/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಈ ಕಂದನ ಪಾಲಿಗೆ ರಕ್ಕಸನಾದ ಪ್ರಿನ್ಸಿಪಾಲ್.. ಬೆಂಗಳೂರಲ್ಲಿ ರಕ್ಕಸೀ ಕೃತ್ಯ..!
ಮೇಷ
- ನಿಮ್ಮ ಸೇವೆ ಸಾಮಾಜಿಕ ಸಹಾಯಕ್ಕಾಗಿ ಜನ ಮನ್ನಣೆ ಸಿಗುವ ದಿನ
- ಬೆಲೆ ಬಾಳುವ ವಸ್ತು ಖರೀದಿ ಮಾಡುವ ವಿಚಾರದಲ್ಲಿ ಚರ್ಚೆ ಸಾಧ್ಯತೆ
- ನಿಮ್ಮ ಬಗ್ಗೆಯೇ ಹೆಚ್ಚು ಗಮನ ಕೊಡಬೇಕಾದ ದಿನ ಭದ್ರತೆ ಕೂಡ ಇರಲಿ
- ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ಅವಕಾಶ ಇರಬಹುದು
- ಯಶಸ್ಸಿನ್ನ ಬಗ್ಗೆ ನಿರ್ದಿಷ್ಟವಾದ ಗುರಿಯಿರಲಿ
- ಪ್ರೀತಿ-ಪ್ರೇಮ ವಿಚಾರದಲ್ಲಿ ಗೊಂದಲ ಬೇಸರ ಸಾಧ್ಯತೆ
- ಅದೃಷ್ಟ ಚೆನ್ನಾಗಿದೆ ಅನ್ನುವಷ್ಟರಲ್ಲಿ ದಿನ ಕಳೆದು ಹೋಗಬಹುದು
- ಕುಲದೇವತಾರಾಧನೆ ಮಾಡಿ
ವೃಷಭ
- ಇಂದು ತಾಳ್ಮೆಯಿಂದ ಆತ್ಮಾವಲೋಕನ ಮಾಡಿಕೊಳ್ಳಿ
- ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
- ಹಣದ ವಿಚಾರದಲ್ಲಿ ನಿರಾಸೆ ಸಾಧ್ಯತೆಯಿದೆ
- ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥ ಸಾಧ್ಯತೆ
- ವಾದ-ವಿವಾದಗಳಲ್ಲಿ ತಲೆ ಹಾಕದೆ ಇದ್ದರೆ ಒಳ್ಳೆಯದು
- ಆತಂಕ ಬೇಡ ಸಮಾಧಾನದಿಂದ ಎಲ್ಲ ಕೆಲಸಗಳನ್ನು ನಿಭಾಯಿಸಿ
- ಈಶ್ವರಾಧನೆ ಮಾಡಿ
ಮಿಥುನ
- ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ
- ಕುಟುಂಬದಲ್ಲಿ ನೆಮ್ಮದಿಯ ಶಾಂತಿಯ ವಾತಾವರಣ ಕಾಪಾಡಿಕೊಳ್ಳಿ
- ಜನರು ನಿಮ್ಮ ಸಲಹೆಯನ್ನು ಸ್ವೀಕರಿಸಬಹುದು ಅಥವಾ ಬಿಡಬಹುದು
- ಇಂದು ಸಂತೋಷದ ದಿನ ನಿಮ್ಮದಾಗಲಿದೆ
- ಕಠಿಣ ಪರಿಶ್ರಮಕ್ಕೆ ತಕ್ಕ ಫಲವಿದೆ
- ಕೋಪದಿಂದ ಗಾಯವಾಗುವ ಸಾಧ್ಯತೆಯಿದೆ ಎಚ್ಚರಿಕೆ
- ತುಳಸಿಯಿಂದ ವಿಷ್ಣುವಿನ ಅರ್ಚನೆ ಮಾಡಿ
ಕಟಕ
- ಹಳೆಯ ವಿಚಾರಗಳನ್ನು ದೂರಮಾಡಿ ಬೇಸರ ಕಡಿಮೆ ಮಾಡಿಕೊಳ್ಳಿ
- ಅನುಕೂಲದ ಸಮಯವನ್ನು ವಿನಿಯೋಗಿಸಿಕೊಳ್ಳಿ
- ಹೊಸ ಹೂಡಿಕೆಗೆ ಇಂದು ಅನುಕೂಲ
- ಯಾವುದೇ ಬದಲಾವಣೆಯ ಬಗ್ಗೆ ಚಿಂತೆ ಬೇಡ
- ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮನ್ನಣೆ ಸಿಗಲಿದೆ
- ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮಾಡಿಸಿ
ಸಿಂಹ
- ಧಾರ್ಮಿಕ ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ
- ಸಮಾರಂಭಗಳಿಗೆ ಹಾಜರಾಗಬಹುದು
- ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಬರಬಹುದು
- ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯವಾಗಬಹುದು
- ನಿಮ್ಮ ಕೆಲಸಕ್ಕೆ ಸಾಧನೆಗೆ ಪ್ರಶಂಸೆಯಿದೆ
- ಆರ್ಥಿಕ ಬಿಕ್ಕಟ್ಟು ಕಾಡಬಹುದು
- ಕುಬೇರ ಲಕ್ಷ್ಮೀಯನ್ನು ಪ್ರಾರ್ಥಿಸಿ
ಕನ್ಯಾ
- ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ
- ತಾಳ್ಮೆ ತುಂಬಾ ಮುಖ್ಯವಾದದ್ದು
- ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿ ಎದುರಿಸಬೇಕಾಗಬಹುದು
- ಜವಾಬ್ದಾರಿಗಳಿಂದ ಹೊರಬರಬೇಕಾಗಲಿದೆ
- ಜನ ಸಂದಣಿಯಲ್ಲಿ ನಿಮಗೆ ತೊಂದರೆ ಕಾಣಬಹುದು
- ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
- ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ
ತುಲಾ
- ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮ ವಹಿಸಬೇಕು
- ಪ್ರೇಮಿಗಳಿಗೆ ಶುಭ ಉತ್ತಮ ನಿರ್ಧಾರ ಮಾಡ್ತೀರಿ..
- ರಾಜಕೀಯ ಪ್ರಭಾವ ಕೆಲಸ ಮಾಡಬಹುದು
- ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆ ವಹಿಸಿ
- ಮಾತಿಗೆ ಬೆಲೆ ಸಿಗುವುದು ಕಷ್ಟ ಸಾಧ್ಯ
- ಆರೋಗ್ಯದ ಬಗ್ಗೆ ಸುಧಾರಣೆ ಇದೆ
- ವಿಕಲ ಚೇತನರಿಗೆ ಸಹಾಯ ಮಾಡಿ
ವೃಶ್ಚಿಕ
- ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆಯಾಗಬಹುದು
- ವ್ಯವಹಾರದಲ್ಲಿ ಉತ್ತಮ ಲಾಭ ಶುಭವೂ ಇದೆ
- ಯಾರನ್ನಾದರು ಕ್ಷಮಿಸುವ ಪ್ರಸಂಗವಿದ್ದರೆ ಕ್ಷಮಿಸಿಬಿಡಿ
- ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
- ಏಕಾಗ್ರತೆಯು ಉತ್ತಮ ಫಲಿತಾಂಶ ನೀಡಬಹುದು
- ಜೀವನ ಶೈಲಿಯಲ್ಲಿ ಸುಧಾರಣೆ ಕಾಣುವ ದಿನವಾಗಿದೆ
- ವಿದ್ಯಾ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
ಧನುಸ್
- ಬೆನ್ನು ನೋವಿನ ಬಗ್ಗೆ ಕಾಳಜಿ ವಹಿಸಿ
- ಮನೆಯ ಜವಾಬ್ದಾರಿಯ ಬಗ್ಗೆ ಪೂರ್ಣ ಜವಾಬ್ದಾರಿ ವಹಿಸಿ
- ಏನೋ ಬದಲಾವಣೆಯ ಆಲೋಚನೆ ಬರುತ್ತದೆ ಆದರೆ ಸದ್ಯಕ್ಕಿಲ್ಲ
- ಮದುವೆ ವಿಚಾರದಲ್ಲಿ ತಲೆ ಕೆಡಸಿಕೊಳ್ಳಬಹುದು ಉಪಯೋಗವಿಲ್ಲ
- ಆನಂದವಾಗಿರುತ್ತೀರಿ ಮನಸ್ಸಿನಲ್ಲಿ ಕಳವಳ ಬೇಡ
- ಆಹಾರದ ಬಗ್ಗೆ ಗಮನಿಸಿ ಸಾಯಂಕಾಲ ಚರ್ಚೆಯಿರಬಹುದು
- ವೆಂಕಟರಮಣನನ್ನು ಆರಾಧಿಸಿ
ಮಕರ
- ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿದೆ
- ನಿಮ್ಮ ಪ್ರಗತಿಯ ಬಗ್ಗೆ ಭಯವಿದೆ
- ಒಳ್ಳೆಯ ಸ್ನೇಹಿತರ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
- ವೃತ್ತಿ ಉದ್ಯೋಗದ ಒತ್ತಡ ತೊಂದರೆಗೆ ಕಾರಣವಾಗಬಹುದು
- ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ
- ಶಿವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ
ಕುಂಭ
- ಮಕ್ಕಳ ಪ್ರಗತಿ ವಿದ್ಯಾಭ್ಯಾಸದಿಂದ ಸಂತೋಷ
- ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಎಂಬ ದಿನ
- ವ್ಯಾಪಾರ ವ್ಯವಹಾರದ ಪ್ರಗತಿ ಆರ್ಥಿಕ ಲಾಭ
- ಸಂಬಂಧಿಕರ ಆಗಮನ ಖುಷಿ ಸಿಗಲಿದೆ
- ಬರಬೇಕಾದ ಬಾಕಿ ಹಣ ಬರಲಿದೆ
- ಆರೋಗ್ಯದಲ್ಲಿ ಸಮಾಧಾನ ಸಿಗಲಿದೆ
- ಸ್ನೇಹಿತರಿಂದ ಸಿಹಿ ಸುದ್ದಿ ಕೇಳುತ್ತೀರಿ
- ಮಹಾಲಕ್ಷ್ಮೀಯನ್ನು ಮಲ್ಲಿಗೆ ಹೂವಿನಿಂದ ಅರ್ಚಿಸಿ
ಮೀನ
- ಕುಟುಂಬದಲ್ಲಿ ಶುಭಕಾರ್ಯದ ಚಿಂತನೆ ಇರಬಹುದು
- ಮಿತ್ರರ ಭೇಟಿ- ವಿರೋಧಿಗಳ ಬಗ್ಗೆ ಚರ್ಚೆ
- ಮೂಲ ಉದ್ದೇಶ ಮರೆತು ಕಾರ್ಯ ಪ್ರವೃತ್ತಿರಾಗುತ್ತೀರಿ
- ಸಮಯಕ್ಕೆ ಆದ್ಯತೆ ನೀಡಿ ಧನಾತ್ಮಕ ಫಲಿತಾಂಶ ನಿಮ್ಮದಾಗುತ್ತದೆ
- ಮಾನಸಿಕ ನೆಮ್ಮದಿ ಕಡಿಮೆಯಾಗಬಹುದು
- ಕೋಪ- ಆತಂಕಗಳು ಮನೆಮಾಡಿರುವ ದಿನ
- ರಾಜರಾಜೇಶ್ವರಿಯನ್ನು ಪೂಜಿಸಿ
ಇದನ್ನೂ ಓದಿ:ಸೂರಜ್​ ಮೈಮಾಟಕ್ಕೆ ಕಳೆದುಹೋದ ಹೆಣ್ಣೈಕ್ಳು.. ನಾಚಿ ನೀರಾದ ವಿಡಿಯೋ ಇಲ್ಲಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ