ಅರ್ಧ ಶತಕ ಮೀರಿಸಿದಾಟವಾಡಿದ ಪಂಜಾಬ್ ನಾಯಕ
ಲಕ್ನೋಗೆ ತಲೆನೋವಾಗಿ ಪರಿಣಮಿಸಿದ ಗಬ್ಬರ್ ಸಿಂಗ್
ನಿಕೋಲಾಸ್ ನಾಯಕತ್ವದ ಲಕ್ನೋ ತಂಡಕ್ಕೆ 21 ರನ್ಗಳ ಭರ್ಜರಿ ಜಯ
ಶಿಖರ್ ಧವನ್ ಒಂಟಿ ಹೋರಾಟ ವ್ಯರ್ಥವಾಗಿದೆ. ಅರ್ಧ ಶತಕ ಮೀರಿಸಿದಾಟವಾಡಿ ಲಕ್ನೋಗೆ ತಲೆನೋವಾಗಿ ಪರಿಣಮಿಸಿದ್ದ ಗಬ್ಬರ್ ಸಿಂಗ್ ತಂಡ 21 ರನ್ಗೆ ಸೋತಿದೆ.
ತವರಿನಲ್ಲೇ ಟಾಸ್ ಗೆದ್ದು ಬ್ಯಾಟಿಂಗ್ಗೆ ಆಯ್ದುಕೊಂಡ ಲಕ್ನೋ ಅದ್ಭುತ ಆಟವಾಡಿದೆ. ತನ್ನ ಎದುರಾಳಿ ಪಂಜಾಬ್ಗೆ 199 ರನ್ಗಳ ದೊಡ್ಡ ಟಾರ್ಗೆಟ್ ನೀಡಿತ್ತು.
ಆರಂಭಿಕ ಆಟಗಾರರಾಗಿ ಕ್ವಿಂಟನ್ ಡಿ ಕಾಕ್ ಜೊತೆಗೆ ಮೈದಾನಕ್ಕಿಳಿದ ನಾಯಕ ಕೆ. ಎಲ್ ರಾಹುಲ್ ದೊಡ್ಡ ರನ್ ಕಲೆ ಹಾಕುವ ಗುರಿ ಹೊಂದಿದ್ದರು. ಅದರಲ್ಲೂ ಡಿ ಕಾಕ್ ಅಬ್ಬರ ಬ್ಯಾಟಿಂಗ್ ಪಂಜಾಬ್ ಬೆಚ್ಚಿ ಬಿದ್ದಿತ್ತು. 38 ಎಸೆತಕ್ಕೆ 5 ಬೌಂಡರಿ ಮತ್ತು 2 ಸಿಕ್ಸ್ ಹೊಡೆಯವ ಮೂಲಕ 54 ರನ್ ಬಾರಿಸಿದ್ದರು. ಇವರ ಜೊತೆಯಾಟಗಾರ ರಾಹುಲ್ 9 ಎಸೆತವನ್ನು ಎದರಿಸಿ 1 ಬೌಂಡರಿ ಮತ್ತು 1 ಸಿಕ್ಸ್ ಬಾರಿಸುವ ಮೂಲಕ 15 ರನ್ ಬಾರಿಸಿದರು. ಆದರೆ ಡಿ ಕಾಕ್ ಅರ್ಷದೀಪ್ ಎಸೆತಕ್ಕೆ ಬ್ಯಾಟ್ ಬೀಸಲು ಹೋಗಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಇತ್ತ ರಾಹುಲ್ ಕೂಡ ಜಾನ್ ಬೈರ್ಸ್ಟೋವ್ಗೆ ಕ್ಯಾಚ್ ನೀಡಿ ಪೆವಿಲಿಯನ್ನತ್ತ ಸಾಗಿದರು.
ಲಕ್ನೋ ಹೈ-ಲೈಟ್ಸ್
ಕ್ವಿಂಟನ್ ಡಿ ಕಾಕ್- 54 ರನ್
ನಿಕೋಲಾಸ್ ಪೂರನ್- 42 ರನ್
ಕೃನಾಲ್ ಪಾಂಡ್ಯ – 43 ರನ್
ನಂತರ ಬಂದ ದೇವದತ್ತ ಪಡಿಕಲ್ ಮೇಲೆ ನಂಬಿಕೆ ಇದ್ದರೂ ಸಹ ಸ್ಯಾಮ್ ಕರ್ರಾನ್ ಎಸೆತಕ್ಕೆ ಶಿಖರ್ ಧವನ್ಗೆ ಕ್ಯಾಚ್ ನೀಡಿ ಹೊರನಡೆದರು. 6 ಎಸೆತವನ್ನು ಎದುರಿಸಿದ ಇವರು 2 ಬೌಂಡರಿ ಜೊತೆಗೆ 9 ರನ್ ಬಾರಿಸಿದರು.
ಮಾರ್ಕಸ್ ಸ್ಟೋಯಿನಿಸ್ ಕೂಡ 12 ಎಸೆತದಲ್ಲಿ 2 ಸಿಕ್ಸ್ ಬಾರಿಸಿ 19 ರನ್ ಕಲೆಹಾಕುವ ಮೂಲಕ ರಾಹುಲ್ ಚಾಹರ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಿಕೋಲಾಸ್ ಪೂರನ್ ಮಾತ್ರ ನಾಯಕನಾಗಿ ತಂಡಕ್ಕೆ ಕೊಂಚ ರನ್ ಸಂಪಾದಿಸಲು ಮುಂದಾದರು. 21 ಎಸೆತಕ್ಕೆ 3 ಸಿಕ್ಸ್, 3 ಫೋರ್ ಬಾರಿಸಿ 42 ರನ್ಗಳನ್ನು ಬಾರಿಸಿದರು.
ಕೃನಾಲ್ ಪಾಂಡ್ಯ 18 ಎಸೆತದಲ್ಲಿ 41 ರನ್ ಬಾರಿಸಿದ್ದಾರೆ. ಅದರಲ್ಲಿ 4 ಬೌಂಡರಿ ಮತ್ತು 2 ಸಿಕ್ಸ್ ಬಾರಿಸಿದ್ದಾರೆ. ಇನ್ನು ಆಯುಷ್ ಬದೋನಿ 8 ರನ್ ಬಾರಿಸಿದರೆ. ಅತ್ತ ರವಿ ಬಿಷ್ಮೋಯಿ ಸೊನ್ನೆ ಸುತ್ತಿದ್ದಾರೆ. ಮೋಹಿಶ್ ಕುಮಾರ್ ಕೂಡ 2 ರನ್ ಬಾರಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಕ್ವಿಂಟನ್ ಡಿಕಾಕ್ ಅರ್ಧ ಶತಕ ಬಾರಿಸಿದರೆ, ನಾಯಕ ನಿಕೊಲಾಸ್ ಪೂರನ್ ಮತ್ತು ಕೃಣಾಲ್ ಪಾಂಡ್ಯ ಅದ್ಭುತವಾಗಿ ಆಡಿದ್ದಾರೆ.
ಅತ್ತ ಪಂಬಾಜ್ ವೇಗಿಗಳ ದಾಳಿ ಬಗ್ಗೆ ಗಮನಿಸುವುದಾದರೆ, ಸ್ಯಾಮ್ ಕರ್ರಾನ್ 3 ವಿಕಟ್ ಕಿತ್ತರೆ, ಅರ್ಷದೀಪ್ 2, ರಬಾಡ ಮತ್ತು ರಾಹುಲ್ ಚಾಹರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ರಿಲೇಶನ್ಶಿಪ್ನಲ್ಲಿದ್ದೇನೆ ಎಂದ ವಿಜಯ್ ದೇವರಕೊಂಡ! ಯಾರ ಜೊತೆಗೆ ಗೊತ್ತಾ?
ಪಂಜಾಬ್ ಹೈ-ಲೈಟ್ಸ್
ಶಿಖರ್ ಧವನ್- 70 ರನ್
ಜಾನಿ ಬೈರ್ ಸ್ಟೋವ್- 42 ರನ್
ಲಕ್ನೋ ಟಾರ್ಗೆಟ್ ಬೆನ್ನಟ್ಟಿದ ಶಿಖರ್ ಧವನ್ ಮತ್ತು ಜಾನಿ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದರು. ಶಿಖರ್ 50 ಎಸೆತಕ್ಕೆ 70 ರನ್ ಬಾರಿಸಿದರೆ, ಇತ್ತು ಬೈರ್ ಸ್ಟೋವ್ 22 ಎಸೆತಕ್ಕೆ 42 ರನ್ ಬಾರಿಸಿದರು. ಇನ್ನುಳಿದ ಆಟಗಾರರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ತಂಡವನ್ನು ಜಯದಡ ಸೇರಲು ವಿಫಲರಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ