newsfirstkannada.com

ಲವ್, ಸೆಕ್ಸ್ ದೋಖಾ.. ಪ್ರೀತಿ ಅಂತ ನಂಬಿಸಿ ಕೈ ಕೊಟ್ಟ ಯೂಟ್ಯೂಬ್ ಸ್ಟಾರ್‌; ರೇಪ್ ಕೇಸ್ ದಾಖಲು

Share :

Published June 7, 2024 at 12:23pm

Update June 7, 2024 at 1:52pm

  ಮದುವೆ ಆಗ್ತೀನಿ ಅಂತ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ ಆರೋಪ

  ಈ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತೇನೆ ಎನ್ನುತ್ತಿದ್ದ ಯುವಕ

  ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಸಂಬಂಧ ದೂರು ದಾಖಲು

ಕೊಪ್ಪಳ: ಮದುವೆ ಆಗ್ತೀನಿ ಅಂತ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪ ಯೂಟ್ಯೂಬ್ ಸ್ಟಾರ್ ರವಿರಾಜ್ ಮೇಲೆ ಕೇಳಿ ಬಂದಿದೆ. ಆರೋಪಿಸಿರುವ ಯುವತಿಯು ಕೊಪ್ಪಳದ ಕಾರಟಗಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಸಂಬಂಧ ದೂರು ದಾಖಲು ಮಾಡಿದ್ದಾರೆ. ಯೂಟ್ಯೂಬ್ ಸ್ಟಾರ್ ರವಿರಾಜ್ ಅವರ ಲವ್, ಸೆಕ್ಸ್ ದೋಖಾ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಯೂಟ್ಯೂಬ್ ಸ್ಟಾರ್ ರವಿರಾಜ್ ಅವರು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಶಾರ್ಟ್ ಫಿಲ್ಮ್ ಮಾಡುತ್ತಿದ್ದರು. ಆದ್ರೀಗ ರವಿರಾಜ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು ಮಾಡಲಾಗಿದೆ. ಪ್ರೀತಿ ಅಂತ ನಂಬಿಸಿ ಕೈ ಕೊಟ್ಟ ಹಿನ್ನೆಲೆಯಲ್ಲಿ ಯುವತಿ ಪಾಲಕರೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ಕೀಳಲು ಮರವೇರಿದ ಮಗ.. ಕಾಲು ಜಾರಿ ಬಿದ್ದು ಸಾವು 

ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರಂತೆ. ಈ ಹಿನ್ನೆಲೆಯಲ್ಲಿ ನೊಂದ ಯುವತಿ ಮತ್ತು ಕುಟುಂಬಸ್ಥರು ಕಾರಟಗಿ ಪೊಲೀಸ್ ಠಾಣೆ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿದ್ದರು. ದೂರು ದಾಖಲಿಸಲು ಪಟ್ಟು ಹಿಡಿದ ಯುವತಿ, ಆರೋಪಿ ರವಿರಾಜ್ ಅವರು ಸತತ ಎರಡು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಆರೋಪಿ ರವಿರಾಜ್ ಹಾಗೂ ದೂರು ನೀಡಿರುವ ಯುವತಿ

ಯೂಟ್ಯೂಬ್ ಸ್ಟಾರ್ ಲವ್ ಮಾಡುವ ವೇಳೆ ನನ್ನ ಖಾಸಗಿತನದ ವಿಡಿಯೋ ಮಾಡ್ಕೊಂಡು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾನೆ. ಮದುವೆ ಆಗೋದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ನನ್ನ ವಿಡಿಯೋ ಇಟ್ಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಆರೋಪಿ ಯುವಕನನ್ನು ಅರೆಸ್ಟ್ ಮಾಡಿ ನನ್ನ ಜೊತೆ ಮದುವೆ ಮಾಡಿಸಿ ಎಂದು ನೊಂದ ಯುವತಿ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಟ್ರಕ್ಕಿಂಗ್​ ಹೋದವರ ದುರಂತ ಸಾವು.. ಇಂದು ಬೆಂಗಳೂರಿಗೆ ಬರಲಿವೆ 9 ಜನರ ಮೃತದೇಹಗಳು 

ಉಲ್ಟಾ ಹೊಡೆದ ಯೂಟ್ಯೂಬ್ ಸ್ಟಾರ್! 
ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಲವ್ ಸೆಕ್ಸ್ ದೋಖಾ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ಯೂಟ್ಯೂಬ್ ಸ್ಟಾರ್ ರವಿರಾಜ್ ಅವರು ಯುವತಿಯಿಂದಲೇ ಯುವಕನಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಸೆಲ್ಫಿ ವಿಡಿಯೋ ಮಾಡಿರುವ ಯುವಕ ತನಗಾದ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ರವಿರಾಜ್ ನನಗೆ ಯುವತಿಯಿಂದ ಅನ್ಯಾಯವಾಗಿದೆ ಎಂದಿದ್ದಾನೆ.

ಅತ್ಯಾಚಾರ ಪ್ರಕರಣದ ಆರೋಪಿ ರವಿರಾಜ್, ರವಿರಾಜ್ ಶ್ರೀ ಪಲಚರಿ ಸಿನಿ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್ ಡೈರೆಕ್ಟರ್ ಆಗಿದ್ದರು. ಸದ್ಯ ಈ ಯುವಕನ ಮೇಲೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲವ್, ಸೆಕ್ಸ್ ದೋಖಾ.. ಪ್ರೀತಿ ಅಂತ ನಂಬಿಸಿ ಕೈ ಕೊಟ್ಟ ಯೂಟ್ಯೂಬ್ ಸ್ಟಾರ್‌; ರೇಪ್ ಕೇಸ್ ದಾಖಲು

https://newsfirstlive.com/wp-content/uploads/2024/06/Koppal-Love-Sex-Case.jpg

Load More