವಿಶೇಷ ಪುರಸ್ಕಾರ,ಗೌರವ ಸಿಗುತ್ತದೆ
- ತುಂಬಾ ಶ್ರಮ ಪಡಬೇಕಾದ ದಿನವಾಗಿರುತ್ತದೆ
- ಸ್ವಂತ ವ್ಯವಹಾರ ಮಾಡುವವರಿಗೆ ತುಂಬಾ ಅನುಕೂಲವಾಗುವ ದಿನ
- ಸುದರ್ಶನ ಹೋಮ ಮಾಡಿಸಿ
ಮಕರ
- ಜವಾಬ್ದಾರಿಗಳನ್ನು ತುಂಬಾ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ
- ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ
- ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಶುಭಫಲ
- ತೈಲ ವ್ಯಾಪಾರಿಗಳಿಗೆ ಶುಭಫಲ, ಧನಲಾಭವೂ ಇದೆ
- ಚಲನಚಿತ್ರ ನಿರ್ಮಾಪಕರಿಗೆ ಲಾಭವಿದೆ ಅಷ್ಟೇ ಅವಮಾನವೂ ಅಗಬಹುದು ಜಾಗ್ರತೆವಹಿಸಿ
- ಈ ರಾಶಿಯವರು ಮುದ್ರಣಾ ಕ್ಷೇತ್ರದಲ್ಲಿದ್ದರೆ ನಷ್ಟವನ್ನು ಅನುಭವಿಸುವ ದಿನವಾಗಿದೆ
- ಕಟ್ಟಡ ಮಾಲೀಕರು,ಕಾರ್ಮಿಕರು ಎಚ್ಚರಿಕೆಯಿಂದಿರಬೇಕು
- ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಬೆಂಕಿಯ ಅವಘಡ ಸಂಭವಿಸಬಹುದು ಜಾಗ್ರತೆವಹಿಸಿ
- ಅಗ್ನಿದುರ್ಗೆಯನ್ನು ಆರಾಧಿಸಿ
ಕುಂಭ
- ಜನರ ಮಧ್ಯದಲ್ಲಿ ಸಮಾಜಸೇವೆ ಮಾಡುವ ಯೋಗವು ಒದಗಿಬರುವ ದಿನ
- ಇಂದು ಅನಿರೀಕ್ಷಿತ ಧನಲಾಭ ಉಂಟಾಗಬಹುದು
- ನಾಯಕತ್ವದ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿವೆ
- ಕಾರ್ಮಿಕ ವರ್ಗದವರಿಗೆ ಮೋಸವಾಗುವ ಸಾಧ್ಯತೆಗಳಿವೆ ಎಚ್ಚರಿಕೆ
- ಕಲಾವಿದರಿಗೆ ಉತ್ತಮ ಪುರಸ್ಕಾರ ಸಿಗುವ ದಿನ
- ವಿವಾಹದ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಚ್ಚರಿಕೆ
- ವೈಯಕ್ತಿಕ ವಿಚಾರಗಳನ್ನು ಸ್ನೇಹಿತರಲ್ಲಿ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗಬಹುದು
- ಕಠಿಣ ಶ್ರಮವನ್ನು ಪಡಬೇಕಾಗುವಂತಹ ದಿನ
- ಇಂದು ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರ
- ರೇಣುಕಾ ದೇವಿಯನ್ನು ಆರಾಧಿಸಿ
ಮೀನಾ
- ಅನುಮಾನಾಸ್ಪದ ಕೆಲಸಗಳನ್ನು ಮಾಡಬೇಡಿ ಶೋಭೆ ತರೋಲ್ಲ
- ಈ ದಿನ ಮಾತು ಮಿತವಾಗಿದ್ದರೆ ತುಂಬಾ ಒಳ್ಳೆಯದು
- ಕೃಷಿ ಕಾರ್ಮಿಕರಿಗೆ ಹೆಚ್ಚು ಆದಾಯ ಸಿಗುವ ದಿನವಾಗಿದೆ
- ಮನೋರಂಜನೆಗಾಗಿ ಹಣವ್ಯಯ ಮಾಡುವ ಸಾಧ್ಯತೆ
- ಸಹೋದರ-ಸಹೋದರಿ ವರ್ಗದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಅನರ್ಥವಾಗುವ ಸಾಧ್ಯತೆ
- ಇಂದು ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಕಾಡಬಹುದು
- ನೀವು ಮಾಡಬೇಕಾದ ಕೆಲಸಗಳನ್ನು ರಹಸ್ಯವಾಗಿಡಿ
- ಕೂಲಿ ಕಾರ್ಮಿಕರಿಗೆ ಹೆಚ್ಚು ಸಂಬಳ ಸಿಗುವ ದಿನ
- ಮಧುಮತಿ ದೇವಿಯನ್ನು ಆರಾಧಿಸಿ
ಇದನ್ನೂ ಓದಿ: ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೂ ಹೀಗೆಯೇ ಇರಲಿ -ವೀರೇಂದ್ರ ಹೆಗ್ಗಡೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ