ಮದುವೆ ಕನಸು ಕಾಣ್ತಿರೋರಿಗೆ ಶುಭ ಸುದ್ದಿ.. ಈ ದಿನ ಮಿಸ್​ ಮಾಡಬೇಡಿ..

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಕೃಷ್ಣ  ಪಕ್ಷ, ಪಂಚಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ. 

ಇದನ್ನೂ ಓದಿ:ಹನಿಮೂನ್​ಗೆ ಹೋದ ಹೆಂಡತಿಗೆ ಕಾದಿತ್ತು ಶಾಕ್.. ಮಧುಚಂದ್ರದಲ್ಲಿ ಗಂಡಂದಿರು ನಾಪತ್ತೆ! ಗಂಡ ಮಾಡಿದ್ದೇನು ಗೊತ್ತಾ?

ಮೇಷ 

  • ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುವ ದಿನ
  • ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
  • ನಿಮ್ಮ ಮಹತ್ತರವಾದ ಆಲೋಚನೆಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
  • ಜನರು ನಿಮ್ಮ ವ್ಯವಹಾರವನ್ನು ಗೇಲಿ ಮಾಡಬಹುದು
  • ಆರೋಗ್ಯವನ್ನು ತಾತ್ಸಾರ ಮಾಡಬೇಡಿ
  • ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
  • ಪ್ರೇಮದ ವಿಷಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ
  • ಮುತ್ತುರಾಯ ಸ್ವಾಮಿಯನ್ನು ಪ್ರಾರ್ಥಿಸಿ

ವೃಷಭ

  • ಸಂಬಂಧಿಕರ ಭೇಟಿ ಮಾಡಿ ವಿವಾಹ ವಿಚಾರ ಪ್ರಸ್ತಾಪ ಮಾಡಬಹುದು
  • ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
  • ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
  • ಕಬ್ಬಿಣ ವ್ಯಾಪಾರಿಗಳಿಗೆ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಶುಭವಿದೆ
  • ಕಣ್ಣಿನ ತೊಂದರೆಯಾಗಬಹುದು ಜಾಗ್ರತೆ ವಹಿಸಿ
  • ದೇವಿಯ ಆರಾಧನೆ ಮಾಡಿ

ಮಿಥುನ

  • ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
  • ಹಿರಿಯರ ಅನಾರೋಗ್ಯ ನಿಮ್ಮನ್ನು ಕಾಡಲಿದೆ
  • ಹೆಚ್ಚು ಪರಿಶ್ರಮ ಪಡುತ್ತೀರಿ ಅದರಿಂದ ಶುಭಫಲವಾಗುತ್ತದೆ
  • ಸಾಯಂಕಾಲದ ವೇಳೆ ಮನೆಯಲ್ಲಿ ಅಶಾಂತಿ ವಾತಾವರಣ ಇರಲಿದೆ
  • ನೀವು ಮಾಡಿದ ಕೆಲಸ ನಿಮಗೆ ತೃಪ್ತಿಯಾಗುವುದಿಲ್ಲ
  • ಮನಸ್ಸಿನಲ್ಲಿ  ಹಲವಾರು ಗೊಂದಲಗಳಿರುತ್ತವೆ
  • ಕುಲದೇವತಾ ಸ್ಮರಣೆ ಮಾಡಿ

ಕಟಕ

  • ಹೊಸ ಮನೆ ಖರೀದಿ ಮಾಡುವುದರಿಂದ ಮನೆಯಲ್ಲಿ ಸಂತಸದ ವಾತಾವರಣ
  • ಮನೆಯಲ್ಲಿ ಜಟಿಲ ಸಮಸ್ಯೆಗಳಿದ್ದರು ನೀವು ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ
  • ಮನೆಯವರು ನಿಮಗೆ ಏನೇ ಹೇಳಿದ್ರೂ ನಿಮ್ಮ ತಲೆಗೆ ಹೋಗುವುದಿಲ್ಲ
  • ಆದರೆ ನೀವು ನಿಮ್ಮದೆ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
  • ಮಾಂತ್ರಿಕ ವಿಚಾರಗಳಿಂದ ದೂರ ಉಳಿಯಬೇಕು
  • ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗಿರುತ್ತದೆ
  • ಆಸೆಗೆ ಕಟ್ಟು ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಗಬಹುದು
  • ರಕ್ಷಾ ಸುದರ್ಶನನನ್ನು ಪ್ರಾರ್ಥಿಸಿ

ಸಿಂಹ 

  • ಜೀವನದಲ್ಲಿ ಜಿಗುಪ್ಸೆ ಅಥವಾ ವೈರಾಗ್ಯ ಕಾಡಲು ಆರಂಭವಾಗಬಹುದು
  • ಯಾವುದೇ ಅಪೇಕ್ಷೆಯಿಲ್ಲದ ಸಹಾಯ ಮಾಡುವ ಸ್ವಭಾವ ನಿಮ್ಮದಾಗಬೇಕು
  • ಅಂಗಡಿಗಳಲ್ಲಿ ಬೆಂಕಿ ಅವಘಡ ಸಂಭವಿಸಬಹುದು
  • ಜಗತ್ತಿನ ಒಳಿತಿಗೆ ಯಾವುದು ಬೇಕು ಬೇಡದ ಬಗ್ಗೆ ಚರ್ಚಿಸುತ್ತೀರಿ
  • ಪುಸ್ತಕದ ಪ್ರಭಾವ ನಿಮ್ಮನ್ನು ಪೂರ್ಣವಾಗಿ ಬೀರಲಿದೆ
  • ಪುಸ್ತಕ ಪ್ರೇಮಿಗಳಿಗೆ ಇಂದು ಶುಭ ದಿನ
  • ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥಿಸಿ

ಕನ್ಯಾ

  • ಪಿತ್ರಾರ್ಜಿತ ಆಸ್ತಿ ಇಂದು ನಿಮ್ಮ ಕೈ ಸೇರಲಿದೆ
  • ಮಕ್ಕಳ ವಿಚಾರದಲ್ಲಿ ತಾತ್ಸಾರ ಬೇಡ
  • ನೆರೆಹೊರೆಯವರು ನಿಮಗೆ ಮೋಸ ಮಾಡಬಹುದು
  • ಆಕಸ್ಮಿಕವಾಗಿ ಕಾಲಿಗೆ ಪೆಟ್ಟು ಬೀಳಬಹುದು
  • ಎರಡನೇ ಮದುವೆಯಾದವರಲ್ಲಿ ಅನುಮಾನ ಕಾಡಬಹುದು
  • ಈ ದಿನ ನವವಿವಾಹಿತರಿಗೆ ಶುಭದಿನ
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ

ತುಲಾ 

  • ಪದವೀಧರ ವಿದ್ಯಾರ್ಥಿಗಳಿಗೆ ಓದಲು ಬರೆಯಲು ಸಮಯ ಇರುವುದಿಲ್ಲ
  • ಮಾನಸಿಕವಾಗಿ ಭಯ ಹೆಚ್ಚಾಗುವ ಸಂದರ್ಭ
  • ಕೆಟ್ಟ ಶಕುನಗಳು ನಿಮ್ಮ ಧೈರ್ಯವನ್ನು ಕಡಿಮೆ ಮಾಡುತ್ತದೆ
  • ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇದ್ದಾಗ ನಿಮ್ಮ ಆಲೋಚನೆಗಳು ಬೇರೆ ಇರಲಿದೆ
  • ಇಡೀ ಕುಟುಂಬ ಮತ್ತು ಭವಿಷ್ಯದ ಕೆಲವು ಅಂಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
  • ನಿಮ್ಮ ಆಲೋಚನೆಯೇ ಬೇರೆ, ಕಾರ್ಯಕ್ಷೇತ್ರದಲ್ಲಿ ನಡೆಯೋದೆ ಬೇರೆ ಆಗಿರುತ್ತದೆ
  • ಆರ್ಥಿಕ ಮತ್ತು ಹಣಕಾಸಿನ ವಿಚಾರದಿಂದ ಈ ದಿನ ಚೆನ್ನಾಗಿರುವುದಿಲ್ಲ
  • ನೀಲಿ ಹೂವಿನಿಂದ ಶನೇಶ್ವರನ ಪೂಜಿಸಿ

ವೃಶ್ಚಿಕ

  • ನ್ಯಾಯಾಲಯದಲ್ಲಿದ ಕೇಸ್​ಗಳು ಇತ್ಯರ್ಥವಾಗದೆ ಸಮಸ್ಯೆ ಹೆಚ್ಚಾಗಬಹುದು
  • ತಮ್ಮ ಶಕ್ತಿ, ಸಾಮರ್ಥ್ಯ, ಹಣವನ್ನು ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ
  • ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
  • ಹಾವಿನಿಂದ ತೊಂದರೆಯಾಗಬಹುದು ಜಾಗ್ರತೆ ವಹಿಸಿ
  • ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯವಿರುತ್ತದೆ
  • ಆಧುನಿಕ ತಂತ್ರಜ್ಞಾನದಲ್ಲಿ ಮೊರೆ ಹೋಗುತ್ತೀರಿ
  • ಅಷ್ಟಕುಲ ನಾಗೇಂದ್ರನ ಸ್ಮರಿಸಿ

ಧನುಸ್

  • ಮನಸ್ಸು, ಶರೀರದ ಮೇಲೆ ಪ್ರಭಾವ ಬೀರುವ ಯಾವುದೇ ಆಲೋಚನೆ ಮಾಡಬೇಡಿ 
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ದಿನ
  • ಸಾಯಂಕಾಲ ಸುಖವಾದ ಭೋಜನಕ್ಕೆ ಅವಕಾಶವಿದೆ
  • ಮಾತೆಯರು ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ
  • ಸಗಟು ವ್ಯಾಪಾರಿಗಳಿಗೆ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಯಿದೆ
  • ನರಸಿಂಹನನ್ನು ಆರಾಧಿಸಿ

ಮಕರ 

  • ನೀವು ತೆಗೆದುಕೊಳ್ಳುವ ನಿರ್ಧಾರ, ನಿಮ್ಮ ನಡವಳಿಕೆ ತೊಂದರೆಯನ್ನುಂಟು ಮಾಡಬಹುದು
  • ಸುಳ್ಳು ಹೇಳಬೇಡಿ, ಸತ್ಯವನ್ನೇ ಹೇಳಿ ಜಯಶೀಲರಾಗಿ
  • ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿಸದ ಕಾರಣ ತೊಂದರೆಯಾಗಬಹುದು
  • ನಿಮ್ಮ ಕೆಟ್ಟ ನಡವಳಿಕೆಯಿಂದ ನೀವು ಪೊಲೀಸರ ಅತಿಥಿಯಾಗಬಹುದು
  • ಈ ದಿನ ಪ್ರೇಮಿಗಳಿಗೆ ಅಪಘಾತ ಆಗುವ ಸಾಧ್ಯತೆ ಎಚ್ಚರವಹಿಸಿ
  • ಈ ರಾಶಿಯವರಿಗೆ ಈ ದಿನ ಶುಭವಿಲ್ಲ
  • ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ಅರ್ಪಣೆ ಮಾಡಿ

ಕುಂಭ 

  • ನಿಮ್ಮ ಸ್ನೇಹಿತರ ಜೊತೆ ಜಗಳ ಆಗುವ ಸಾಧ್ಯತೆ
  • ಏಕಾಗ್ರತೆಯಿಂದ ಮಾತ್ರ ಜಯಶೀಲರಾಗುತ್ತೀರಿ
  • ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಅಥವಾ ಮೋಸ ಆಗುವ ಸಾಧ್ಯತೆಯಿದೆ
  • ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಅನಗತ್ಯ ಹಣ ಖರ್ಚಾಗುವ ಸಾಧ್ಯತೆಯಿದೆ
  • ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
  • ಕಾಲು ನೋವಿನಿಂದ ಬಳಲುತ್ತಿರುವವರಿಗೆ ಈ ದಿನ ಪರಿಹಾರ ಸಿಗಬಹುದು
  • ನಿಮ್ಮ ಆತುರದ ನಿರ್ಧಾರಗಳಿಂದ ತುಂಬಾ ನಷ್ಟವನ್ನು ಹೊಂದುವ ಸಾಧ್ಯತೆಯಿದೆ
  • ನವಗ್ರಹರ ಸ್ತೋತ್ರ ಪಠಿಸಿ

ಮೀನಾ 

  • ಇಂದು ಮದುವೆಯ ವಿಚಾರ ಪ್ರಸ್ತಾಪ ಆಗಲಿದೆ
  • ವಿದ್ಯಾರ್ಥಿಗಳು ಮತ್ತು ಮಕ್ಕಳು ತುಂಬಾ ತಾಳ್ಮೆಯಿಂದ ವರ್ತಿಸಬೇಕಾದ ದಿನ
  • ನಿಮ್ಮ ಮನಸ್ಸಿಗೆ ಮಾನಸಿಕವಾಗಿ ನೋವುಂಟಾಗಬಹುದು
  • ರಸ್ತೆಬದಿ ವ್ಯಾಪಾರ ಮಾಡುವವರಿಗೆ ಲಾಭದ ದಿನ
  • ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ  ಶುಭ ದಿನ
  • ಸರ್ಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ
  • ಸ್ವಲ್ಪ ವಿರಾಮ ಪಡೆಯುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ
  • ಈಶ್ವರನನ್ನು ಆರಾಧನೆ ಮಾಡಿ

ಇದನ್ನೂ ಓದಿ:ಸ್ನೇಹಿತರ ಜೊತೆಯಲ್ಲಿದ್ದಾಗ ಸುಂದರವಾಗಿ ಕಾಣಬೇಕೆ.. ಹಾಗಾದ್ರೆ ನೀವು ಹೀಗೆ ಮಾಡಲೇಬೇಕು..!


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment