/newsfirstlive-kannada/media/post_attachments/wp-content/uploads/2024/06/Chennai.jpg)
ಫೋನ್​ನಲ್ಲಿ ಮಾತನಾಡುತ್ತಾ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಬಸ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಯುವಕನನ್ನು ಬಿ ವಿನೋದ್​ ಕುಮಾರ್​ (22) ಎಂದು ಗುರುತಿಸಲಾಗಿದೆ.
ವಿನೋದ್​ ಕುಮಾರ್​ ತಿರುಚ್ಚಿಯ ತುರೈಯೂರ್​ನ ಹೂವಿನ ವ್ಯಾಪಾರಿಯಾಗಿದ್ದು, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್​ ಏರಿದ್ದಾನೆ. ಬಸ್​ ಏರುವಾಗ ಆತ ಫೋನ್​ನಲ್ಲಿ ಮಾತನಾಡುತ್ತಿದ್ದನು ಎಂದು ಪ್ರಯಾಣಿಕರು ಗಮನಿಸಿದ್ದಾನೆ.
ಪೆರಂಬೂರ್​ನ ಆಲತ್ತೂರ್​ ಬಳಿಕ ಅಡೈಕ್ಕಂಪಟ್ಟಿ ಬಳಿ ಬಸ್​ ಏರಿದ್ದ ವಿನೋದ್​ ಫೋನ್​ನಲ್ಲಿ ಮಾತನಾಡುತ್ತಲೇ ವೇಗವಾಗಿ ಚಲಿಸುತ್ತಿದ್ದ ಬಸ್​ನ ಫುಟ್​​ಬೋರ್ಡ್​​ಗೆ ಹೋಗಿ ಹೊರ ಜಿಗಿದಿದ್ದಾನೆ.
ಇದನ್ನೂ ಓದಿ: ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ
ಕೂಡಲೇ ವಿನೋದ್​ ಆತ್ಮಹತ್ಯೆ ಮಾಡಿರೋದನ್ನು ಕಂಡು ಚಾಲಕ ಬಸ್​ ನಿಲ್ಲಿಸಿದ್ದಾನೆ. ಆತನ ಬಳಿಕ ಓಡಿ ಹೋಗಿ ನೋಡಿದಾಗ ವಿನೋದ್​ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?
ಸ್ಥಳಕ್ಕೆ ಪಡಲೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆತನ ಫೋನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಯುವಕ ಪ್ರೇಮ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us