Advertisment

Breaking News: ಬೆಳ್ಳಂಬೆಳಗ್ಗೆ ಕಳಂಕಿತ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಂಗಳೂರು, ಬಾಗಲಕೋಟೆ, ವಿಜಯಪುರದಲ್ಲಿ ಲೋಕಾಯುಕ್ತ ದಾಳಿ

author-image
Ganesh
Updated On
Breaking News: ಬೆಳ್ಳಂಬೆಳಗ್ಗೆ ಕಳಂಕಿತ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಂಗಳೂರು, ಬಾಗಲಕೋಟೆ, ವಿಜಯಪುರದಲ್ಲಿ ಲೋಕಾಯುಕ್ತ ದಾಳಿ
Advertisment
  • ಕೆ.ಆರ್.ಪುರಂ ತಹಶೀಲ್ದಾರ್ ನಿವಾಸದ ಮೇಲೆ ದಾಳಿ
  • ಈ ಹಿಂದೆ ಅಮಾನತು ಆಗಿದ್ದ ತಹಶೀಲ್ದಾರ್ ಅಜಿತ್ ರೈ
  • ಬಾಗಲಕೋಟೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ಮೇಲೆ ರೇಡ್

ಬಾಗಲಕೋಟೆ/ಬೆಂಗಳೂರು: ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದು, ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಗಳ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ 10 ಕಡೆ ಹಾಗೂ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಹಲವು ಭಾಗಗಳಲ್ಲಿ ದಾಳಿ ಮಾಡಿದ್ದಾರೆ.

Advertisment

[caption id="attachment_5020" align="aligncenter" width="800"]ಅಜಿತ್ ಅಜಿತ್[/caption]

ಬೆಂಗಳೂರಲ್ಲಿ ಯಾರ ನಿವಾಸದ ಮೇಲೆ ದಾಳಿ?

ಬೆಂಗಳೂರಿನ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿಗಳಿಕೆಯ ಆರೋಪದ ಮೇಲೆ ಒಟ್ಟು 10 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳು, ಹಣ ಹಾಗೂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಅಜಿತ್ ರೈ ಅಮಾನತು ಆಗಿದ್ದರು. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಬಿಲ್ಡರ್ ಹಾಗೂ ಕಂಪನಿಗಳಿಗೆ ಸಹಕಾರ ನೀಡಿದ್ದ ಅರೋಪದಲ್ಲಿ ಸರ್ಕಾರದ ಅಮಾನತು ಮಾಡಿತ್ತು.

ಬಾಗಲಕೋಟೆಯಲ್ಲಿ ಇಬ್ಬರು ಅಧಿಕಾರಿಗಳ ಮೇಲೆ ದಾಳಿ

ಬಾಗಲಕೋಟೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಬಾಗಲಕೋಟೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ಮತ್ತೋರ್ವ ಕೃಷಿ ಅಧಿಕಾರಿ ಕೃಷ್ಣ ಶಿರೂರ (ಅಸಿಸ್ಟೆಂಟ್ ಡೈರೆಕ್ಟರ್) ಮನೆ ಮೇಲೂ ದಾಳಿಯಾಗಿದೆ. ನಗರದ ವಿದ್ಯಾಗಿರಿಯಲ್ಲಿ ಇಬ್ಬರ ನಿವಾಸಗಳು ಇವೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment