newsfirstkannada.com

ಮಹಾರಾಷ್ಟ್ರದಲ್ಲಿ GAME ON; ಉದ್ಧವ್ ಠಾಕ್ರೆ ಹಿಡಿತದಲ್ಲಿ CM ಏಕನಾಥ್ ಸಿಂಧೆ ಬಣದ ಶಿವಸೇನೆ ಸಂಸದರು..!

Share :

Published June 5, 2024 at 11:31am

Update June 5, 2024 at 12:31pm

    ಲೋಕಸಭೆ ಚುನಾವಣೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಕ್ಷಿಪ್ರ ಬೆಳವಣಿಗೆ

    ಏಕನಾಥ್ ಸಿಂಧೆಗೆ ಸಂಸದರನ್ನು ಉಳಿಸಿಕೊಳ್ಳುವ ಚಾಲೆಂಜ್

    30 ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದಿರುವ ಇಂಡಿಯಾ ಮೈತ್ರಿಕೂಟ

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಶುರುವಾಗಿದೆ. ಮೂಲಗಳ ಪ್ರಕಾರ.. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆಯ ಅನೇಕ ಸಂಸದರು ಉದ್ಧವ್ ಠಾಕ್ರೆ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆ ಏಳು ಸಂಸದರ ಪೈಕಿ ಅರ್ಧಕ್ಕೂ ಹೆಚ್ಚು ಸಂಸದರು ಉದ್ಧವ್ ಠಾಕ್ರೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. 48 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಬಿಜೆಪಿ 9, ಉದ್ದವ್ ಠಾಕ್ರೆಯ ಶಿವಸೇನೆ 9 (SHSUBT), ಎನ್​ಸಿಪಿ 8, ಶಿವಸೇನಾ ಎಸ್​ಹೆಚ್​ಎಸ್​ 7 ಹಾಗೂ ಇತರೆ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಇದನ್ನೂ ಓದಿ:ಮೋದಿಗೆ ಐದು ವರ್ಷ ಅಧಿಕಾರ ನಡೆಸೋದು ಹಗ್ಗದ ಮೇಲೆ ನಡೆದಷ್ಟೇ ಸವಾಲು.. ಯಾಕೆಂದರೆ..!

ವರದಿಗಳ ಪ್ರಕಾರ ಉದ್ಧವ್ ಠಾಕ್ರೆ INDIA ಒಕ್ಕೂಟ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆ ಗಂಭೀರವಾಗಿದ್ದಾರೆ. ಜೊತೆಗೆ ಕೆಲವು ತಿಂಗಳ ನಂತರ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ INIDA ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶಿಂಧೆ ಶಿವಸೆನೆಯ ನಾಯಕರಲ್ಲಿ ಆತಂಕ ಮೂಡಿಸಿದೆ. ಉದ್ಧವ್ ಠಾಕ್ರೆ ಅವರು ಶಿಂಧೆ ಅವರ ಸಂಸದರನ್ನು ಯಾವುದೇ ಕ್ಷಣದಲ್ಲಾದರೂ ಸೆಳೆಯಬಹುದು ಎನ್ನಲಾಗುತ್ತಿದೆ. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಶರದ್ ಪವಾರ್ ಜೆಡಿಯು ಮತ್ತು ಟಿಡಿಪಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಭದ್ರಕೋಟೆ ಎನಿಸಿದ್ದ ರಾಜ್ಯಗಳಲ್ಲೇ ಶಾಕ್.. ಬಿಜೆಪಿಗೆ ಹೊಡೆತ ಬಿದ್ದಿದ್ದು ಎಷ್ಟು ರಾಜ್ಯಗಳಲ್ಲಿ..?

ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಪಡೆದಿದೆ. ಆದರೆ ಹಲವು ರಾಜ್ಯಗಳಲ್ಲಿ ಎನ್‌ಡಿಎ ಮತ್ತು ಬಿಜೆಪಿಯ ಸಾಧನೆ ಅಷ್ಟೇನೂ ಉತ್ತಮವಾಗಿಲ್ಲ. ಆ ರಾಜ್ಯಗಳಲ್ಲಿ ಒಂದು ಮಹಾರಾಷ್ಟ್ರ. 48 ಲೋಕಸಭೆ ಕ್ಷೇತ್ರಗಳಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) 30 ಸ್ಥಾನಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ:ಚಾಂಪಿಯನ್ ತಂಡಕ್ಕೇ ಮುಣ್ಣು ಮುಕ್ಕಿಸಿದೆ ಐರ್ಲೆಂಡ್.. ಬೆರಳು ಕೊಟ್ರೆ ಅಂಗೈನೇ ನುಂಗುತ್ತೆ ಹುಷಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಾರಾಷ್ಟ್ರದಲ್ಲಿ GAME ON; ಉದ್ಧವ್ ಠಾಕ್ರೆ ಹಿಡಿತದಲ್ಲಿ CM ಏಕನಾಥ್ ಸಿಂಧೆ ಬಣದ ಶಿವಸೇನೆ ಸಂಸದರು..!

https://newsfirstlive.com/wp-content/uploads/2024/06/MAHARASTRA.jpg

Load More